ಪಾರುಗೆ ಅಲ್ಲ ಪ್ರೇಕ್ಷಕರಿಗೂ ಶಾಕ್ ನೀಡಿದೆ ಅಖಿಲಾಂಡೇಶ್ವರಿಯ ಹೊಸ ನಿರ್ಧಾರ: ಈ ಟ್ವಿಸ್ಟ್ ಊಹೆ ಮಾಡಿರ್ಲಿಲ್ಲ!!

Entertainment Featured-Articles News

ಕನ್ನಡ ಕಿರುತೆರೆಯಲ್ಲಿ ಟಾಪ್ ಧಾರಾವಾಹಿಗಳ ಸ್ಪರ್ಧೆ ಇತ್ತೀಚಿಗೆ ಬಹಳ ಜೋರಾಗಿ ನಡೆದಿದೆ. ಎಲ್ಲಾ ಧಾರಾವಾಹಿಗಳು ಸಹಾ ರೋಚಕ ತಿರುವುಗಳೊಂದಿಗೆ ಪ್ರೇಕ್ಷಕರನ್ನು ಕುತೂಹಲದ ತುತ್ತತುದಿಯಲ್ಲಿ ಕೂರಿಸಿ,‌ ರೋಚಕತೆಯ ಉತ್ತುಂಗದಲ್ಲಿ ಪ್ರಸಾರವಾಗುತ್ತಿವೆ. ಹೀಗೆ ಹೊಸ ಹೊಸ ಟ್ವಿಸ್ಟ್ ಗಳ ಮೂಲಕ ರಂಜಿಸುತ್ತಿರುವ ಧಾರಾವಾಹಿಗಳಲ್ಲಿ ಪಾರು ಕೂಡಾ ಒಂದಾಗಿದೆ. ‌ಪಾರು ಅರಸನ ಕೋಟೆಯ ಸೊಸೆಯಾಗಿದ್ದೇ ಒಂದು ರೋಚಕ ಘಟ್ಟವಾಗಿತ್ತು. ಅದಾದ ನಂತರ ಅಖಿಲಾಂಡೇಶ್ವರಿಯು ಪಾರುವನ್ನು ಯಾವುದೇ ಕಾರಣಕ್ಕೂ ಸೊಸೆ ಎಂದು ಒಪ್ಪಿಕೊಳ್ಳಲು, ಸ್ವೀಕರಿಸಲು ಸಿದ್ಧವಾಗಲೇ ಇಲ್ಲ.

ಅದಾದ ನಂತರ ವೀರಯ್ಯ ಅವರು ನೀಡಿದ ಸಲಹೆಯ ಮೇರೆಗೆ ಅಖಿಲಾಂಡೇಶ್ವರಿ ಪಾರುಗೆ ತನ್ನ ಸೊಸೆಯಾಗುವ ಅರ್ಹತೆ ಹಾಗೂ ಯೋಗ್ಯತೆ ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಲು ಹೊಸ ಟಾಸ್ಕ್ ಗಳನ್ನು ನೀಡುತ್ತಾರೆ. ಆಫೀಸಿಗೆ ಕರೆದುಕೊಂಡು ಹೋಗಿ ಎಲ್ಲರ ಮುಂದೆ ಪಾರು ಅನರ್ಹಳು ಎಂದು ತೋರಿಸುತ್ತಾರೆ. ಆದರೆ ಮನೆಯವರು ಇದನ್ನು ವಿ ರೋ ಧಿ ಸಿದಾಗ ಪಾರು ಗೆ ಹಣ ನೀಡಿ ಮನೆಯ ತಿಂಗಳ ಬಜೆಟ್ ನಿಭಾಯಿಸುವ ಟಾಸ್ಕ್ ನೀಡುತ್ತಾರೆ.

ಪಾರು ಮನೆಯನ್ನು ನಿಭಾಯಿಸಲು ಯಾವುದೇ ತೊಂದರೆ ಆಗಬಾರದು ಎಂದು ಮನೆ ಮಂದಿಯೆಲ್ಲಾ ಸಹಾಯ ಮಾಡುತ್ತಾರೆ. ಆದರೆ ದಾಮಿನಿ ಮಾತ್ರ ಪಾರುವನ್ನು ಹೇಗಾದರೂ ಮಾಡಿ ಟಾಸ್ಕ್ ನಲ್ಲಿ ಸೋಲುವ ಹಾಗೆ ಮಾಡಲು ತನ್ನೆಲ್ಲಾ ಪ್ರಯತ್ನವನ್ನು ಮಾಡುವುದರಲ್ಲಿ ತನ್ನ 100% ಶ್ರಮವನ್ನು ಹಾಕುತ್ತಾರೆ. ಈಗ ಇವೆಲ್ಲವುಗಳ ನಡುವೆಯೇ ಮತ್ತೊಂದು ಹೊಸ ಟ್ವಿಸ್ಟ್ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದೆ. ಸೀರಿಯಲ್ ನ ಈ ಹೊಸ ಟ್ವಿಸ್ಟ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದೆ.

ಹೌದು, ಪಾರುವಿನಲ್ಲೊಂದು ಹೊಸ ತಿರುವು ಪ್ರೇಕ್ಷಕರ ಮುಂದೆ ಬರಲಿದೆ. ಇಷ್ಟು ಕ್ಕೂ ಈ ಜೊಸ ಟ್ವಿಸ್ಟ್ ಏನಂತೀರಾ?? ಇಲ್ಲಿದೆ ಉತ್ತರ. ಪಾರುವಿನಲ್ಲಿ ನಡೆದ ಹೊಸ ಬೆಳವಣಿಗೆಯೊಂದರಲ್ಲಿ ಅಖಿಲಾಂಡೇಶ್ವರಿ ತಾನು ಅರಸನ ಕೋಟೆಯನ್ನು ಮಾತ್ರವೇ ಅಲ್ಲ, ಪಾರುವಿನಂತೆ ಆಕೆ ಮಾಡುವ ಕೆಲಸಗಳನ್ನು ತಾನು ಸಮರ್ಥವಾಗಿ ನಿಭಾಯಿಸಿ ತೋರಿಸುತ್ತೇನೆ ಎನ್ನುವ ಸವಾಲೊಂದನ್ನು ಹಾಕಿದ್ದಾರೆ. ತಾನು‌ ಮನೆ ಕೆಲಸದವಳ ಪಾತ್ರವನ್ನು‌ ಸಹಾ ಸಮರ್ಥವಾಗಿ ನಿಭಾಯಿಸಬಲ್ಲೇ ಎನ್ನುವುದನ್ನು ಸಾಬೀತು ಮಾಡಲು ಮುಂದಾಗಿದ್ದಾರೆ ಅಖಿಲಾಂಡೇಶ್ವರಿ.

ಇನ್ನು ಮುಂದೆ ಪಾರ್ವತಿ ನನ್ನ ಸ್ಥಾನದಲ್ಲಿ ಇರಲಿ, ನಾನು ಅವಳ ಜಾಗದಲ್ಲಿದ್ದು, ಅವಳು ಮಾಡುವ ಎಲ್ಲಾ ಕೆಲಸವನ್ನು ನಿಭಾಯಿಸಿ ತೋರಿಸುವ ಸವಾಲನ್ನು ಹಾಕಿರುವ ಅಖಿಲಾಂಡೇಶ್ವರಿ ಈಗ ಪಾರುವಿನ ಗೆಲುವಿನ ಹಾದಿಯನ್ನು ಇನ್ನಷ್ಟು ಕಠಿಣ ಮಾಡಲು ಹೊರಟಂತೆ ಇದೆ. ಪಾರು ಎಲ್ಲಾ ಸವಾಲುಗಳನ್ನು ಗೆದ್ದು ತಾನು ಅರಸನ ಕೋಟೆಗೆ ಸಮರ್ಥ ಸೊಸೆ ಎಂದು ಸಾಬೀತು ಮಾಡ್ತಾಳಾ?? ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *