ಪಾನ್ ಮಸಾಲ ಜಾಹೀರಾತು ಮಾಡಲ್ಲ: ಬಹುಕೋಟಿ ಡೀಲ್ ಗೆ No ಎಂದ ರಾಕಿಂಗ್ ಸ್ಟಾರ್ ಯಶ್ !!

Written by Soma Shekar

Published on:

---Join Our Channel---

ಕೆಜಿಎಫ್ ಸಿನಿಮಾ ನಂತರ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ರವರು ಪ್ಯಾನ್ ಇಂಡಿಯಾ ನಟ ಎಂದು ಗುರ್ತಿಸಿಕೊಂಡಿದ್ದಾರೆ. ಅದರಲ್ಲೂ ಕೆಜಿಎಫ್ 2 ಸಿನಿಮಾ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಕೆಜಿಎಫ್ 2 ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಬಾಲಿವುಡ್ ಅಂಗಳದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಕೆಜಿಎಫ್ 2 ಸಿನಿಮಾದ ದೊಡ್ಡ ಯಶಸ್ಸಿನ ಸಂಭ್ರಮದಲ್ಲಿ ಇರುವಂತಹ ನಟ ಯಶ್ ಅವರು ಇದೀಗ ಪ್ರಮುಖ ನಿರ್ಧಾರವನ್ನು ಮಾಡಿದ್ದು, ಅವರ ಈ ನಿರ್ಧಾರದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ಪಾನ್ ಮಸಾಲ ಮತ್ತು ಏಲಕ್ಕಿ ಬ್ರ್ಯಾಂಡ್ ನ ಬಹುಕೋಟಿ ಎಂಡಾರ್ಸ್ಮೆಂಟ್ ಅನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವ ವಿಷಯ ಹೊರಬಂದಿದೆ. ಈ ವಿಷಯವನ್ನು ನಟ ಯಶ್ ಅವರು ಎಂಡಾರ್ಸ್ಮೆಂಟ್ ಡೀಲ್ ಗಳನ್ನು ನಿರ್ವಹಿಸುವ ಎಕ್ಸಿಡ್ ಎಂಟರ್ಟೈನ್ಮೆಂಟ್ ಸ್ಪಷ್ಟನೆಯನ್ನು ನೀಡಿದೆ. ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಆಗಿರುವ ಎಕ್ಸೀಡ್ ಯಶ್ ಅವರ ಎಂಡಾರ್ಸ್ಮೆಂಟ್ ಡೀಲ್ ಗಳನ್ನು ನಿಭಾಯಿಸುತ್ತಿದ್ದು ಇದೀಗ ಈ ವಿಷಯವನ್ನು ಹಂಚಿಕೊಂಡಿದೆ.

ಎಕ್ಸೀಡ್ ಎಂಟರ್ಟೈನ್ಮೆಂಟ್ ಟ್ಯಾಲೆಂಟ್ ಮತ್ತು ನ್ಯೂ ವೆಂಚರ್ಸ್ ನ ಮುಖ್ಯಸ್ಥರಾಗಿರುವ ಅರ್ಜುನ್ ಬ್ಯಾನರ್ಜಿ ಅವರು, ಪಾನ್ ಮಸಾಲ ಹಾಗೂ ಅಂತಹ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಜೀವಕ್ಕೆ ಅಪಾಯ ಎದುರಾಗುತ್ತದೆ. ಅಭಿಮಾನಿಗಳ ಹಿತದೃಷ್ಟಿಯಿಂದ ವೈಯಕ್ತಿಕವಾಗಿ ಲಾಭದಾಯಕವಾಗಿದ್ದ ಒಪ್ಪಂದವನ್ನು ನಟ ಯಶ್ ತಿರಸ್ಕರಿಸಿದ್ದಾರೆ ಎನ್ನುವ ವಿಚಾರವನ್ನು ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಕೂಡಾ ಇಂತಹದೇ ಒಂದು ನಿರ್ಧಾರವನ್ನು ತೆಗೆದುಕೊಂಡು, ತಾನು ತಂಬಾಕು ಸಹಿತ ಯಾವುದೇ ಉತ್ಪನ್ನವನ್ನು ಬಳಸುವುದಿಲ್ಲ, ಅಭಿಮಾನಿಗಳು ಅದನ್ನು ಸೇವಿಸಬಾರದು. ಅದು ಒಂದು ವ್ಯಸನವಾಗಿ ಪರಿಣಮಿಸುತ್ತದೆ ಎಂದು ತಂಬಾಕು ಜಾಹೀರಾತನ್ನು ನಿರಾಕರಿಸಿದರು.

ದಕ್ಷಿಣದ ನಟ ಈ ನಿರ್ಧಾರ ಮೆಚ್ಚುಗೆಗೆ ಪಾತ್ರವಾಗುವಾಗಲೇ, ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳು ಕೇಳಿ ಬಂದ ಮೇಲೆ ಅಕ್ಷಯ್ ಕುಮಾರ್ ಅವರು ತಾನು ಅಂತಹದೊಂದು ಜಾಹೀರಾತು ಮಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದು ಮಾತ್ರವೇ ಅಲ್ಲದೇ ಇನ್ನು ಮುಂದೆ ಅಂತಹ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎನ್ನುವ ಮಾತನ್ನು ಸಹ ಹೇಳಿದ್ದರು.

Leave a Comment