ಪಾತಾಳಕ್ಕೆ ಕುಸಿದ ಬಿಗ್ ಬಾಸ್ ಟಿ ಆರ್ ಪಿ: ಬಿಗ್ ಬಾಸ್ ಚಾರ್ಮ್ ಕುಗ್ಗಿ ಹೋಯ್ತಾ? ಕಾರಣಗಳು ಹೀಗಿವೆ

Entertainment Featured-Articles Movies News

ಬಿಗ್ ಬಾಸ್ ಶೋ ನ ಹೊಸ ಸೀಸನ್ ಒಂದು ಯಾವುದೇ ಭಾಷೆಯಲ್ಲಿ ಆರಂಭವಾದರೂ ಸಹಾ ಅಲ್ಲೊಂದು ದೊಡ್ಡ ಕ್ರೇಜ್ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಮನೆಗೆ ಎಂಟ್ರಿ ನೀಡುವ ಸೆಲೆಬ್ರಿಟಿಗಳಾಗಿರುತ್ತಾರೆ. ಸಾಮಾನ್ಯವಾಗಿ ಖ್ಯಾತ ನಾಮರನ್ನೇ ಬಿಗ್ ಬಾಸ್ ಮನೆಯೊಳಕ್ಕೆ ಸ್ಪರ್ಧಿಗಳಾಗಿ ಎಂಟ್ರಿ ನೀಡಲಾಗುತ್ತದೆ. ಅಲ್ಲದೇ ಕೆಲವೊಂದು ವಿ ವಾ ದ ಗಳ ಕಾರಣದಿಂದಲೂ ಹೊರಗೆ ಸದ್ದು, ಸುದ್ದಿ ಮಾಡಿದವರನ್ನು ಸಹಾ ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸುವ ಕಾರಣದಿಂದಲೇ ಬಿಗ್ ಬಾಸ್ ಕುತೂಹಲವನ್ನು ಮೂಡಿಸುತ್ತದೆ. ಎಲ್ಲಾ ಭಾಷೆಗಳಲ್ಲಿ ಸಹಾ ಬಿಗ್ ಬಾಸ್ ಅನ್ನು ನೋಡುವ ದೊಡ್ಡ ಮಟ್ಟದ ಪ್ರೇಕ್ಷಕರು ಇದ್ದಾರೆ. ಅಲ್ಲದೇ ಟಿ ಆರ್ ಪಿ ವಿಚಾರದಲ್ಲೂ ಸಹಾ ಬಿಗ್ ಬಾಸ್ ಬೇರೆ ಶೋ‌ಗಳನ್ನು ಹಿಂದಿಕ್ಕುವುದು ಸಹಾ ವಾಸ್ತವ.

ತೆಲುಗು ನಲ್ಲಿ ಈ ಬಾರಿ ಬಿಗ್ ಬಾಸ್ ಸೀಸನ್ ಆರು ಸೆಪ್ಟೆಂಬರ್‌ 4 ರಂದು ಭರ್ಜರಿಯಾಗಿ ಆರಂಭವಾಗಿದೆ. ಎಂದಿನಂತೆ ನಿರೂಪಕ, ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರು ಸ್ಪರ್ಧಿಗಳನ್ನು ಬಹಳ ಖುಷಿಯಿಂದ ಸ್ವಾಗತಿಸಿ, ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಿದ್ದಾರೆ. ಬಹಳ ಹುಮ್ಮಸ್ಸಿನಿಂದ ಶೋ ಗೆ ಚಾಲನೆ ದೊರೆತಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಹೊಸ ಸೀಸನ್ ಒಂದು ಆರಂಭವಾಗಿದೆ ಎಂದಾಗ ಅದರ ಗ್ರ್ಯಾಂಡ್ ಓಪನಿಂಗ್ ಶೋ ಗೆ ಹೆಚ್ಚಿನ ಬೇಡಿಕೆ ಇರುತ್ತದೆ ಹಾಗೂ ಟಿ ಆರ್ ಪಿ ಕೂಡಾ ದೊಡ್ಡ ಮಟ್ಟದಲ್ಲಿ ಬರುತ್ತದೆ. ಆದರೆ ಈ ಬಾರಿ ತೆಲುಗಿನ ಬಿಗ್ ಬಾಸ್ ಶೋ ಗ್ರ್ಯಾಂಡ್ ಓಪನಿಂಗ್ ಇಂತಹ ಎಲ್ಲಾ ನಿರೀಕ್ಷೆಗಳಿಗೂ ತಣ್ಣೀರನ್ನು ಎರಚಿದೆ.

ಹೌದು, ತೆಲುಗು ಬಿಗ್ ಬಾಸ್ ಗೆ ಮೊದಲ ದಿನವೇ ತೃಪ್ತಿದಾಯಕ ಎನಿಸುವ ಮಟ್ಟಕ್ಕೆ ಟಿ ಆರ್ ಪಿ ಪಡೆಯುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಇದ್ದಕ್ಕಿದ್ದ ಹಾಗೆ ಹೀಗೆ ಬಿಗ್ ಬಾಸ್ ಶೋ ಗೆ ಟಿ ಆರ್ ಪಿ ಕುಸಿಯಲು ಕಾರಣವೇನು ? ಎನ್ನುವ ಹೊಸ ಚರ್ಚೆಯೊಂದು ಈಗ ಆರಂಭವಾಗಿದೆ. ಬಿಗ್ ಬಾಸ್ ನ ಈ ಪರಿಸ್ಥಿತಿಗೆ ಒಂದಷ್ಟು ಕಾರಣಗಳನ್ನು ಸಹಾ ವಿವರಿಸಲಾಗಿದೆ. ಈಗ ಪ್ರಸ್ತುತ ನೀಡಲಾಗಿರುವ ಕಾರಣಗಳಲ್ಲಿ ಒಂದು ಖ್ಯಾತ ನಾಮರು ಬರುತ್ತಿದ್ದ ಶೋ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹೆಸರು ಮಾಡಿರುವವರನ್ನು ಸಹಾ ಮನೆಯೊಳಕ್ಕೆ ಬಿಡಲಾಗುತ್ತಿರುವುದು ಒಂದು ವರ್ಗದ ಜನರ ಜೊತೆ ಶೋ ಕನೆಕ್ಟ್ ಆಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಹೀಗೆ ಸೋಶಿಯಲ್ ಮೀಡಿಯಾಗಳ ಮುಖಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿರುವುದರಿಂದ ದಿನೇ ದಿನೇ ಬಿಗ್ ಬಾಸ್ ನ ಚಾರ್ಮ್ ತಗ್ಗುತ್ತಿದೆ ಎಂದು ಹೇಳಲಾಗಿದೆ. ತೆಲುಗಿನಲ್ಲಿ ಐದು ಯಶಸ್ವಿ ಸೀಸನ್ ಮುಗಿಸಿರುವ ಬಿಗ್ ಬಾಸ್ ಆರನೇ ಸೀಸನ್ ನ ಆರಂಭದಲ್ಲೇ ಬೇಸರ ತರಿಸಿದೆ. ಪ್ರತಿಬಾರಿ 15+ ಇರುತ್ತಿದ್ದ ಟಿ ಆರ್ ಪಿ ಈ ಬಾರಿ 8.86 ಗೆ ಕುಸಿದಿದೆ ಎನ್ನಲಾಗಿದೆ. ಕೆಲವರು ಅಂದು ಏಷ್ಯಾ ಕಪ್ ನಲ್ಲಿ ಭಾರತ, ಪಾಕಿಸ್ತಾನ ಕ್ರಿಕೆಟ್ ಇದ್ದುದ್ದರಿಂದ ಜನರು ಕ್ರಿಕೆಟ್ ಕಡಗೆ ಆದ್ಯತೆಯನ್ನು ನೀಡಿದ್ದರಿಂದ, ಬಿಗ್ ಬಾಸ್ ಕಡೆಗೆ ಗಮನ ನೀಡಿಲ್ಲ ಎನ್ನಲಾಗುತ್ತಿದೆ. ಏನೇ ಆದರೂ ಬಿಗ್ ಬಾಸ್ ಗೆ ಸಿಕ್ಕ ನೀರಸ ಪ್ರತಿಕ್ರಿಯೆ ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published.