ಜೀವನದಲ್ಲಿ ಎದುರಾದ ನೋವನ್ನು ನುಂಗಿ, ಮನೆಗೆ ಬಂದ ಹೊಸ ಅತಿಥಿ ತಮ್ಮ ಮುದ್ದು ಮಗನ ಲಾಲನೆ ಪಾಲನೆ ಮಾಡುತ್ತಾ ಮತ್ತೆ ನಗುವನ್ನು ಜೀವನಕ್ಕೆ ಆಹ್ವಾನ ನೀಡಿದ್ದ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಇದೀಗ ಶಾಲಾ ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಪ್ರಾರಂಭಿಸಿದ್ದಾರೇನು? ಎನ್ನುವ ಪ್ರಶ್ನೆಯೊಂದು ಅನೇಕರಿಗೆ ಮೂಡಿದೆ. ಇದಕ್ಕೆ ಕಾರಣ ಏನಂತೀರಾ? ಇದಕ್ಕೆ ಕಾರಣವಾಗಿದ್ದು ಮೇಘನಾ ರಾಜ್ ಅವರು ಮಕ್ಕಳಿಗೆ ವಿಜ್ಞಾನದ ಪಾಠವನ್ನು ಹೇಳಿ ಕೊಡುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಇದನ್ನು ನೋಡಿದ ಜನರಿಗೆ ಸಹಜವಾಗಿಯೇ ಮೇಘನಾ ಅವರು ಟೀಚರ್ ಆದ್ರ ಎನ್ನುವ ಪ್ರಶ್ನೆ ಮೂಡಿದೆ. ವೀಡಿಯೋ ನೋಡಿದಾಗ ಮೇಘನಾ ಅವರು ಪಾಠ ಮಾಡುವುದು ಕಂಡಿದೆಯಾದರೂ, ಅವರು ಹೀಗೆ ವಿಜ್ಞಾನದ ವಿಷಯವೊಂದನ್ನು ವಿವರಿಸುವ ಹಿಂದೆ ಕಾರಣ ಖಂಡಿತ ಇದೆ.
ಈಗ ಮೇಘನಾ ರಾಜ್ ಅವರು ಟೀಚರ್ ಆಗಿ ಪಾಠ ಮಾಡುತ್ತಿರುವ ವೀಡಿಯೋ ವೈರಲ್ ಆದ ಮೇಲೆ ಅವರ ಅಭಿಮಾನಿಗಳಂತೂ ಬಹಳ ದಿನಗಳ ನಂತರ ತಮ್ಮ ಅಭಿಮಾನ ನಟಿಯನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಅಲ್ಲದೇ ನೆಟ್ಟಿಗರು ಸಹಾ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಹಾಗಾದ್ರೆ ಮೇಘನಾ ರಾಜ್ ಅವರು ಹೀಗೆ ವೀಡಿಯೋ ಒಂದರಲ್ಲಿ ಟೀಚರ್ ಮೇಘನಾ ರಾಜ್ ಆಗಿ ಕಾಣಿಸಿಕೊಂಡಿದ್ದು ಏಕೆ ಅನ್ನೋದಾದ್ರೆ ಇದು ಒಂದು ಜಾಹೀರಾತಿನ ವೀಡಿಯೋ ಆಗಿದೆ. ಜಾಹೀರಾತಿಗಾಗಿ ಮೇಘನಾ ಅವರು ವಿಜ್ಞಾನ ವಿಷಯದ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ವನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಹಾ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಒಂದು ಶೈಕ್ಷಣಿಕ ಆ್ಯಪ್ ಕುರಿತಾದ ಜಾಹೀರಾತಿನಲ್ಲಿ ಮೇಘನಾ ರಾಜ್ ಅವರು ನಟಿಸಿದ್ದು, ಮೈ ಅಭ್ಯಾಸ್ ಎನ್ನುವ ಶೈಕ್ಷಣಿಕ ಆ್ಯಪ್ ನ ಜಾಹೀರಾತು ಎನ್ನುವ ವಿಷಯವನ್ನು ಮೇಘನಾ ಅವರು ತಮ್ಮ ಪೋಸ್ಟ್ ಜೊತೆ ಬರೆದುಕೊಂಡಿದ್ದಾರೆ. ಇನ್ನು ಮೇಘನಾ ಅವರು ಎಲ್ಲಾ ನೋವುಗಳನ್ನು ಮರೆತು ಮತ್ತೊಮ್ಮೆ ಕ್ಯಾಮೆರಾ ಮುಂದೆ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಲ್ಲದೇ ಮೇಘನಾ ಅವರು ಶೀಘ್ರದಲ್ಲೇ ಸಿನಿಮಾಗಳಿಗೂ ಸಹಾ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದೆ. ಮೇಘನಾ ಅವರ ಕಮ್ ಬ್ಯಾಕ್ ಗಾಗಿ ಕಾದಿದ್ದ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ.