HomeEntertainmentಭಾರತದಲ್ಲೇ ಸಾಯ್ತೀನಿ ಹೊರತು ಪಾಕಿಸ್ತಾನಕ್ಕೆ ಹೋಗಲ್ಲ: ಹೊಸ ವರೆಸೆ ತೆಗೆದ ಪಾಕ್ ಯುವತಿ

ಭಾರತದಲ್ಲೇ ಸಾಯ್ತೀನಿ ಹೊರತು ಪಾಕಿಸ್ತಾನಕ್ಕೆ ಹೋಗಲ್ಲ: ಹೊಸ ವರೆಸೆ ತೆಗೆದ ಪಾಕ್ ಯುವತಿ

ಕಳೆದ ಒಂದೆರಡು ದಿನಗಳಿಂದ ಪಾಕಿಸ್ತಾನದ ಯುವತಿಯೊಬ್ಬಳು(Pakistani girl in Banglore) ನಕಲಿ ದಾಖಲೆಗಳೊಂದಿಗೆ ಭಾರತ ಪ್ರವೇಶಿಸಿ, ತನ್ನ ಪ್ರಿಯತಮನೊಡನೆ ಮದುವೆಯಾಗಿ ಬೆಂಗಳೂರಿನಲ್ಲಿ (Banglore) ವಾಸವಿದ್ದ ಘಟನೆ ದೊಡ್ಡ ಸುದ್ದಿಯಾಗಿದೆ. ಪ್ರಸ್ತುತ ಈ ಪಾಕ್ ಯುವತಿಯನ್ನು, ಆಕೆಯ ಪತಿ ಉತ್ತರ ಪ್ರದೇಶ(Uttar Pradesh) ಮೂಲದ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಮತ್ತು ಅವರಿಗೆ ಮನೆ ಬಾಡಿಗೆ ಕೊಟ್ಟ ವ್ಯಕ್ತಿಯನ್ನು ಸಹಾ ಪೋಲಿಸರು ತಮ್ಮ ವ ಶ ದಲ್ಲಿ ಇರಿಸಿಕೊಂಡಿದ್ದಾರೆ. ಗೇಮ್ ಆ್ಯಪ್ ನಿಂದ ಯಾದವ್ ಜೊತೆಗೆ ಪರಿಚಯದ ನಂತರ ಪಾಕ್ ನ ಯುವತಿ ಇಕ್ರಾ(Ikra Jeevani) ಮತ್ತು ಯಾದವ್ ಪ್ರೀತಿಯಲ್ಲಿ ಬಿದ್ದಿದ್ದರು.

ಅನಂತರ ಯಾದವ್ ನೇಪಾಳ ಭಾರತ ಗಡಿಯ (India Nepal Border) ಮೂಲಕ ಇಕ್ರಾ ಜೀವಾನಿಯನ್ನು ಭಾರತಕ್ಕೆ ಕರೆಸಿಕೊಂಡು ಮದುವೆಯಾಗಿ, ನಕಲಿ ಆಧಾರ್ ಕಾರ್ಡ್(Fake Aadhar) ಮಾಡಿಸಿ, ಬೆಂಗಳೂರಿನಲ್ಲಿ ವಾಸವಿದ್ದ. ಆದರೆ ಇಕ್ರಾ ಪಾಕ್ ನಲ್ಲಿರುವ ತನ್ನ ಪೋಷಕರನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಾಗ ಇದು ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿದ್ದು, ಮಾಹಿತಿ ರಾಜ್ಯದ ಪೋಲಿಸರಿಗೆ ನೀಡಿದ ನಂತರ ಯಾದವ್ ಮತ್ತು ಇಕ್ರಾ ಳನ್ನು ಅ ರೆ ಸ್ಟ್ ಮಾಡಲಾಗಿದೆ. ಹೀಗೆ ಪೋಲಿಸರ ಕೈಗೆ ಸಿಕ್ಕ ನಂತರ ಇಕ್ರಾ ಹೊಸದೊಂದು ವರಸೆ ತೆಗೆದು, ತಾನು ಭಾರತ ಬಿಟ್ಟು ಹೋಗೋದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಜಾಗಕ್ಕೆ ಯಶ್: ಸಲ್ಮಾನ್ ಗೆ ಕೊಕ್ ಕೊಟ್ಟು KGF ಸ್ಟಾರ್ ಗೆ ಮಣೆ ಹಾಕಿದ ಪ್ರತಿಷ್ಠಿತ ಬ್ರಾಂಡ್

ಹೌದು, ಪೋಲಿಸರ ಮುಂದೆ ಕಣ್ಣೀರು ಹಾಕಿರುವ ಇಕ್ರಾ, ತಾನು ಪ್ರೀತಿಗಾಗಿ ದೇಶ ಬಿಟ್ಟು ಬಂದಿದ್ದೇನೆ. ಮತ್ತೆ ಅಲ್ಲಿಗೆ ಹೋಗುವುದಿಲ್ಲ. ನಾವಿಬ್ಬರೂ ಮದುವೆ ಆಗಿದ್ದೇವೆ. ಮುಲಾಯಂ ಸಿಂಗ್ ನನ್ನ ಪತಿ, ನಾನು ಅವರನ್ನು ಬಿಟ್ಟು ಹೋಗುವುದಿಲ್ಲ ಎಂದು ಇಕ್ರಾ ಪಟ್ಟು ಹಿಡಿದಿದ್ದು, ಇದು ಪೋಲಿಸರಿಗೆ ಈಗ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಯುವತಿ ಪಟ್ಟು ಹಿಡಿದರೂ ಸಹಾ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲದ ಕಾರಣ, ಡಿಪೋರ್ಟ್ ಮಾಡಲು ಬೇಕಾದ ಪ್ರಕ್ರಿಯೆಯನ್ನು ಪೋಲಿಸರು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಯುವತಿ ಭಾರತಕ್ಕೆ ಪ್ರವೇಶ ಮಾಡಿರುವುದೋ ಅ ಕ್ರ ಮ ವಾಗಿ ಎನ್ನುವ ಕಾರಣಕ್ಕೆ ಪೋಲಿಸರು ಮತ್ತು ಎಫ್ ಆರ್ ಆರ್ ಓ ಅಧಿಕಾರಿಗಳು ಯುವತಿಯನ್ನು ಪಾಕ್ ಗೆ ವಾಪಸ್ಸು ಕಳಿಸಲು ಸಿದ್ಧತೆಗಳನ್ನು ನಡೆಸಿದ್ದಾರೆ. ಅಲ್ಲದೇ ಜೀವಾನಿ ಮತ್ತು ಮುಲಾಯಂ ಸಿಂಗ್ ಮದುವೆಯ ಬಗ್ಗೆಯೂ ಯಾವುದೇ ದಾಖಲೆಗಳು, ಫೋಟೋಗಳು ಲಭ್ಯ ಇಲ್ಲದ ಕಾರಣ ಪೋಲಿಸರಿಗೆ ಇವರ ಮದುವೆಯ ವಿಚಾರದಲ್ಲಿ ಕೂಡಾ ಅನುಮಾನಗಳು ಮೂಡಿದೆ ಎನ್ನಲಾಗಿದೆ. ಯುವತಿಯನ್ನು ಪಾಕ್ ಗೆ ಕಳುಹಿಸಲು ಇನ್ನೂ ಎರಡು ತಿಂಗಳ ಕಾಲ ಹಿಡಿಯುತ್ತದೆ ಎನ್ನಲಾಗಿದೆ.

- Advertisment -