HomeEntertainmentಈ ವಯಸ್ಸಲ್ಲಿ ಇದೆಲ್ಲಾ ಏಕೆ? ಅಂದ ಹೆಚ್ಚಿಸಿಕೊಳ್ಳಲು ಪವಿತ್ರ ಲೋಕೇಶ್ ಪ್ರಯತ್ನ ಕಂಡು ಶಾಕ್ ಆದ...

ಈ ವಯಸ್ಸಲ್ಲಿ ಇದೆಲ್ಲಾ ಏಕೆ? ಅಂದ ಹೆಚ್ಚಿಸಿಕೊಳ್ಳಲು ಪವಿತ್ರ ಲೋಕೇಶ್ ಪ್ರಯತ್ನ ಕಂಡು ಶಾಕ್ ಆದ ನೆಟ್ಟಿಗರು

ಪವಿತ್ರಾ ಲೋಕೇಶ್(Pavitra Lokesh) ಪ್ರಸ್ತುತ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ಜೀವನದ ವಿಚಾರವಾಗಿಯೇ ಸಿಕ್ಕಾಪಟ್ಟೆ ಸುದ್ದಿಯಾಗಿರುವ ನಟಿಯಾಗಿದ್ದಾರೆ. ತೆಲುಗಿನ ಸೀನಿಯರ್ ನಟ ನರೇಶ್(Naresh) ಜೊತೆಗಿನ ಅಫೇರ್ ವಿಷಯವಾಗಿ, ಇತ್ತೀಚಿಗೆ ತುಟಿಗೆ ತುಟಿ ಇಟ್ಟು ಚುಂಬಿಸಿದ ವೀಡಿಯೋ ದೃಶ್ಯದ ವಿಷಯವಾಗಿ ಹೀಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ ನಟಿ ಪವಿತ್ರಾ ಲೋಕೇಶ್. ಇವೆಲ್ಲವುಗಳಿಂದ ನಟಿಯ ವೃತ್ತಿ ಜೀವನಕ್ಕೆ ಮಾತ್ರ ಯಾವುದೇ ಸಮಸ್ಯೆ ಅಥವಾ ತೊಡಕು ಉಂಟಾಗಿಲ್ಲ ಎನ್ನುವುದು ಸತ್ಯ.

ನಟಿ ಪವಿತ್ರಾ ಲೋಕೇಶ್(Pavitra Lokesh) ಪ್ರಸ್ತುತ ತೆಲುಗು ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಿಗೆ ಅನೇಕ ನಿರ್ಮಾಪಕ, ನಿರ್ದೇಶಕರ ಮೊದಲ ಆಯ್ಕೆ ನಟಿ ಪವಿತ್ರಾ ಲೋಕೇಶ್ ಆಗಿದ್ದಾರೆ ಎನ್ನುವುದು ವಾಸ್ತವದ ಸಂಗತಿಯಾಗಿದೆ. ನಟಿ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ನಟಿ ಪವಿತ್ರಾ ಲೋಕೇಶ್ ಕನ್ನಡ ಸೀರಿಯಲ್ ಗಳ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದರು. ಅನಂತರ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹಾ ನಟಿಸಿ ಜನಪ್ರಿಯತೆ ಪಡೆದ ನಟಿ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ನಂತರ ಅಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಬಹು ಬೇಡಿಕೆಯ ನಟಿಯಾಗಿ ಸಾಕಷ್ಟು ಹೆಸರನ್ನು ಮಾಡಿದ್ದು, ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಪವಿತ್ರಾ ಕಾಣಿಸಿಕೊಂಡಿದ್ದಾರೆ.

ಹಲವು ವರ್ಷಗಳಿಂದ ತೆಲುಗು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ನಟಿ ಪವಿತ್ರಾ ಲೋಕೇಶ್ ತಮ್ಮ ಅಂದದ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಸಿನಿಮಾದ ನಾಯಕ ನಟಿಯರು ತಮ್ಮ ಅಂದಕ್ಕೆ ಯಾವ ರೀತಿ ಪ್ರಾಮುಖ್ಯತೆಯನ್ನು ನೀಡುತ್ತಾರೆಯೋ ಪವಿತ್ರ ಲೋಕೇಶ್ ಸಹಾ ಅದೇ ರೀತಿ ತಮ್ಮ ಸೌಂದರ್ಯದ ಕಾಳಜಿಯನ್ನು ವಹಿಸುತ್ತಾರೆ.

ಹೌದು, ನಟಿ ಪವಿತ್ರಾ ಲೋಕೇಶ್ ತಮ್ಮ ಅಂದಕ್ಕಾಗಿ ಕೋಟಿಗಳ ಮೊತ್ತದಲ್ಲಿ ಹಣವನ್ನು ಖರ್ಚು ಮಾಡುತ್ತಾರೆ ಎನ್ನಲಾಗಿದೆ. ನಟಿ ಡಯಟ್ ಅನ್ನು ತಪ್ಪದೇ ಫಾಲೋ ಮಾಡುತ್ತಾರೆ. ಅಲ್ಲದೇ ಅಂದವನ್ನು ಕಾಪಾಡಿಕೊಳ್ಳಲು ದುಬಾರಿ ಬೆಲೆಯ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಅಲ್ಲದೇ ಹೊರಗೆ ಬರುವಾಗ ದುಬಾರಿ ಬೆಲೆಯ ಬಟ್ಟೆಗಳನ್ನು ಅವರು ಧರಿಸುತ್ತಾರೆ.

ಪೋಷಕ ಪಾತ್ರಗಳಲ್ಲಿ ನಟಿಸುವ ನಟಿಯು ಹೀಗೆ ತಮ್ಮ ಅಂದಕ್ಕಾಗಿ ಇಷ್ಟೆಲ್ಲಾ ಅಂದರೆ ಕೋಟಿಗಳ ಮೊತ್ತದಲ್ಲಿ ಹಣವನ್ನು ಖರ್ಚು ಮಾಡುತ್ತಿರುವುದಾದರೂ ಏಕೆ? ಎನ್ನುವುದು ಸಹಾ ಅನೇಕರ ಪ್ರಶ್ನೆಯಾಗಿದೆ. ಈ ವಯಸ್ಸಲ್ಲಿ ಅಂದದ ಬಗ್ಗೆ ಇಷ್ಟೊಂದು ಕಾಳಜಿಯೇಕೆ? ಎಂದು ಕೂಡಾ ಕೆಲವರು ಟೀಕೆ ಮಾಡಿರುವುದು ಉಂಟು. ಏನೇ ಆದರೂ ಸಿನಿಮಾ ರಂಗದಲ್ಲಿ ಅಂದವೇ ಮುಖ್ಯ ಎನ್ನುವುದು ಈಗಾಗಲೇ ಜಗವರಿತ ಸತ್ಯವಾಗಿದೆ.

- Advertisment -