ಪವಿತ್ರಾಗೆ ಕೈ ಕೊಟ್ರೆ ನರೇಶ್ ಕೊಡಬೇಕು 50 ಕೋಟಿ ಹಣ!! ಪವಿತ್ರ, ನರೇಶ್ ನಡುವೆ ಅಗ್ರಿಮೆಂಟ್ ಡೇಟಿಂಗ್?

Entertainment Featured-Articles Movies News

ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ ಯಾವುದು ಎನ್ನುವುದಾದರೆ ಅದು ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ವಿಚಾರವಾಗಿತ್ತು. ಒಂದು ಹಂತದಲ್ಲಿ ಇವರಿಬ್ಬರು ಮದುವೆ ಆಗಿದ್ದಾರೆ ಎನ್ನುವವರೆಗೆ ವಿಷಯ ಸದ್ದು ಮಾಡಿತ್ತು. ಅಲ್ಲದೇ ಇಬ್ಬರೂ ಹೊಟೇಲ್ ನ ಒಂದೇ ಕೋಣೆಯಲ್ಲಿ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರ ಕೈಗೆ ಸಿಕ್ಕಿ ಬಿದ್ದು, ವಿಷಯ ಇನ್ನಷ್ಟು ತೀವ್ರವಾಗಿತ್ತು ಹಾಗೂ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ರಮ್ಯಾ ರಘುಪತಿ ಅವರು ನರೇಶ್ ಮತ್ತು ಪವಿತ್ರಾ ಲೋಕೇಶ್ ಮೇಲೆ ಆರೋಪಗಳನ್ನು ಮಾಡಿದ್ದು ಮಾತ್ರವಲ್ಲದೇ ಅವರ ಮೇಲೆ ಠಾಣೆಯಲ್ಲಿ ದೂರನ್ನು ದಾಖಲಿಸಿದರು.

ಇನ್ನು ವಿಷಯ ವೈರಲ್ ಆದ ಮೇಲೆ ನರೇಶ್ ಮತ್ತು ಪವಿತ್ರ ಇಬ್ಬರೂ ಮಾದ್ಯಮದ ಮುಂದೆ ಬಂದು ಮಾತನಾಡಿದ್ದರು. ತಾವು ಜೊತೆಯಲ್ಲಿ ವಾಸಿಸುತ್ತಿರುವುದು ನಿಜವೇ ಆದರೂ ತಾವಿನ್ನೂ ಮದುವೆಯಾಗಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಬಹಳಷ್ಟು ವರ್ಷಗಳಿಂದ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ ನಾನು ಎಲ್ಲರಿಗೂ ಹತ್ತಿರವಾಗಿದ್ದೇನೆ. ಇನ್ನು ನಟ ನರೇಶ್ ಅವರ ಬಗ್ಗೆ ನಾನೇನು ಹೇಳುವ ಅಗತ್ಯ ಇಲ್ಲ. ಅಲ್ಲದೇ ನರೇಶ್ ಅವರ ಪತ್ನಿ ಎಂದು ಹೇಳಿಕೊಂಡಿರುವ ರಮ್ಯ ಅವರು ಬೆಂಗಳೂರಿಗೆ ಬಂದು ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಮಾತುಗಳನ್ನು ಸಹಾ ನಟಿ ಪವಿತ್ರಾ ಲೋಕೇಶ್ ಅವರು ಹೇಳಿದ್ದರು.

ಇದಾದ ನಂತರ ಕೆಲವು ದಿನಗಳಿಂದಲೂ ಈ ವಿಷಯ ಸ್ವಲ್ಪ ತಣ್ಣಗಾದಂತೆ ಕಂಡಿದೆ. ಆದರೆ ಇವೆಲ್ಲವುಗಳ ನಡುವೆ ಈಗ ಹೊಸ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಡಿದ್ದು, ಈಗ ಈ ಹೊಸ ವಿಚಾರ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ. ಅಲ್ಲದೇ ಇದೊಂದು ಹೊಸ ಚರ್ಚೆಯನ್ನು ಹುಟ್ಟು ಹಾಕಿರುವುದು ಮಾತ್ರವೇ ಅಲ್ಲದೇ, ಈ ವಿಚಾರವನ್ನು ಕೇಳಿ ಟಾಲಿವುಡ್ ಮಂದಿ ಸಹಾ ಅಚ್ಚರಿ ಪಡುವಂತಾಗಿದೆ. ಇಷ್ಟಕ್ಕೂ ಏನು ವಿಷಯ ಎನ್ನುವುದಾದರೆ, ನರೇಶ್ ಮತ್ತು ಪವಿತ್ರ ಲೋಕೇಶ್ ನಡುವೆ “ಅಗ್ರಿಮೆಂಟ್ ಡೇಟಿಂಗ್” ನಡೀತಿದೆ ಎನ್ನಲಾಗಿದೆ.

ಹೌದು, ಹೊಸ ಸುದ್ದಿಗಳ ಪ್ರಕಾರ ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವೆ ಡೇಟಿಂಗ್ ವಿಚಾರದಲ್ಲಿ ಒಂದು ಒಪ್ಪಂದವಾಗಿದೆ ಎನ್ನಲಾಗಿದೆ. ಈ ಒಪ್ಪಂದದ ಪ್ರಕಾರ ನರೇಶ್ ನಟಿ ಪವಿತ್ರಾ ಲೋಕೇಶ್ ಗೆ ಪ್ರತಿ ತಿಂಗಳು 25 ಲಕ್ಷ ರೂ.ಗಳನ್ನು ನೀಡುತ್ತಿದ್ದಾರಂತೆ. ಒಂದು ವೇಳೆ ನರೇಶ್ ಪವಿತ್ರಾ ರನ್ನು ಬಿಟ್ಟು ಬೇರೆ ಹುಡುಗಿಯ ಜೊತೆ ಸಂಬಂಧ ಬೆಳೆಸಿದರೆ ಕೋಟಿ ಕೋಟಿ ಹಣವನ್ನು ನೀಡಬೇಕು ಎನ್ನಲಾಗಿದ್ದು, ಅದೂ ಕೂಡಾ ಬರೋಬ್ಬರಿ 50 ಕೋಟಿ ನೀಡಬೇಕು ಎನ್ನುವುದು ಒಪ್ಪಂದವಾಗಿದೆ ಎನ್ನುವ ಸುದ್ದಿಯೊಂದು ತೆಲುಗು ಮಾದ್ಯಮಗಳಲ್ಲಿ ಹರಿದಾಡಿದ್ದು ಎಲ್ಲರ ಕುತೂಹಲ ಕೆರಳಿಸಿದೆ.

Leave a Reply

Your email address will not be published.