ಪವನ್ ಕಲ್ಯಾಣ್ ಫೋಟೋ ವೈರಲ್:ಕಣ್ಣಿಗೆ ಹಬ್ಬವೆಂದು ಅಭಿಮಾನಿಗಳ ಸಂಭ್ರಮ, ಈ ಫೋಟೋದಲ್ಲಿ ಅಂತದ್ದೇನಿದೆ??

Written by Soma Shekar

Published on:

---Join Our Channel---

ಯಶಸ್ಸು ಹಾಗೂ ವಿಫಲತೆಗಳ ಗೋಜಿಗೆ ಬೀಳದಂತೆ ತನ್ನದೇ ಆದ ಹಾದಿಯಲ್ಲಿ ಸಾಗುತ್ತಿರುವ ನಟ ಎಂದರೆ ಪವನ್ ಕಲ್ಯಾಣ್. ಎಲ್ಲಾ ನಟರಿಗೆ ಇದ್ದಂತೆ ಇವರಿಗೂ ಸಹಾ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ನಟನ ಹೆಸರು ಕೇಳಿದರೆ ಅವರ ಅಭಿಮಾನಿಗಳಿಗೆ ಖುಷಿ, ಇನ್ನು ಪವನ್ ಕಲ್ಯಾಣ್ ನಟನೆಯ ಸಿನಿಮಾ ಬರುತ್ತಿದೆ ಎಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಸಂಭ್ರಮವನ್ನು ಆಚರಿಸಿ ಹಬ್ಬದಂತೆ ಖುಷಿ ಪಡುತ್ತಾರೆ. ತಮ್ಮ ಅಭಿಮಾನ ನಟನ ಬಗ್ಗೆ ಒಂದು ಚಿಕ್ಕ ಸುದ್ದಿಯೇ ಆದರೂ ಅಭಿಮಾನಿಗಳಿಗೆ ಅದನ್ನು ತಿಳಿಯುವ ಆಸಕ್ತಿ ಸಹಜವಾಗಿಯೇ ಮೂಡುತ್ತದೆ.

ಇತ್ತೀಚಿಗೆ ನಟ ಪವನ್ ಕಲ್ಯಾಣ್ ಅವರು ತಮ್ಮ ಪತ್ನಿ ಆ್ಯನಾ ಲೆಜಿನೋವಾ ಜೊತೆಯಲ್ಲಿ ಹೊಸ ವರ್ಷದ ಆರಂಭವನ್ನು ಸಂಭ್ರಮಿಸಲು ರಷ್ಯಾಕ್ಕೆ ಹೋಗಿದ್ದ ವಿಚಾರವು ಎಲ್ಲರಿಗೂ ತಿಳಿದೇ ಇದೆ. ನಂತರ ಪವನ್ ಕಲ್ಯಾಣ್ ಭಾರತಕ್ಕೆ ಹಿಂತಿರುಗಿ ಬಂದರು. ಅನಂತರ ಕೆಲವು ದಿನಗಳ ನಂತರ ಅವರ ಪತ್ನಿ ಆ್ಯನಾ ಕೂಡಾ ಭಾರತಕ್ಕೆ ಮರಳಿದ್ದಾರೆ. ಈಗ ಪ್ರಸ್ತುತ ಪವನ್ ಕಲ್ಯಾಣ್ ಕುರಿತಾದ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರ ಗಮನವನ್ನು ಸೆಳೆದಿದೆ.

ಈಗ ಹೊರ ಬಂದಿರುವುದು ಪವನ್ ಕಲ್ಯಾಣ್ ಅವರ ಕುಟುಂಬದ ಒಂದು ಸುಂದರವಾದ ಫೋಟೋ ಆಗಿದೆ. ಹೊರ ಬಂದ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗ ವೈರಲ್ ಆಗಿದೆ. ಈ ಫೋಟೋದಲ್ಲಿ ಪವನ್ ಕಲ್ಯಾಣ್ ತಮ್ಮ ಪತ್ನಿ ಆ್ಯನಾ ಲೆಜೆನೋವಾ ಮತ್ತು ತಮ್ಮ ನಾಲ್ಕು ಮಕ್ಕಳ ಜೊತೆಗೆ ಇದ್ದು, ಈ ಕುಟುಂಬ ಸಹಿತ ವೀಡಿಯೋವನ್ನು ನೋಡಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಪವನ್ ಕಲ್ಯಾಣ್ ಮಕ್ಕಳ ಜೊತೆಗೆ ಬಹಳ ಖುಷಿಯಿಂದ ಇರುವುದು ಫೋಟೋದಲ್ಲಿ ಕಂಡಿದೆ.

ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳು ಇದ್ದಾರೆ. ಅಕಿರಾ ನಂದನ್ ಮತ್ತು ಆದ್ಯಾ, ನಂತರ ಮದುವೆಯಾದ ಆ್ಯನಾ ಲೆಜಿನೋವಾ ಅವರಿಂದ ಅಂಜನಾ ಪವನೋವಾ ಮತ್ತು ಶಂಕರ್ ಪವನೋವಿಚ್ ಎನ್ನುವ ಹೆಸರಿನ ಮಗಳು ಮತ್ತು ಮಗನಿದ್ದಾರೆ. ಇನ್ನು ನಾಲ್ಕು ಮಕ್ಕಳ ಜೊತೆಗೆ ಪವನ್ ಕಲ್ಯಾಣ್ ಖುಷಿಯಾಗಿ ಹೊಸ ವರ್ಷ ಸಂಭ್ರಮಿಸಿದ ಈ ಫೋಟೋ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment