ಅಯ್ಯೋ ಇದೆಂತಾ ಕ್ರೇಜ್? ಟಿವಿ ಯಲ್ಲಿ ಪವನ್ ಕಲ್ಯಾಣ್ ನ ನೋಡಿ ಈ ಮಹಿಳೆ ಮಾಡಿದ್ದೇನು? ಶಾಕಿಂಗ್!!!

0
4474

ತೆಲುಗು ರಾಜ್ಯಗಳಲ್ಲಿ(Telugu States) ಸ್ಟಾರ್ ನಟ ಪವನ್ ಕಲ್ಯಾಣ್ ಅವರಿಗೆ ಇರುವ ಕ್ರೇಜ್ ಬೇರೆಯದ್ದೇ ಮಟ್ಟದಲ್ಲಿದೆ. ಪವನ್ ಕಲ್ಯಾಣ್(Pawan Kalyan Unstoppable) ಸಿನಿಮಾ ಬಂದಿದೆ ಎಂದರೆ ಅದನ್ನು ದೊಡ್ಡ ಹಬ್ಬದ ಬಂದಿದೆ ಎನ್ನುವಂತೆ ಅಭಿಮಾನಿಗಳು ಖುಷಿಯಿಂದ ಸಂಭ್ರಮಿಸುತ್ತಾರೆ. ಸಿನಿಮಾ ಥಿಯೇಟರ್ ಗಳ ಮುಂದೆ ಹಬ್ಬದ ವಾತಾವರಣವನ್ನು ಅಭಿಮಾನಿಗಳು ನಿರ್ಮಾಣ ಮಾಡುತ್ತಾರೆ. ಪ್ರಸ್ತುತ ಅಂತಹದ್ದೇ ಒಂದು ಸಂಭ್ರಮದ ವಾತಾವರಣ ತೆಲುಗು ರಾಜ್ಯಗಳಲ್ಲಿ ಈಗ ಕಾಣಿಸಿಕೊಂಡಿದೆ. ಹಾಗಂತ ನಟ ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ಬಂದಿಲ್ಲ. ಬದಲಿಗೆ ನಟ ಸಿಂಹ ಖ್ಯಾತಿಯ ತೆಲುಗಿನ ಹಿರಿಯ ನಟ ನಂದಮೂರಿ ಬಾಲಕೃಷ್ಣ(Nandamuri Balakrishna Unstoppable) ನಿರೂಪಣೆ ಮಾಡುತ್ತಿರುವ ಅನ್ ಸ್ಟಾಪಬಲ್ ಚಾಟ್ ಶೋ ಗೆ ಪವನ್ ಕಲ್ಯಾಣ್ ಅತಿಥಿಯಾಗಿ ಆಗಮಿಸಿರುವುದೇ ಈ ಸಂಭ್ರಮಕ್ಕೆ ಕಾರಣ.

ಬಾಲಕೃಷ್ಣ ಮತ್ತು ಪವನ್ ಕಲ್ಯಾಣ್ ಅವರ ನಡುವೆ ನಡೆದ ಸಂಭಾಷಣೆಯನ್ನು ಎರಡು ಎಪಿಸೋಡ್ (Unstoppable) ಗಳಲ್ಲಿ ಪ್ರಸಾರ ಮಾಡಲು ಆಹಾ ಓ ಟಿ ಟಿ ನಿರ್ಧಾರವನ್ನು ಮಾಡಿದ್ದು. ಮೊದಲ ಎಪಿಸೋಡ್ ಫೆಬ್ರವರಿ ಎರಡರಂದು ಪ್ರಸಾರ ಕಂಡಿತ್ತು. ಈ ವೇಳೆ ಆಹಾ ಒಟಿಟಿಯಲ್ಲಿ(Aha OTT) ಬಹಳ ಬೇಗ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ಕ್ರಾಸ್ ಮಾಡಿದ ಮೊದಲ ಎಪಿಸೋಡ್ ಆಗಿ ಇದು ಹೊಸ ದಾಖಲೆಯನ್ನು ಸೃಷ್ಟಿಸಿದೆ(New Record). ಮೊದಲ ಎಪಿಸೋಡ್ ನೋಡುತ್ತಾ ಪ್ರೇಕ್ಷಕರು ಸಂಭ್ರಮಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇವೆಲ್ಲವುಗಳ ನಡುವೆಯೇ ಈಗ ವಿಶೇಷ ವಿಡಿಯೋವೊಂದು(Viral Video) ಎಲ್ಲರ ಗಮನವನ್ನು ಸೆಳೆಯುತ್ತಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ವಿಡಿಯೋವನ್ನು ನೋಡಿದಾಗ ಅದರಲ್ಲಿ ಕಾರ್ಯಕ್ರಮ ಶುರುವಾದಾಗ ಮಹಿಳೆಯೊಬ್ಬರು ಆರತಿ ತಟ್ಟೆಯನ್ನು ಸಿದ್ಧಪಡಿಸಿ ಇಟ್ಟುಕೊಂಡಿರುವುದು ಕಾಣುತ್ತಿದೆ. ಅನಂತರ ಟಿವಿಯಲ್ಲಿ ನೋಡುತ್ತಾ, ಶೋ ನಲ್ಲಿ ಪವನ್ ಕಲ್ಯಾಣ್ ಅವರ ಎಂಟ್ರಿ ಆದಾಗ ಮಹಿಳೆ ಪವನ್ ಕಲ್ಯಾಣ್ ಅವರಿಗೆ ಆರತಿಯನ್ನು ಮಾಡಿದ್ದಾರೆ. ವೈರಲ್ ವೀಡಿಯೋದ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ಆಹಾ ಓ ಟಿ ಟಿ, ಕಾರ್ಯಕ್ರಮ ನೋಡಿ ಆನಂದ ಪಡುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದೆ.

LEAVE A REPLY

Please enter your comment!
Please enter your name here