ಪರೀಕ್ಷೇಲಿ ಫೇಲ್ ಮಾಡಿದ್ರಂತ ಟೀಚರ್ಸ್ ಗೆ ಟಾರ್ಚರ್ ಕೊಟ್ಟ ವಿದ್ಯಾರ್ಥಿಗಳು: ಶಾಕಿಂಗ್ ವೀಡಿಯೋ ವೈರಲ್

Written by Soma Shekar

Published on:

---Join Our Channel---

ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರು ಎಂದರೆ ಅವರಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಗುರುವನ್ನು ದೇವರಿಗೆ ಸಮಾನ ಎನ್ನಲಾಗಿದೆ. ತಂದೆ ತಾಯಿ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಅನಾದಿ ಕಾಲದಿಂದಲೂ ಗುರುವಿನ ಸ್ಥಾನದ ಬಗ್ಗೆ ಅನೇಕ ವಿಚಾರಗಳನ್ನು ಹೇಳಿಕೊಂಡು ಬರಲಾಗಿದೆ. ಆದರೆ ಕಾಲ ಈಗ ಹಿಂದಿನಂತೆ ಖಂಡಿತ ಇಲ್ಲ. ಗುರುವಿನ ಸ್ಥಾನ ಮಾನಗಳು ಎನ್ನುವುದು ಕೇವಲ ಕಥೆಗಳಾಗುತ್ತಿವೆ‌. ಅಲ್ಲದೇ ಇಂದಿನ ವ್ಯವಸ್ಥೆ ಸಹಾ ಬದಲಾಗಿದೆ. ಆದರೂ ಶಿಕ್ಷಕರು ಎಂದಾಗ ಅಲ್ಲೊಂದು ಗೌರವ ಇರಬೇಕಾದುದು ಮುಖ್ಯ ಎನ್ನುವುದು ವಾಸ್ತವ. ಗುರುಗಳು ಕಂಡರೆಂದರೆ ಮಕ್ಕಳು ಮನೆಗೆ ಓಡುವ ಕಾಲವೊಂದಿತ್ತು. ಆದರೆ ಈಗ ಆ ಭ ಯ ಎನ್ನುವುದು ಇಲ್ಲವೇ ಇಲ್ಲ.

ಈಗ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದರಲ್ಲಿ ನೋಡಿದಾಗ ಕ್ರೋ ಧಿ ತ ರಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮೇಲೆ ಹ ಲ್ಲೆಯನ್ನು ನಡೆಸಿರುವ ಘಟನೆಯು ವರದಿಯಾಗಿದೆ. ವೀಡಿಯೋದಲ್ಲಿನ ದೃಶ್ಯ ನೋಡಿದಾಗ ನಿಜಕ್ಕೂ ಇದೊಂದು ಆ ಘಾ ತಕಾರಿ ಸನ್ನಿವೇಶ ಎನಿಸುತ್ತಿದೆ. ಇಂತಹುದೊಂದು ಘಟನೆ ಜಾರ್ಖಂಡ್ ನ ದುಮ್ಕಾಲ್ ಎಂಬಲ್ಲಿನ ಗೋಪಿಕಂದರ್ ಪೋಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿನ ಸರ್ಕಾರಿ ರೆಸಿಡೆನ್ಷಿಯಲ್ ಶಾಲೆಯಲ್ಲಿ ನಡೆದಿದೆ. ಹೌದು, ಇಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರನ್ನು ಮರಕ್ಕೆ ಕಟ್ಟಿ ಹಾಕಿ, ಅವರನ್ನು ಥ ಳಿ ಸಿರುವುದು ಮಾತ್ರವೇ ಅಲ್ಲದೇ ವೀಡಿಯೋ ಕೂಡಾ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಮಗೆ ಬೇಕಂತಲೇ ಶಿಕ್ಷಕರು ಕಡಿಮೆ ಅಂಕಗಳನ್ನು ನೀಡಿದ್ದಾರೆ, ಅವರು ವಿದ್ಯಾರ್ಥಿಗಳ ಜೀವನದ ಜೊತೆಗೆ ಆಟವಾಡಿದ್ದಾರೆ. ಹತ್ತು ಜನ ವಿದ್ಯಾರ್ಥಿಗಳು ಫೇಲಾಗಿದ್ದು ಇದಕ್ಕೆ ಕಾರಣ ಶಿಕ್ಷಕರೇ ಎಂದು ಹೇಳುತ್ತಿರುವ ಮಾತುಗಳು ವೀಡಿಯೋದಲ್ಲಿ ಕೇಳಿಸುತ್ತಿದೆ. ಅಲ್ಲದೇ ಈ ವೀಡಿಯೋ ಎಲ್ಲೆಡೆ ವೈರಲ್ ಆಗಲಿ ಎಂದು ಕೂಡಾ ವಿದ್ಯಾರ್ಥಿಗಳು ಹೇಳಿದ್ದಾರೆ. ಶಿಕ್ಷಕರನ್ನು ಮರವೊಂದಕ್ಕೆ ಕಟ್ಟಿ ಹಾಕಿರುವುದು‌‌ ಕಂಡಿದೆ. ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎಂದು ಗಣಿತ ಶಿಕ್ಷಕನನ್ನು, ಶಾಲೆಯ ಕ್ಲರ್ಕ್ ಅನ್ನು ಮರಕ್ಕೆ ಕಟ್ಟಿ ವಿದ್ಯಾರ್ಥಿಗಳು ಅವರನ್ನು ಥಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಉನ್ನತ ಅಧಿಕಾರಿಗಳು ಮತ್ತು ಪೋಲಿಸರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಬರುವ ವೇಳೆಗೆ ಅನ್ಯ ಶಿಕ್ಷಕರು ಕಟ್ಟಿ ಹಾಕಿದ್ದ ಶಿಕ್ಷಕರನ್ನು ಬಿಡಿಸಿದ್ದಾರೆ. ಪೋಲಿಸರು ವಿದ್ಯಾರ್ಥಿಗಳಿಂದ ಸೆಲ್ ಫೋನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ತಮಗೆ ನೀಡುತ್ತಿರುವ ಆಹಾರ ಸಹಾ ಕಳಪೆಯಾಗಿದೆ ಎಂದು ಹಿರಿಯ ಅಧಿಕಾರಿಗಳ ಬಳಿ ದೂರನ್ನು ನೀಡಿದ್ದಾರೆ ಎನ್ನಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಮಿಶ್ರ ಪ್ರತಿಕ್ರಿಯೆಗಳು ಎಲ್ಲೆಡೆಯಿಂದಲೂ ಹರಿದು ಬರುತ್ತಿವೆ.

Leave a Comment