ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಿ, ಪದ್ಮಶ್ರೀ ವಾಪಸ್ ಕೊಡ್ತೇನೆ:‌ ಕಂಗನಾ ಬಹಿರಂಗ ಸವಾಲು

Written by Soma Shekar

Updated on:

---Join Our Channel---

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಬಂದ ನಂತರ ದೇಶಕ್ಕೆ ನೈಜ ಸ್ವಾತಂತ್ರ್ಯ ದಕ್ಕಿತ್ತು, 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆಯಾಗಿ ಎನ್ನುವ ಹೇಳಿಕೆಯನ್ನು ನಟಿ ಕಂಗನಾ ನೀಡಿದ ನಂತರ ಈ ವಿಷಯ ದೇಶ ವ್ಯಾಪಿಯಾಗಿ ತೀವ್ರ ವಿ ವಾ ದವನ್ನು ಹುಟ್ಟು ಹಾಕಿರುವುದು ಮಾತ್ರವೇ ಅಲ್ಲದೇ ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಹಾಗೂ ಸಾಮಾನ್ಯ ಜನರು ಕೂಡಾ ನಟಿ ಕಂಗನಾ ವಿ ರು ದ್ಧ ಅಸಮಾಧಾನವನ್ನು ಹೊರ ಹಾಕುತ್ತಾ, ನಟಿ ಕಂಗನಾಗೆ ನೀಡಿರುವ ಪದ್ಮಶ್ರೀ ಹಿಂದಕ್ಕೆ ಪಡೆಯಬೇಕೆಂದು ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಅಭಿಯಾನ ನಡೆಸಿದ್ದಾರೆ.

ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದ‌ ಹಾಗೆಯೇ ನಟಿ ಕಂಗನಾ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ನನಗೆ ನೀಡಿರುವ ಪದ್ಮಶ್ರೀ ಯನ್ನು ಹಿಂದಿರುಗಿಸುತ್ತೇನೆ‌‌ ಎಂದಿರುವ ಕಂಗನಾ ಅದೇ ವೇಳೆಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಿತ್ತಾ,‌‌‌ ತನ್ನ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿ ಎನ್ನುತ್ತಾ ಬಹಿರಂಗವಾಗಿ ಸವಾಲನ್ನು ಎಸೆದಿದ್ದಾರೆ. ಕಂಗನಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಈ ವಿಚಾರವನ್ನು ಹಂಚಿಕೊಂಡು, ತಮ್ಮ ಪ್ರಶ್ನೆಗಳನ್ನು ಎಲ್ಲರ ಮುಂದೆ ಇರಿಸಿದ್ದಾರೆ.

ಕಂಗನಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ನಾನು ನನ್ನ ಪದ್ಮಶ್ರೀ ಪ್ರಶಸ್ತಿ ವಾಪಸ್ಸು ನೀಡಲು ಸಿದ್ಧಳಿದ್ದೇನೆ.
ಆದರೆ ನನಗೆ 1947 ರಲ್ಲಿ ಯಾವ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು ಎನ್ನುವುದನ್ನು ಬಿಡಿಸಿ ಹೇಳಬೇಕು. ನನಗೆ ತಿಳಿದಿರುವಂತೆ 1857 ರಲ್ಲಿ ನಡೆದ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯುತ್ತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಹಾಗೂ ವೀರ ಸಾವರ್ಕರ್ ಅವರ ನಾಯಕತ್ವದಲ್ಲಿ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಕಂಗನಾ ತನಗೆ 1857 ರ ದಂಗೆಯು ಭಾರತ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನುವುದರ ಅರಿವಿದೆ. ಆದರೆ 1947 ರಲ್ಲಿ ಏನು ನಡೆಯಿತು ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಮಾತನ್ನು ಹೇಳುವ ಮೂಲಕ ಕಂಗನಾ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಕಂಗನಾ ಅವರ ಈ ಪೋಸ್ಟ್ ಗೆ ಸಹಾ ಪರ, ವಿರೋಧ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಕಂಗನಾ ಸದ್ಯಕ್ಕೆ ಟಾಕ್ ಆಫ್ ದಿ ನೇಷನ್ ಆಗಿ ಚರ್ಚೆಗೆ ಕಾರಣವಾಗಿದ್ದಾರೆ.

Leave a Comment