HomeEntertainmentಪತ್ನಿ ನಡೆಗೆ ತದ್ವಿರುದ್ಧವಾದ ಹೆಜ್ಜೆ ಇಟ್ಟ ರಾಜ್ ಕುಂದ್ರಾ: ಯಾವುದೇ ಪ್ರತಿಕ್ರಿಯೆ ನೀಡದ ಶಿಲ್ಪಾ ಶೆಟ್ಟಿ

ಪತ್ನಿ ನಡೆಗೆ ತದ್ವಿರುದ್ಧವಾದ ಹೆಜ್ಜೆ ಇಟ್ಟ ರಾಜ್ ಕುಂದ್ರಾ: ಯಾವುದೇ ಪ್ರತಿಕ್ರಿಯೆ ನೀಡದ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಜೀವನವು ಇತ್ತೀಚಿಗೆ ಹಲವು ಏರಿಳಿತಗಳನ್ನು ಕಂಡಿದೆ‌‌. ಅದಕ್ಕೆ ಪ್ರಮುಖವಾದ ಕಾರಣವಾಗಿದ್ದು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಪ್ರಕರಣ. ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಮತ್ತು ಹಂಚಿಕೆ ವಿಚಾರದಲ್ಲಿ ರಾಜ್ ಕುಂದ್ರಾ ಅವರು ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಈಗ ಹೊರಗೆ ಬಂದಿದ್ದಾರೆ. ಆದರೆ ಈ ವಿಷಯ ಶಿಲ್ಪಾ ಶೆಟ್ಟಿ ಅವರ ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿತ್ತು. ಕೆಲವು ದಿನಗಳವರೆಗೆ ಶಿಲ್ಪಾ ಶೆಟ್ಟಿ ಸಹಾ ಮೌನಕ್ಕೆ ಶರಣಾಗಿದ್ದರು. ಮಾದ್ಯಮಗಳಿಂದ ಅವರು ದೂರವೇ ಉಳಿದಿದ್ದರು.

ಆದರೆ ಅನಂತರ ಹಳೆಯದೆಲ್ಲಾ ಮರೆತು ಶಿಲ್ಪಾ ಮತ್ತೆ ಹೊಸ ಹುರುಪಿನೊಂದಿಗೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಮೊದಲಿನಷ್ಟೇ ಹುರುಪಿನಿಂದ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈಗ ಅವರ ಪತಿ ರಾಜ್ ಕುಂದ್ರಾ ಮಾತ್ರ ಪತ್ನಿಯ ನಡೆಗೆ ತದ್ವಿರುದ್ಧವಾದ ಹೆಜ್ಜೆಯನ್ನು ಇಟ್ಟಿದ್ದಾರೆ. ಹೌದು ಜುಲೈ 19 ರಂದು ರಾಜ್ ಕುಂದ್ರಾ ಮೇಲೆ ಆರೋಪ ಕೇಳಿ ಬಂತು. ಅದಾದ ಮೇಲೆ ಅವರ ಬಂಧನ ಆಯ್ತು‌. ರಾಜ್ ಕುಂದ್ರಾ ಸೋಶಿಯಲ್ ಮೀಡಿಯಾಗಳಿಂದ ಕಣ್ಮರೆಯಾದರು.

ಜಾಮೀನಿನ ಮೇಲೆ ಹೊರ ಬಂದ ಮೇಲೆ ಸಹಾ ರಾಜ್ ಕುಂದ್ರಾ ಯಾವುದೇ ಹೊಸ ಪೋಸ್ಟ್ ಗಳನ್ನು ಹಾಕುವ ಕಡೆಗೆ ಗಮನ ನೀಡಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಮೌನವನ್ನೇ ಕಾಯ್ದುಕೊಂಡು ಬಂದಿದ್ದ ರಾಜ್ ಕುಂದ್ರಾ ಇದೀಗ ಹೊಸ ನಿರ್ಧಾರವನ್ನು ಮಾಡಿದ್ದಾರೆ. ರಾಜ್ ಕುಂದ್ರಾ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ ನ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೇ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡುವ ಯಾವುದೇ ಸೂಚನೆಯನ್ನು ನೀಡಿರಲಿಲ್ಲ.

ಪತಿಯ ಇಂತಹ ಸಡನ್ ನಿರ್ಧಾರದ ಕುರಿತಾಗಿ ಶಿಲ್ಪಾ ಶೆಟ್ಟಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಜಾಮೀನಿನ ಹೊರ ಬಂದ ಮೇಲೆ ರಾಜ್ ಕುಂದ್ರಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಯಾವುದೇ ಮಾದ್ಯಮ ಕ್ಕೂ ಅವರು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದೀಗ ಸೋಶಿಯಲ್ ಮೀಡಿಯಾಗಳಿಂದಲೂ ಅವರು ಹಿಂದಕ್ಕೆ ಸರಿದಿರುವುದು ಅನೇಕರಿಗೆ ಸಂಶಯವನ್ನು ಹುಟ್ಟು ಹಾಕಿರುವುದು ಮಾತ್ರವೇ ಅಲ್ಲದೇ, ಇಂತಹ ನಿರ್ಧಾರಕ್ಕೆ ಕಾರಣವೇನೆಂಬ ಪ್ರಶ್ನೆ ಸಹಾ ಮೂಡಿದೆ.

- Advertisment -