ಪತ್ನಿಯ ಸೀಮಂತ, ಬಿಗ್ ಬಾಸ್ ಮನೆಯಿಂದಲೇ ಆಶೀರ್ವದಿಸಿದ ಪತಿ: ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು ಬಿಗ್ ಬಾಸ್

0 3

ಬಿಗ್ ಬಾಸ್ ಕಾರ್ಯಕ್ರಮ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಬಿಗ್ ಬಾಸ್ ಹಲವು ಭಾಷೆಗಳಲ್ಲಿ ಪ್ರಸಾರ ಕಾಣುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲೂ ಸಹಾ ಬಿಗ್ ಬಾಸ್ ಶೋ ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 9 ನಡೆಯುತ್ತಿದ್ದರೆ, ಇನ್ನೊಂದು ಕಡೆ ನೆರೆಯ ತೆಲುಗು ರಾಜ್ಯಗಳಲ್ಲಿ ಬಿಗ್ ಬಾಸ್ ಸೀಸನ್ 6 ಅಲ್ಲಿನ ಜನರಿಗೆ ಮನರಂಜನೆಯನ್ನು ನೀಡುತ್ತಿದೆ. ಇನ್ನು ಶೀಘ್ರದಲ್ಲೇ ಹಿಂದಿಯಲ್ಲಿ ಬಿಗ್ ಬಾಸ್ ತನ್ನ ಹದಿನಾರನೇ ಸೀಸನ್ ಆರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು ಈಗಾಗಲೇ ಪ್ರೋಮೋಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಇವೆಲ್ಲವುಗಳ ನಡುವೆಯೇ ತೆಲುಗು ಬಿಗ್ ಬಾಸ್ ಈ ಬಾರಿ ನಿರೀಕ್ಷಿತ ಮಟ್ಟದ ಟಿ ಆರ್ ಪಿ ಪಡೆಯುವಲ್ಲಿ ವಿಫಲವಾಗಿದೆ ಎನ್ನುವ ಸುದ್ದಿಗಳು ಈಗಾಗಲೇ ಹರಿದಾಡಿದೆ.

ಆದರೂ ಅವುಗಳ ನಡುವೆಯೇ ಬಿಗ್ ಬಾಸ್ ಕಾರ್ಯಕ್ರಮ ಮಾತ್ರ ನಿರಾತಂಕವಾಗಿ ಸಾಗಿದ್ದು, ನಿನ್ನೆಯ ಎಪಿಸೋಡ್ ನಲ್ಲಿ ಭಾವುಕ ಕ್ಷಣಗಳಿಗೆ ಬಿಗ್ ಬಾಸ್ ಮನೆ ಸಾಕ್ಷಿಯಾಗಿದೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಗದ್ದಲ, ಗಲಾಟೆ, ಅರಚಾಟ, ಕೂಗಾಟ, ಕಣ್ಣೀರು ಗಳಿಂದ ತುಂಬಿದ ವಾತಾವರಣದಲ್ಲಿ ನಿನ್ನೆ ಸ್ವಲ್ಪ ಬದಲಾವಣೆ ಕಂಡಿತ್ತು. ನಿನ್ನೆ ಮನೆಯಲ್ಲಿ ಒಂದು ಎಮೋಷನಲ್ ವಾತಾವರಣ ನಿರ್ಮಾಣವಾಗಿತ್ತು. ತೆಲುಗು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಆಟ ಆಡುವ ವಿಷಯದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಸ್ಪರ್ಧಿ ಎಂದರೆ ಗಾಯಕ ರೇವಂತ್. ರೇವಂತ್ ಅವರು ತನ್ನದೇ ಆದ ಶೈಲಿಯಲ್ಲಿ ಆಟ ಆಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ರೇವಂತ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಸಮಯದಲ್ಲಿ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ನಂತರವೂ ರೇವಂತ್ ಅವರು ಹಲವು ಬಾರಿ ಗರ್ಭಿಣಿಯಾಗಿರುವ ತಮ್ಮ ಪತ್ನಿಯನ್ನು ನೆನಪಿಸಿಕೊಂಡು ಎಮೋಷನಲ್ ಆಗಿದ್ದಾರೆ. ನಿನ್ನೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರೇವಂತ್ ಅವರಿಗೆ ಇತ್ತೀಚಿಗಷ್ಟೇ ರೇವಂತ್ ಅವರ ಪತ್ನಿಯ ಸೀಮಂತ ಕಾರ್ಯಕ್ರಮ ಶುಭಪ್ರದವಾಗಿ ನಡೆದಿರುವ ವಿಚಾರವನ್ನು ತಿಳಿಸಲಾಗಿದ್ದು, ಅವರಿಗೆ ಪತ್ನಿಯ ಸೀಮಂತ ಕಾರ್ಯಕ್ರಮದ ಆ ಸಂತೋಷ ಮತ್ತು ಸಂಭ್ರಮದ ದೃಶ್ಯಗಳನ್ನು ಸಹಾ ತೋರಿಸಲಾಗಿದೆ.

https://www.instagram.com/reel/CjFREC6p4EK/?igshid=YmMyMTA2M2Y=

ಬಿಗ್ ಬಾಸ್ ಮಾತನಾಡುತ್ತಾ, ಕಳೆದ ವಾರ ನಿಮ್ಮ ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿದೆ. ನೀವು ಅದರಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಆ ಮಧುರವಾದ ಕ್ಷಣಗಳನ್ನು ನಿಮಗೆ ತೋರಿಸಬೇಕೆಂದುಕೊಂಡಿದ್ದೇವೆ ಎಂದು ಸೀಮಂತ ಕಾರ್ಯಕ್ರಮದ ವಿಡಿಯೋ ತೋರಿಸಿದ್ದಾರೆ. ಪತ್ನಿ ಅನ್ವಿತಾ ಸೀಮಂತ ಕಾರ್ಯಕ್ರಮವನ್ನು ನೋಡಿದ ರೇವಂತ್ ಅವರು ಮತ್ತೊಮ್ಮೆ ಎಮೋಷನಲ್ ಆಗಿದ್ದಾರೆ. ಭಾವನೆಗಳನ್ನು ತಡೆಯಲಾಗದೇ ಕಣ್ಣೀರು ಹಾಕಿದ್ದಾರೆ. ನಂತರ ಅವರು ಮನೆಯ ಸದಸ್ಯರೆಲ್ಲರನ್ನು ಕರೆದಿದ್ದಾರೆ. ಮನೆಯ ಸದಸ್ಯರು ರೇವಂತ್ ಅವರನ್ನು ಅಪ್ಪಿಕೊಂಡು ಶುಭಾಶಯ ಹೇಳಿದ್ದಾರೆ. ಇನ್ನು ರೇವಂತ್ ವಿಡಿಯೋದಲ್ಲಿ ಕಾಣುತ್ತಿದ್ದ ಪತ್ನಿಯ ಹಣೆಗೆ ಕುಂಕುಮ ಇಟ್ಟು, ಗಂಧವನ್ನು ಸವರಿ, ಅಕ್ಷತೆಯನ್ನು ಹಾಕಿ ಬಿಗ್ ಬಾಸ್ ಮನೆಯಿಂದಲೇ ಪತ್ನಿಯನ್ನು ಆಶೀರ್ವದಿಸಿದ್ದಾರೆ.

Leave A Reply

Your email address will not be published.