ಪತ್ನಿಯ ಬಗ್ಗೆ ಚುಚ್ಚು ಮಾತಾಡಿದ ನೆಟ್ಟಿಗರು: ಫೋಟೋ ಶೇರ್ ಮಾಡಿ ದುಃಖ ತೋಡಿಕೊಂಡ ಕಿರಿಕ್ ಕೀರ್ತಿ

Written by Soma Shekar

Published on:

---Join Our Channel---

ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ನೆಗೆಟಿವ್ ಕಾಮೆಂಟ್ ಗಳು ಬರುವುದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಅದರಿಂದ ಅವರಿಗೆ ಬೇಸರ ಆಗುವುದಿಲ್ಲ ಎಂದು ಕೊಂಡರೆ ಅದು ತಪ್ಪಾಗುತ್ತದೆ. ಅವರಿಗೂ ಸಹಾ ಬೇಸರ, ನೋವು ಹಾಗೂ ದುಃಖವಾಗುತ್ತದೆ. ಆರ್ ಜೆ, ಕನ್ನಡ ಕಿರುತೆರೆಯ ಶೋಗಳ ನಿರೂಪಕ, ಬಿಗ್ ಬಾಸ್ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲೂ ಸಕ್ರಿಯವಾಗಿರುವ ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತಾ ಅವರು ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಅರ್ಪಿತ ಅವರ ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಸೀರಿಯಲ್ ನಲ್ಲಿ ಸಹಾ ನಟಿಸುತ್ತಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಅವರು ಪೋಸ್ಟ್ ಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಅರ್ಪಿತ ಅವರ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದು ಅದರಿಂದ ಅರ್ಪಿತ ಅವರು ಬಹಳ ಬೇಸರ ಮಾಡಿಕೊಂಡಿದ್ದಾರೆ.

ಅವರು ತಂದೆಯನ್ನು ಅಪ್ಪಿಕೊಂಡು ಅಳುತ್ತಿರುವ ಫೋಟೋ ವನ್ನು ಕಿರಿಕ್ ಕೀರ್ತಿ ಅವರು ಶೇರ್ ಮಾಡಿಕೊಂಡು ಒಂದಷ್ಟು ವಿಚಾರ ಗಳನ್ನು ತಿಳಿಸಿದ್ದಾರೆ.‌ ಈ ಮೂಲಕ ಅವರು ಪತ್ನಿಯ ಬಗ್ಗೆ ಮಾತನಾಡಿದವರಿಗೆ ಉತ್ತರ ನೀಡಿದ್ದಾರೆ. ಕಿರಿಕ್ ಕೀರ್ತಿ ಅವರು ತಮ್ನ ಪೋಸ್ಟ್ ನಲ್ಲಿ, ಈ ಫೋಟೋದ ಹಿಂದೆ ಒಂದು ಕಥೆ ಇದೆ… ಬಹಳ ಬೇಸರದಿಂದ ಇದನ್ನು ಶೇರ್ ಮಾಡ್ತಿದ್ದೇನೆ…

ಇತ್ತೀಚೆಗೆ ನನ್ನ ಮಡದಿಯ ಜೊತೆಗೊಂದು ಫೋಟೋ ಶೇರ್ ಮಾಡಿದ್ದೆ. ಆ ಫೋಟೋಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ರು. ಅದ್ರಲ್ಲಿ ಒಬ್ಬರು ಅವಳನ್ನು ವಿಧವೆ ಅಂತ ಕರೆದಿದ್ರು. ಆ ಕಮೆಂಟ್ ನನ್ನ ಅತ್ತೆ ಮಾವನಿಗೆ ತುಂಬಾ ನೋವುಂಟು ಮಾಡಿತ್ತು. ಅವತ್ತು ಆ ಫೋಟೋದಲ್ಲಿ ತಾಳಿ ಇರಲಿಲ್ಲ ಅನ್ನೋ ಕಾರಣಕ್ಕೆ ತುಂಬಾ ಜನ‌ ಕೆಟ್ಟದಾಗಿ ಕಮೆಂಟ್ ಮಾಡಿದ್ರು… ಆ ಕಮೆಂಟ್‌ನಿಂದಾಗಿ ಅವಳ ಅಪ್ಪ ಅಮ್ಮ ಅವಳ ಜೊತೆ ಮಾತಾಡೋದೇ ಬಿಟ್ಟಿದ್ರು.

ಯಾಕಮ್ಮ ಹೀಗೆಲ್ಲಾ ಮಾತಾಡ್ತಾರೆ ಅಂತ ಕಣ್ಣೀರಾಗಿದ್ರು. 20 ದಿನದಿಂದ ಅತ್ತೆ ಮಾವ ನನ್ನ ಮಡದಿ ಜೊತೆ ಮಾತಾಡಿರಲಿಲ್ಲ. ದಿನವೂ ನೊಂದುಕೊಳ್ತಿದ್ಲು.. 15 ದಿನದ ನಂತರ ಇವತ್ತು ಗೌರಿ ಹಬ್ಬ ಅಂತ ಮನೆಗೆ ಬಂದಾಗ ನನ್ನ ಮಡದಿ ಕಣ್ಣೀರಾದ್ಲು. ಬಿಕ್ಕಿಬಿಕ್ಕಿ ಅತ್ತು ಅಪ್ಪ ಅಮ್ಮನನ್ನ ತಬ್ಬಿ ಗಳಗಳನೆ ಕಣ್ಣೀರು ಹಾಕಿದ್ಲು. ಒಂದು ಕಮೆಂಟ್ ಏನೆಲ್ಲಾ ಮಾಡಿಬಿಡ್ತು.

ಯಾವ ಖುಷಿಗೆ ಕಮೆಂಟ್ ಮಾಡ್ತಾರೋ ಗೊತ್ತಿಲ್ಲ… ಒಂದು ಕಮೆಂಟ್ ಏನೆಲ್ಲಾ ಮಾಡಬಹುದು ಯೋಚಿಸಿ… ಸೋಷಿಯಲ್ ಮೀಡಿಯಾನ ವಿ ಕೃ ತ ಸಂತೋಷಕ್ಕೆ ಬಳಸಬೇಡಿ. ನನ್ನ ಮೇಲಿನ ಕೋಪ ನನ್ನ ಮೇಲಿರಲಿ. ಕುಟುಂಬದವರ ಮೇಲೆ ಬೇಡ… ಒಂದು ನೆಗೆಟಿವ್ ಕಮೆಂಟ್‌ನಿಂದ ಅದರಿಂದ ಎಷ್ಟೋ ಸಂಸಾರಗಳು ಹೀಗಾಗಿವೆ… ಹಾಗಾಗಿಯೇ ಫೇಸ್ ಬುಕ್ಕಲ್ಲಿ ಕಮೆಂಟ್ ಆಪ್ಷನ್ನೇ ಡಿಲೀಟ್ ಮಾಡಿಬಿಟ್ಟೆ…

ಕೆಲವರ ವಿ ಕೃ ತಿಗೆ ನಾವ್ಯಾಕೆ ನೋವು ತಿನ್ನಬೇಕು…? ಕೈ ಮುಗಿದು ಕೇಳ್ತೀನಿ… ಪ್ಲೀಸ್ ಯಾರನ್ನೂ ನೋಯಿಸಬೇಡಿ… ಇಷ್ಟವಿಲ್ಲ ಅಂದ್ರೆ unfollow ಮಾಡಿ… ಕೆಟ್ಟದಾಗಿ ಯಾರಿಗೂ ಯಾವತ್ತೂ ಕಮೆಂಟ್ ಮಾಡಬೇಡಿ… ಕಣ್ಣೀರಲ್ಲೇ ಇದನ್ನು ಟೈಪ್ ಮಾಡುತ್ತಿದ್ದೇನೆ. ಅಲ್ಲಿರುವ ನನ್ನ ಮಗನ ಸಂತೋಷವಷ್ಟೇ ನನ್ನ ಇವತ್ತಿನ ಸ್ವರ್ಗ.. ಧನ್ಯವಾದ… ತಪ್ಪಿದ್ದರೆ ಕ್ಷಮೆ ಇರಲಿ… ನಿಮ್ಮ ಕಿರಿಕ್ ಕೀರ್ತಿ ಎಂದು ಬರೆದುಕೊಂಡಿದ್ದಾರೆ.

Leave a Comment