ಪತ್ನಿಯರಿಂದ ಕಂಗೆಟ್ಟ ಪತಿರಾಯರಿಗೆ ಮಾತ್ರವೇ ಈ ಆಶ್ರಮಕ್ಕೆ ಪ್ರವೇಶ: ಎಲ್ಲಿದೆ ಈ ವಿಶೇಷ ಆಶ್ರಮ??

0
139

ನೀವು ಆಶ್ರಮಗಳು ಹಾಗೂ ಆಧ್ಯಾತ್ಮಿಕ ಸ್ಥಳಗಳ ಬಗ್ಗೆ ಈಗಾಗಲೇ ಕೇಳಿರುವಿರಿ. ಇಲ್ಲಿ ಆಧ್ಯಾತ್ಮಿಕ ಗುರುಗಳು ತಮ್ಮಲ್ಲಿಗೆ ಬರುವ ಜನರಿಗೆ ಧ್ಯಾನ, ಯೋಗ, ಪ್ರವಚನ ಇತ್ಯಾದಿಗಳನ್ನು ತಿಳಿಸಿ ಕೊಡುತ್ತಾರೆ. ಇನ್ನೂ ಕೆಲವು ಆಶ್ರಮಗಳಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಸಹಾ ನೀಡಲಾಗುತ್ತದೆ. ಜನರಿಗೆ ಈ ವಿಶೇಷ ಸ್ಥಳಗಳ ಬಗ್ಗೆ ವಿಶೇಷ ಗೌರವ ಹಾಗೂ ಆದರಗಳು ಇವೆ. ಆದರೆ ನಾವು ಇಂದು ನಿಮಗೆ ಒಂದು ವಿಶೇಷ ವಾದ ಆಶ್ರಮದ ಕುರಿತಾಗಿ ಹೇಳಲು ಹೊರಟಿದ್ದೇವೆ. ಅಲ್ಲದೇ ಈ ಆಶ್ರಮದ ಕುರಿತಾಗಿ ಕೇಳಿದರೆ ನಿಮಗೂ ಸಹಾ ಅಚ್ಚರಿ ಉಂಟಾಗುವುದು ಸಹಜ ಎಂದು ಹೇಳಬಹುದು.

ಹಾಗಾದ್ರೆ ಈ ಆಶ್ರಮದ ವಿಶೇಷತೆ ಆದ್ರೂ ಏನೂ ಅನ್ನೋ ಕುತೂಹಲ ನಿಮಗೆ ಮೂಡಿದ್ರೆ ಕೇಳಿ. ಮಾಹಿತಿಗಳ ಪ್ರಕಾರ ಮಹಾರಾಷ್ಟ್ರದ ಔರಂಗಾಬಾದ್ ನಿಂದ ಸುಮಾರು 12 ಕಿಮೀ ದೂರದಲ್ಲಿ ಶಿರ್ಡಿ ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವಿಶೇಷವಾದ ಆಶ್ರಮವಿದೆ. ಈ ಆಶ್ರಮವನ್ನು ತೆರೆದಿರುವುದು ಪತ್ನಿ ಪೀಡಿತ ಪತಿಯರಿಗಾಗಿ ಮಾತ್ರ ಎನ್ನಲಾಗಿದೆ. ಹೌದು ಹೆಂಡತಿಯಿಂದ ಸಮಸ್ಯೆಯಾಗಿ, ಮನ ನೊಂದ ಗಂಡಂದರಿಗಾಗಿ ಈ ಆಶ್ರಮವನ್ನು ತೆರೆಯಲಾಗಿದೆ ಎನ್ನುವುದು ಎಲ್ಲರ ಗಮನವನ್ನು ಸೆಳೆದಿದೆ.

ಮಾದ್ಯಮಗಳ ವರದಿಯ ಪ್ರಕಾರ ಈ ಆಶ್ರಮದಲ್ಲಿ ಒಟ್ಟು 500 ಜನ ಈಗಾಗಲೇ ಬಂದು ಸಲಹೆಗಳನ್ನು, ಮಾರ್ಗದರ್ಶನವನ್ನು ಪಡೆದಿದ್ದಾರೆ ಎನ್ನಲಾಗಿದೆ. ಹೈವೇ ಯಲ್ಲಿ ನೋಡಿದಾಗ ಒಂದು ಕೋಣೆಯಂತೆ ಕಾಣುವ ಈ ಸ್ಥಳದ ಹತ್ತಿರಕ್ಕೆ ಬಂದಾಗ, ಒಳಗೆ ಒಂದು ಆಶ್ರಮದ ವಾತಾವರಣವು ಜನರನ್ನು ಸ್ವಾಗತಿಸುತ್ತದೆ. ಅಲ್ಲೊಂದು ಆಫೀಸ್ ಇದ್ದು, ಅಲ್ಲಿ ಪತ್ನಿ ಪೀ ಡಿ ತ ಪತಿಯರಿಗೆ ಅಗತ್ಯ ಇರುವ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಶನಿವಾರ, ಭಾನುವಾರಗಳ ದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಪೀ ಡಿ ತರಿಗೆ ಕೌನ್ಸಿಲಿಂಗ್ ನಡೆಸಲಾಗುತ್ತದೆ.

ಈ ಆಶ್ರಮಕ್ಕೆ ಛತ್ತೀಸ್ಗಢ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್ ಮುಂತಾದ ಕಡೆಗಳಿಂದ ಸಲಹೆಗಳಿಗಾಗಿ ಜನ ಆಶ್ರಮಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ಆಶ್ರಮದಲ್ಲಿ ಇರುವವರಿಗಾಗಿ ಮತ್ತು ಬರುವ ಜನರಿಗಾಗಿ ಕಿಚಡಿ, ಸಾಂಬಾರ್ ಮಾಡಿ ಬಡಿಸಲಾಗುತ್ತದೆ. ಸಮಸ್ಯೆಗಳಿಂದ ಬರುವ ಪತ್ನಿ ಪೀ ಡಿ ತರನ್ನು ಅವರ ಸಮಸ್ಯೆಗಳ ಆಧಾರದ ಮೇಲೆ ಎ ಬಿ ಸಿ ಎಂದು ಕ್ಯಾಟಗರಿ ಮಾಡಿ ವಿಭಜಿಸಲಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here