ಪತಿ ರಾಜ್ ಕುಂದ್ರಾ ಜೈಲಿನಲ್ಲಿರುವಾಗಲೇ ಹೊರಗೆ ಶುಭ ಸುದ್ದಿ ನೀಡಿದ ನಟಿ ಶಿಲ್ಪಾ ಶೆಟ್ಟಿ
ಪತಿ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆ ವಿಚಾರದಲ್ಲಿ ಬಂ ಧ ನಕ್ಕೆ ಒಳಗಾದ ಮೇಲೆ ಹೊರಗೆ ನಟಿ ಶಿಲ್ಪಾ ಶೆಟ್ಟಿ ಗೂ ಸಹಾ ಕಷ್ಟದ ದಿನಗಳು ಆರಂಭವಾಗಿದ್ದು ಸುಳ್ಳಲ್ಲ. ಈ ಪ್ರಕರಣದಿಂದಾಗಿ ಶಿಲ್ಪಾ ಶೆಟ್ಟಿ ತೀವ್ರವಾದ ಮುಜುಗರ ಪಡುವಂತಾಯಿತು. ಅಲ್ಲದೇ ಈ ವಿಚಾರದಲ್ಲಿ ಪತಿಯ ಜೊತೆಗೆ ಶಿಲ್ಪಾ ಪಾತ್ರ ಕೂಡಾ ಇದೆಯೋ ಇಲ್ಲವೋ ಎನ್ನುವ ವಿಚಾರವಾಗಿ ಸುಮಾರು ಆರು ಗಂಟೆಗಳ ಕಾಲ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸಹಾ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್ದರು. ಕೋರ್ಟು, ಕಛೇರಿ ಎಂದು ಸುತ್ತಾಡಬೇಕಾದ ಅನಿವಾರ್ಯತೆ ಎದುರಾಯಿತು. ಇದರಿಂದಾಗಿ ಶಿಲ್ಪಾ ಮಾದ್ಯಮಗಳಿಂದ ಸಾಧ್ಯವಾದಷ್ಟು ಅಂತರವನ್ನು ಕಾಯ್ದುಕೊಂಡಿದ್ದಾರೆ. ಅದು ಮಾತ್ರವೇ ಅಲ್ಲದೇ ಶಿಲ್ಪಾ ಕೆಲವು ಪ್ರಾಜೆಕ್ಟ್ ಗಳಿಂದ ಹೊರಗೆ ಬಂದಿದ್ದರು ಎಂದು ಸುದ್ದಿಗಳಾದವು. ಶಿಲ್ಪಾ ಶೆಟ್ಟಿ ಜಡ್ಜ್ ಆಗಿದ್ದ ಸೂಪರ್ ಡಾನ್ಸರ್ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಕೂಡಾ ಶಿಲ್ಪಾ ಶೆಟ್ಟಿ ಭಾಗವಹಿಸಿರಲಿಲ್ಲ.
ಜನಪ್ರಿಯ ಶೋ ಆದ ಸೂಪರ್ ಡಾನ್ಸರ್ ನಲ್ಲಿ ಶಿಲ್ಪಾ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ ಪ್ರಕರಣದ ನಂತರ ಶಿಲ್ಪಾ ಗೈರು ಹಾಜರಾದರು. ಶಿಲ್ಪಾ ಅವರ ಸ್ಥಾನಕ್ಕೆ ಪ್ರತಿ ವಾರ ಬಾಲಿವುಡ್ ನ ಸೆಲೆಬ್ರಿಟಿಗಳು ಅತಿಥಿಗಳಾಗಿ ಬಂದು ಜಡ್ಜ್ ಆಗಿ ಕುಳಿತರು. ಅಲ್ಲದೇ ಇನ್ನಿಬ್ಬರು ಜಡ್ಜ್ ಗಳಾದ ಅನುರಾಗ್ ಬಸು ಹಾಗೂ ಗೀತಾ ಅವರು ಶಿಲ್ಪಾ ಶೆಟ್ಟಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರೆ, ಅಲ್ಲದೇ ಶೋ ನ ಆಯೋಜಕರು ಶಿಲ್ಪಾ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ, ಅವರು ಶೋ ಗೆ ಯಾವಾಗ ಮರಳಿ ಬರುವರು ಎನ್ನುವುದು ತಿಳಿದಿಲ್ಲ, ಆದರೆ ಬಂದೇ ಬರುವರು ಎನ್ನುವ ನಂಬಿಕೆಯಿದೆ ಎಂದಿದ್ದರು. ಈಗ ಆ ನಂಬಿಕೆ ನಿಜವಾಗಿದೆ ಎನ್ನುವಂತಹ ಒಂದು ಬೆಳವಣಿಗೆ ಕಂಡು ಬಂದಿದೆ. ಬಹು ದಿನಗಳ ನಂತರ ನಟಿ ಶಿಲ್ಪಾ ಶೆಟ್ಟಿ ಶೋ ನಲ್ಲಿ ಭಾಗವಹಿಸುವ ಸುದ್ದಿ ಹೊರಗೆ ಬಂದಿದೆ.
ಹೌದು ಮಂಗಳವಾರ ಆಗಸ್ಟ್ 17 ರಂದು ಕಡೆದ ಸೂಪರ್ ಡಾನ್ಸರ್ ಶೋ ನ ಚಿತ್ರೀಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಿದ್ದಾರೆ. ಈ ವಾರಾಂತ್ಯಕ್ಕೆ ಈ ಎಪಿಸೋಡ್ ಗಳು ಪ್ರಸಾರವಾಗಲಿದೆ. ಬಹಳ ದಿನಗಳ ನಂತರ ಶೋ ನಲ್ಲಿ ಸ್ಪರ್ಧಿಗಳ ಹಾಗೂ ವೀಕ್ಷಕರ ಅಚ್ಚು ಮೆಚ್ಚಿನ ಜಡ್ಜ್ ಶಿಲ್ಪಾ ಅವರು ಹಾಜರಾಗಿರುವುದು ಸೂಪರ್ ಡಾನ್ಸರ್ ಶೋ ನ ಇಡೀ ತಂಡಕ್ಕೆ ಬಹಳ ಸಂತೋಷವನ್ನು ನೀಡಿದೆ. ಶೋ ನ ಇಡೀ ತಂಡ ಶಿಲ್ಪಾ ಶೆಟ್ಟಿ ಅವರ ಕಮ್ ಬ್ಯಾಕ್ ಗೆ ಅದ್ದೂರಿ ಸ್ವಾಗತವನ್ನು ನೀಡಿದೆ. ಒಟ್ಟಾರೆ ಬಹು ದಿನಗಳ ನಂತರ ಶಿಲ್ಪಾ ಶೆಟ್ಟಿ ತಮ್ಮ ಬೇಸರದ ಮೂಡ್ ನಿಂದ ಹೊರ ಬಂದಂತೆ ಕಾಣುತ್ತಿದೆ, ಎಲ್ಲವನ್ನು ಮರೆತು ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಆ್ಯಕ್ಟೀವ್ ಆಗಲು ಬಯಸಿದಂತೆ ಇದೆ.