ಪತಿ ಪಾದದ ಬಳಿ ಕುಳಿತು ಪೂಜಿಸಿದ್ದು ತಪ್ಪೇ? ಸಂಪ್ರದಾಯ ಪಾಲಿಸಿದ್ದಕ್ಕೆ ಟ್ರೋಲ್ ಆದ್ರು ನಟಿ ಪ್ರಣೀತಾ

Entertainment Featured-Articles Movies News

ಸ್ಯಾಂಡಲ್ವುಡ್ ಬ್ಯೂಟಿ, ದಕ್ಷಿಣ ಸಿನಿಮಾದ ಜನಪ್ರಿಯ ನಟಿ ಪ್ರಣೀತಾ ಸುಭಾಷ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟಿ ಪ್ರಣೀತಾ ಇತ್ತೀಚಿಗಷ್ಟೇ ಭೀಮನ ಅಮಾವಾಸ್ಯೆ ಹಬ್ಬವನ್ನು ಬಹಳ ಖುಷಿಯಿಂದ ಆಚರಿಸಿದ್ದರು. ಹಬ್ಬದ ದಿನದಂದು ನಟಿಯು ತಮ್ಮ ಪತಿಯ ಪಾದಗಳ ಬಳಿ ಕುಳಿತು, ಪಾದ ಪೂಜೆಯನ್ನು ಮಾಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿಯು ಫೋಟೋ ಶೇರ್ ಮಾಡಿದ ಮೇಲೆ ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಅದನ್ನು ನೋಡಿ ಸಾಕಷ್ಟು ಮೆಚ್ಚುಗೆಗಳನ್ನು ನೀಡಿದ್ದರು. ಅಲ್ಲದೇ ಅವರು ಸಂಸ್ಕೃತಿ, ಸಂಪ್ರದಾಯವನ್ನು ಆಚರಣೆ ಮಾಡಿದ್ದಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು.

ಆದರೆ ಇದೇ ವೇಳೆ ನಟಿಯು ಪತಿ ಪಾದಗಳ ಮುಂದೆ ಕುಳಿತ ಫೋಟೋವನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ನಟಿ ಪ್ರಣೀತಾ ಸುಭಾಷ್ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ನಟಿಸಿ ಹೆಸರನ್ನು ಪಡೆದಿರುವ ನಟಿ‌. ಆದರೆ ಇತ್ತೀಚಿನ ದಿನಗಳಲ್ಲಿ ನಟಿಯು ತಮ್ಮ ಸಿನಿಮಾ ವಿಷಯಗಳಿಗಿಂತ ಹೆಚ್ಚಾಗಿ ಖಾಸಗಿ ಜೀವನದ ವಿಷಯವಾಗಿಯೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಈಗಲೂ ಅವರು ಭೀಮನ ಅಮಾವಾಸ್ಯೆ ದಿನ ಪತಿಯ ಪಾದದ ಬಳಿ ಕುಳಿತು ಪಾದ ಪೂಜೆಯನ್ನು ಮಾಡಿದ್ದು, ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಬಳಿಕ ಇದನ್ನು ಟ್ರೋಲ್ ಮಾಡಲಾಯಿತು. ನಟಿ ಪ್ರಣೀತಾ ಟ್ರೋಲ್ ಮಾಡಿದವರಿಗೆ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

ನಟಿಯು ಪ್ರತಿಕ್ರಿಯೆ ನೀಡುತ್ತಾ, ನಾನು ನಮ್ಮ ಸಾಂಪ್ರದಾಯಿಕ ಆಚರಣೆ ಮತ್ತು ಪದ್ಧತಿಯನ್ನು ಅನುಸರಿಸುತ್ತೇನೆ. ಜನರಲ್ಲಿ ಎರಡು ರೀತಿಯ ದೃಷ್ಟಿಕೋನವಿದೆ. ಈ ವಿಚಾರವಾಗಿ 90% ಜನರು ಒಳ್ಳೆಯದನ್ನೇ ಹೇಳುತ್ತಾರೆ. ನಾನು ಒಳ್ಳೆಯದರ ಬಗ್ಗೆ ಯೋಚಿಸುತ್ತೇನೆ. ಚಿತ್ರರಂಗದಲ್ಲಿ ಇದ್ದ ಮಾತ್ರಕ್ಕೆ ನಾನು ನಮ್ಮ ಸಂಪ್ರದಾಯವನ್ನು ಫಾಲೋ ಮಾಡಬಾರದೆಂದು ಏನಿಲ್ಲವಲ್ಲಾ. ಕಳೆದ ವರ್ಷ ಸಹಾ ನಾನು ಭೀಮನ ಅಮಾವಾಸ್ಯೆ ಮಾಡಿದ್ದೆ, ಆದರೆ ಫೋಟೋ ಶೇರ್ ಮಾಡಿರಲಿಲ್ಲ. ಆದ ಕಾರಣ ಈ ವರ್ಷ ಫೋಟೋ ಶೇರ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ.

Leave a Reply

Your email address will not be published. Required fields are marked *