ಪತಿಯ ಜೊತೆಗಿನ ಫೋಟೋ ಶೇರ್ ಮಾಡಿದ ಪ್ರಿಯಾಂಕ ಚೋಪ್ರಾ: ಸ್ವಲ್ಪ ಆದ್ರೂ ನಾಚಿಕೆ ಇರಬೇಕು ಎಂದ ನೆಟ್ಟಿಗರು

Written by Soma Shekar

Published on:

---Join Our Channel---

ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೆ ತನ್ನ ಜನಪ್ರಿಯತೆಯನ್ನು ಮೆರೆದಿರುವ ನಟಿಯೆಂದರೆ ಪ್ರಿಯಾಂಕಾ ಚೋಪ್ರಾ. ಇತ್ತೀಚಿನ ದಿನಗಳಲ್ಲಿ ಅವರು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ ಸಹಾ ಚರ್ಚೆಗಳಲ್ಲಿ ಮಾತ್ರ ಸದಾ ಇರುತ್ತಾರೆ, ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಂಕಾ ಚೋಪ್ರಾ ದೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ಉಳಿದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಅವರು ಲಂಡನ್ ನಲ್ಲಿ ಬೀಡುಬಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಹೊಸ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋ ಬಹಳಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರೆ, ಬಹಳಷ್ಟು ಜನರು ಟೀಕೆಗಳನ್ನು ಮಾಡುತ್ತಾ ಸಾಗಿದ್ದಾರೆ.

https://www.instagram.com/p/CTLyU2CrMrk/?utm_medium=copy_link

ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಜೊತೆಗಿರುವ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಿಯಾಂಕ ಬಿ ಕಿ ನಿ ಧರಿಸಿ ಮಲಗಿ ಕೊಂಡಿದ್ದಾರೆ. ಅವರ ಹಿಂಭಾಗದಲ್ಲಿ ಪತಿ ನಿಕ್ ಜೋನಸ್ ಕೈಯಲ್ಲಿ ಚಾಕುವನ್ನು ಹಿಡಿದು ಕುಳಿತಿದ್ದಾರೆ. ಪ್ರಿಯಾಂಕಾ ಫೋಟೋಗಳು ಶೇರ್ ಮಾಡಿಕೊಂಡು ಸ್ನಾಕ್ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಫೋಟೋಗಳನ್ನು ಶೇರ್ ಮಾಡಿದ ಕೆಲವೇ ಹೊತ್ತಿನಲ್ಲಿ ಫೋಟೋಗಳು ಭರ್ಜರಿಯಾಗಿ ವೈರಲ್ ಆಗಿದೆ. ಅಭಿಮಾನಿಗಳಿಂದ ಅಪಾರವಾದ ಮೆಚ್ಚುಗೆಗಳು ಹರಿದುಬರುತ್ತಿದೆ. ಅದೇ ವೇಳೆ ಟೀಕೆಗಳಿಗೂ ಕೂಡಾ ಕೊರತೆ ಇಲ್ಲ ಎನ್ನುವಂತಾಗಿದೆ.

https://www.instagram.com/p/CTLuEV4n5Rc/?utm_medium=copy_link

ಅಭಿಮಾನಿಯೊಬ್ಬರು,‌ ನೀವಿಬ್ಬರೂ ಜೊತೆಯಲ್ಲಿ ಬಹಳ ಕ್ಯೂಟ್ ಆಗಿದ್ದೀರಿ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇದೇ ವೇಳೆ ನೆಟ್ಟಿಗರೊಬ್ಬರು, ಭಾರತ ಬಿಟ್ಟು ಹೋದಮೇಲೆ ಮಾನ ಮರ್ಯಾದೆ ಎಲ್ಲಾ ಮಾರಿರುವ ಹಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.‌ ಬಹಳಷ್ಟು ಜನ ನೆಟ್ಟಿಗರು ಫನ್ನಿ ಕಾಮೆಂಟ್ಗಳನ್ನು ಹಾಕುತ್ತಾ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇನ್ನು ಕೆಲಸದ ವಿಚಾರಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ ‘ದಿ ವೈಟ್ ಟೈಗರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ಹಾಲಿವುಡ್ ಚಿತ್ರಗಳಾದ “ಸಿಟಾಡೆಲ್”, “ಟೆಕ್ಸ್ಟ್ ಫಾರ್ ಯು” ಮತ್ತು “ಮ್ಯಾಟ್ರಿಕ್ಸ್ 4” ನಲ್ಲಿ ಮತ್ತು ಬಾಲಿವುಡ್ ನಲ್ಲಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಜೊತೆಯಲ್ಲಿ “ಜೀ ಲೆ ಜರಾ” ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Leave a Comment