ಕನ್ನಡ ಚಿತ್ರರಂಗದ ನಟಿ ಮೇಘನಾ ರಾಜ್ ಅವರು ತಮ್ಮ ಪತಿ , ದಿವಂಗತ ಚಿರಂಜೀವಿ ಸರ್ಜಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾದ ಪೋಸ್ಟ್ ಮಾಡುವ ಮೂಲಕ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮೇಘನರಾಜ್ ಅವರು ಒಂದು ವಿಶೇಷವಾದ ಫೋಟೋ ಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್ ನಲ್ಲಿ ಇರುವ ಈ ವಿಶೇಷವಾದ ಫೋಟೋ ಶೂಟ್ ನ ಸುಂದರವಾದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ರಾಜ ವಿಧಿವಶನಾದ ನಂತರ ರಾಣಿ ಮಗನಿಗೆ ರಾಜನ ಬಗ್ಗೆ ವಿಷಯಗಳನ್ನು ತಿಳಿಸುವ ಥೀಮ್ ಈ ಫೋಟೋ ಶೂಟ್ ಒಳಗೊಂಡಿದೆ. ರಾಜನು ಕಾಲ ವಶವಾದ ನಂತರ ರಾಣಿಯು ತನ್ನ ಸಾಮ್ರಾಜ್ಯವನ್ನು ಹೇಗೆ ನಿರ್ವಹಣೆ ಮಾಡುತ್ತಾಳೆ ಎನ್ನುವ, ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂದು ಬಿಂಬಿಸುವ ವಿಶೇಷವಾದ ಥೀಮ್ ನೊಂದಿಗೆ ಈ ಫೋಟೋ ಶೂಟ್ ನಡೆಸಲಾಗಿದೆ. ಫೋಟೋಶೂಟ್ ನ ಸುಂದರ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ.
ಇನ್ನು ಮೇಘನಾ ರಾಜ್ ಅವರು ತಮ್ಮ ಪೋಸ್ಟ್ ನಲ್ಲಿ ಫೋಟೋ ಗಳನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ ಕೆಲವು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಅವರು, ಕಷ್ಟಗಳ ಕೊನೆಯಲ್ಲಿ ಯಾವಾಗಲೂ ವಿಜಯೋತ್ಸವ ಇದ್ದೇ ಇರುತ್ತದೆ. ಬೆಂಕಿ ಇರುವ ಹಾದಿಯು ಹಲವು ವಿಷಯಗಳನ್ನು ಸಾಧಿಸುವ ಮಾರ್ಗವಾಗಿರುತ್ತದೆ. ಆದರೆ ಪ್ರಯತ್ನವು ಎಂದಿಗೂ ಸುಲಭವಾಗಿರುವುದಿಲ್ಲ. ಎಲ್ಲಾ ಭರವಸೆಗಳು ಮಸುಕಾದಾಗ ನಮ್ಮ ಜೀವನವೆಂಬ ಸುರಂಗದ ಕೊನೆಯಲ್ಲಿ ಬೆಳಕು ಸದಾ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ನನಗೆ ಆ ಬೆಳಕು ಚಿರು, ನನ್ನ ಪ್ರಯಾಣವು ಪ್ರಕಾಶಮಾನವಾಗಿ ಬೆಳೆಯಲು ನಾನು ಆ ಬೆಳಕಿನ ಕಡೆಗೆ ಸಾಗಬೇಕಾಗಿದೆ ಎಂದು ಬರೆದುಕೊಂಡು ಚಿರಂಜೀವಿ ಸರ್ಜಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳಿ, ನೀವು ನನ್ನ ಜೀವನ, ನನ್ನ ಬೆಳಕು ಎಂದು ಮೇಘನರಾಜ್ ಅವರು ಬರೆದುಕೊಂಡಿದ್ದಾರೆ. ಮೇಘನಾ ರಾಜ್ ಅವರು ಬರೆದುಕೊಂಡ ಸಾಲುಗಳನ್ನು ನೋಡಿ ಅವರ ಅಭಿಮಾನಿಗಳು ಭಾವುಕರಾಗಿ ಕಾಮೆಂಟ್ ಗಳನ್ನು ಮಾಡುತ್ತಾ ತಮ್ಮ ಅಭಿಮಾನ ನಟನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.