HomeEntertainmentಪತಿಯಿಂದ ದೂರಾಗಿ ಐಶಾರಾಮೀ ಜೀವನ ನಡೆಸುತ್ತಿರುವ ಈ ನಟಿಗೆ 47 ವಯಸ್ಸು ಎಂದರೆ ಯಾರೂ ನಂಬಲ್ಲ!!!

ಪತಿಯಿಂದ ದೂರಾಗಿ ಐಶಾರಾಮೀ ಜೀವನ ನಡೆಸುತ್ತಿರುವ ಈ ನಟಿಗೆ 47 ವಯಸ್ಸು ಎಂದರೆ ಯಾರೂ ನಂಬಲ್ಲ!!!

ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ, ತನಗಿಂತ ಕಿರಿಯನಾದ ಬಾಲಿವುಡ್ ಹೀರೋ ಅರ್ಜುನ್ ಕಪೂರ್ ಜೊತೆಗಿನ ಅಫೇರ್ ನ ಕಾರಣದಿಂದಾಗಿ ಬಾಲಿವುಡ್ ನ ನಟಿ, ಡಾನ್ಸರ್, ರಿಯಾಲಿಟಿ ಶೋ ಗಳ ಜಡ್ಜ್ ಹಾಗೂ ಫಿಟ್ನೆಸ್ ಗೆ ಹೆಸರಾದ ಸುಂದರಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿರುತ್ತಾರೆ.‌ ಇನ್ನು ಮಲೈಕಾಗೆ ವಿಚ್ಚೇದನ ನೀಡಿದ ಮೇಲೆ ನಟ ಅರ್ಬಾಜ್ ಕೂಡಾ ತಮ್ಮ ಹೊಸ ಗರ್ಲ್ ಫ್ರೆಂಡ್ ಜಾರ್ಜಿಯಾ ಅಂದ್ರಾನಿಯ ಜೊತೆಗೆ ಬಹಿರಂಗವಾಗಿ ಸುತ್ತುತ್ತಾ, ಮೋಜು, ಮಸ್ತಿ, ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಮಲೈಕಾ ತನಗಿಂತ 12 ವರ್ಷ ಕಿರಿಯನಾದ ಅರ್ಜುನ್ ಕಪೂರ್ ಜೊತೆಗಿನ ಅಪೇರ್ ಗೆ ಅಧಿಕೃತ ಮುದ್ರೆಯನ್ನು ಸಹಾ ಒತ್ತಾಗಿದೆ. ಪ್ರಸ್ತುತ ಮಲೈಕಾ ಅರೋರಾ ಅವರಿಗೆ 47 ವರ್ಷ ವಯಸ್ಸು. ಇವರ ತಾಯಿ ಕೇರಳ ಮೂಲದವರಾದರೆ, ತಂದೆ ಪಂಜಾಬಿ. ಮಲೈಕಾ ಮಾಡೆಲಿಂಗ್, ಅನಂತರ ಜಾಹೀರಾತು ಗಳಲ್ಲಿ ಕಾಣಿಸಿಕೊಂಡು, ಮುಂದೆ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಕಿರುತೆರೆಯಲ್ಲಿ ಕೂಡಾ ರಿಯಾಲಿಟಿ ಶೋ‌ಗಳ ಜಡ್ಜ್ ಆಗಿ ದೊಡ್ಡ ಜನಪ್ರಿಯತೆ ಪಡೆದುಕೊಂಡರು.

ಶಾರೂಖ್ ಖಾನ್ ಅಭಿನಯದ ದಿಲ್ ಸೇ ಸಿನಿಮಾದ ಚೆಯ್ಯಾ, ಚೆಯ್ಯಾ ಹಾಡಿಗೆ ಹೆಜ್ಜೆ ಹಾಕಿದ ಮಲೈಕಾ ನಂತರ ಹಲವು ಸಿನಿಮಾಗಳ ಐಟಂ‌ ಹಾಡುಗಳಿಗೆ ಹೆಜ್ಜೆ ಹಾಕಿದರು. ಮಲೈಕಾ ಹೆಜ್ಜೆ ಹಾಕಿದ ಹಾಡುಗಳು ಸಹಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಹಾಡುಗಳೇ ಆಗಿವೆ. ಮಲೈಕಾ ಡಾನ್ಸ್ ಗೆ ದೊಡ್ಡ ಅಭಿಮಾನಿಗಳ‌ ಬಳಗವೇ ಇದೆ. ರಿಯಾಲಿಟಿ ಶೋ ಗಳ ಜಡ್ಜ್ ಆಗಿ ಮಲೈಕಾ ಇನ್ನಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ.‌

ಪತಿಯೊಡನೆ ವಿಚ್ಚೇದನ ಪಡೆದ ನಂತರ‌ ಮಲೈಕಾ ಮುಂಬೈನ ಬಾಂದ್ರಾ ದಲ್ಲಿ ಒಂದು ಬಹು ಮಹಡಿ ಕಟ್ಟಡದ ಐಶಾರಾಮೀ ಮನೆಯಲ್ಲಿ ನೆಲೆಸಿದ್ದಾರೆ. ಈ ಅಪಾರ್ಟ್ಮೆಂಟ್ ಖರೀದಿಗಾಗಿ ಮಲೈಕಾ ದೊಡ್ಡ‌ ಮೊತ್ತವನ್ನೇ ನೀಡಿದ್ದಾರೆ ಎನ್ನಲಾಗಿದೆ. ಆಗಾಗ ಮಲೈಕಾ ತಮ್ಮ ಈ ಐಶಾರಾಮೀ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಾರೆ. ಹಬ್ಬಗಳ ವೇಳೆ ಮನೆಯನ್ನು ಸಾಂಪ್ರದಾಯಿಕವಾಗಿ ಸಿಂಗರಿಸುತ್ತಾರೆ ಮಲೈಕಾ.

ಮಲೈಕಾ ಅವರ ಮನೆ ಬಿಳಿಯ ಬಣ್ಣದ ಥೀಮ್ ನಲ್ಲಿ ಇದೆ. ಮನೆಯಲ್ಲಿ ಪರದೆಗಳು, ಫರ್ನೀಚರ್ ಎಲ್ಲವೂ ಕೂಡಾ ಬಿಳಿಯ ಬಣ್ಣದಲ್ಲಿ ಇವೆ. ಮನೆಯ ಒಳಗೆ ಹಾಗೂ ಹೊರಗೆ ಗಿಡಗಳ ಬಗ್ಗೆ ವಿಶೇಷ ಕಾಳಜಿಯನ್ನು ಮಲೈಕಾ ವಹಿಸಿದ್ದಾರೆ. ಮನೆಯ ಒಳಗೆ ಹಲವು ವಿಶೇಷ ಗಿಡಗಳನ್ನು ಬಹಳ‌‌ ಅಲಂಕಾರಿಕವಾಗಿ ಇಡಲಾಗಿದೆ. ಬಾಲ್ಕನಿಯಲ್ಲಿ ಕೂಡಾ ಗಿಡಗಳು ಪ್ರಮುಖ ಆಕರ್ಷಣೆಯಾಗಿವೆ.

ಮನೆಯ ನಾಲ್ಕು ಕಡೆಗಳಲ್ಲಿ ಆರಾಮದಾಯಕ ಎನಿಸುವಷ್ಟು ಬಾಲ್ಕನಿ ಇದೆ. ಆದ್ದರಿಂದಲೇ ಮನೆಗೆ ಚೆನ್ನಾಗಿ ಗಾಳಿ, ಬೆಳಕು ಬರುತ್ತದೆ. ಮಲೈಕಾ ಪೆಟ್ ಲವರ್ ಕೂಡಾ ಹೌದು. ಇತ್ತೀಚಿಗೆ ಅವರು ಫೋಟೋಗಳಲ್ಲಿ ತಮ್ಮ ಮುದ್ದಿನ ನಾಯಿ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಪ್ರಸ್ತುತ ಮಲೈಕಾ ಅರ್ಜುನ್ ಕಪೂರ್ ಜೊತೆಗೆ ಜೀವನ ಎಂಜಾಯ್ ಮಾಡುತ್ತಿದ್ದಾರೆ.

- Advertisment -