ಪಡ್ಡೆ ಹುಡುಗರ ಹಾರ್ಟ್ ನಲ್ಲಿ ಕಿಚ್ಚು ಹೊತ್ತಿಸಿದ ರಶ್ಮಿಕಾ: ಸಖತ್ ಥ್ರಿಲ್ಲಾದ್ರು ಅಭಿಮಾನಿಗಳು

Written by Soma Shekar

Published on:

---Join Our Channel---

ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿ ಇಟ್ಟ ನಟಿ ರಶ್ಮಿಕಾ ಮಂದಣ್ಣ ಇಂದು ದಕ್ಷಿಣದ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಬಾಲಿವುಡ್ ಗೂ ಈಗಾಗಲೇ ಪ್ರವೇಶ ನೀಡಿದ್ದಾರೆ. ನ್ಯಾಷನಲ್ ಕ್ರಷ್ ಎನ್ನವಂತಹ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ರಶ್ಮಿಕಾ. ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಇನ್ನಷ್ಟು ಜನಪ್ರಿಯತೆ ತನ್ನದಾಗಿಸಿಕೊಂಡಿದ್ದಾರೆ. ಇಂತಹ ಜನಪ್ರಿಯ ನಟಿ ನಟಿಸಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ತೆಲುಗಿನ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ. ಈ ಸಿನಿಮಾದ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಬಹಳ ಹೆಚ್ಚಾಗಿದೆ. ಇವೆಲ್ಲವುಗಳ ನಡುವೆ ಪುಷ್ಪ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯ ನಂತರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಿವೆ. ಯೂಟ್ಯೂಬ್ ನಲ್ಲಿ ಟ್ರೇಲರ್ ಗೆ ದೊಡ್ಡ ಮಟ್ಟದಲ್ಲಿ ವೀಕ್ಷಣೆಗಳು ಬರುತ್ತಿವೆ. ಟ್ರೇಲರ್ ನಲ್ಲಿ ರಶ್ಮಿಕಾರ ಬೋಲ್ಡ್ ಮತ್ತು ಬಿಂದಾಸ್ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ಹಳ್ಳಿ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದರೂ ಇಲ್ಲಿ ಗ್ಲಾಮರ್ ಗೆ ಕೊರತೆಯೇನೂ ಇಲ್ಲವೆನ್ನುವಂತೆ ಮಿಂಚುತ್ತಿದ್ದಾರೆ. ತೆಲುಗು ಹುಡುಗಿಯರ ಸಾಂಪ್ರದಾಯಿಕ ವಸ್ತ್ರವಾದ ಲಂಗಾ ಓಣಿ ಅಂದರೆ ಭಾಷೆಯಲ್ಲಿ ಲಂಗ ದಾವಣಿಯ ಡ್ರೆಸ್ ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಬಹಳ ಬೋಲ್ಡ್ ಮತ್ತು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.‌ ಈ ಹಿಂದೆ ರಂಗಸ್ಥಲಂ ಸಿನಿಮಾ ನಿರ್ದೇಶನ ಮಾಡಿದ್ದ ಸುಕುಮಾರ್ ಅವರೇ ಪುಷ್ಪ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಕ್ತ ಚಂದನ ಕಳ್ಳ ಸಾಗಣೆಯ ಕುರಿತಾದ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ.

ರಶ್ಮಿಕಾ ತಾನು ಮಾಡ್ರನ್ ಪಾತ್ರಗಳು ಮಾತ್ರವೇ ಅಲ್ಲದೇ ಹಳ್ಳಿ ಹುಡುಗಿಯ ಪಾತ್ರವನ್ನು ಸಹಾ ಮಾಡಲು ಸೈ ಎನ್ನುವಂತೆ ಟ್ರೇಲರ್ ನಲ್ಲಿ ಕಾಣುತ್ತಿದೆ. ಸಿನಿಮಾದಲ್ಲಿನ ರಶ್ಮಿಕಾ ನಟನೆಯ ದೃಶ್ಯಗಳು ರಶ್ಮಿಕ ಅವರ ಅಭಿಮಾನಿಗಳಿಗಂತೂ ಬಹಳ ಖುಷಿಯನ್ನು ನೀಡುತ್ತಿದೆ. ರಶ್ಮಿಕಾ ಹಳ್ಳಿ ಹುಡುಗಿಯ ವೇಷದಲ್ಲಿ ಬಹಳ ಕ್ಯೂಟ್ ಆಗಿ ಕಾಣುತ್ತಿದ್ದು, ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಸಾಮಿ ಹಾಡಿನ ಮೂಲಕವೇ ಪಡ್ಡೆಗಳ ಹೃದಯದಲ್ಲಿ ಕಚಗುಳಿಯನ್ನು ಇಟ್ಟಿದ್ದ, ರಶ್ಮಿಕಾ ಮಂದಣ್ಣ ಈಗ ಟ್ರೈಲರ್ ಬಿಡುಗಡೆಯ ನಂತರ ಪಡ್ಡೆಗಳ ಎದೆಯಲ್ಲಿ ಕಿಚ್ಚನ್ನೇ ಹೊತ್ತಿಸಿದ್ದಾರೆ.

Leave a Comment