ಪಠಾಣ್ ಗಾಗಿ ಶಾರೂಖ್ ಖಾನ್ ಹೊಸ ಲುಕ್?? ವೈರಲ್ ಫೋಟೋ ಹಿಂದಿನ ಅಸಲಿ ವಿಚಾರ ಇಲ್ಲಿದೆ!!

Entertainment Featured-Articles News

ಬಾಲಿವುಡ್ ನ ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಖ್ಯಾತ ನಾಮರಾದ ಸ್ಟಾರ್ ನಟ ಶಾರೂಖ್ ಖಾನ್ 2018 ರಿಂದ ಸಹಾ ತೆರೆಯ ಮೇಲೆ ಯಾವುದೇ ಹೊಸ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಬೇಸತ್ತಿರುವ ನಟನಿಗೆ ಒಂದು ಸೂಪರ್ ಹಿಟ್ ಸಿನಿಮಾದ ಅಗತ್ಯ ಅನಿವಾರ್ಯ ಎನ್ನುವಂತಾಗಿದೆ.‌ ಶಾರೂಖ್ ಖಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲವಾದರೂ ಒಂದಲ್ಲಾ ಒಂದು ವಿಷಯದಿಂದಾಗಿ ಅವರು ಮಾದ್ಯಮಗಳ ಸುದ್ದಿಗಳಲ್ಲಿ ಆಗಾಗ ಚರ್ಚೆಯ ವಿಷಯವಾಗುತ್ತಲೇ ಇರುತ್ತಾರೆ ಎನ್ನುವುದು ಸಹಾ ವಾಸ್ತವವಾದ ವಿಷಯವಾಗಿದೆ.

ಶಾರೂಖ್ ಖಾನ್ ಸ್ಟಾರ್ ಡಂ ಹೇಗಿದೆ ಎಂದರೆ, ಕೆಲವೊಮ್ಮೆ ಅವರ ಅಭಿಮಾನಿಗಳು ಶಾರೂಖ್ ಖಾನ್ ಕಮ್ ಬ್ಯಾಕ್ ಎಂದು ಟ್ವಿಟರ್ ನಲ್ಲಿ ಮಾಡುವ ಟ್ವೀಟ್ ಗಳು, ಹ್ಯಾಷ್ ಟ್ಯಾಗ್ ಗಳೇ ದೊಡ್ಡ ಟ್ರೆಂಡ್ ಆಗಿ ಬಿಡುತ್ತವೆ. ಈಗ ಮತ್ತೊಮ್ಮೆ ಶಾರೂಖ್ ಸುದ್ದಿಯಾಗಿದ್ದಾರೆ. ಈ ಬಾರಿ ಶಾರೂಖ್ ಸುದ್ದಿಯಾಗಿರುವುದು ಇನ್ಸ್ಟಾಗ್ರಾಂ ನಲ್ಲಿ ಒಂದು ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಹೊಸ ಫೋಟೋ ಒಂದರಿಂದ. ಹೌದು ಶಾರೂಖ್ ಹೊಸ ಲುಕ್ ಅಭಿಮಾನಿಗಳಿಗೆ ತೀವ್ರ ಕುತೂಹಲವನ್ನು ಮೂಡಿಸಿದೆ.

ಶಾರೂಖ್ ಖಾನ್ ಶೇರ್ ಮಾಡಿಕೊಂಡ ಈ ಹೊಸ ಫೋಟೋ ಭರ್ಜರಿ ವೈರಲ್ ಆಗಿದೆ. ಈ ಫೋಟೋ ನೋಡಿದ ಮೇಲೆ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಭಿನ್ನ, ವಿಭಿನ್ನ ರೀತಿಯಲ್ಲಿ ಈ ಫೋಟೋ ಯಾವ ಕಾರಣಕ್ಕೆ, ಹೊಸ ಗೆಟಪ್ ಯಾವ ಸಿನಿಮಾಕ್ಕೆ ಎಂದು ಗೆಸ್ ಮಾಡಲು ಆರಂಭಿಸಿ, ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಇದು ಪಠಾಣ್ ಸಿನಿಮಾದಲ್ಲಿ ಶಾರೂಖ್ ಲುಕ್ ಎಂದರೆ, ಇನ್ನೂ ಕೆಲವರು ಅಲ್ಲ ಇದೊಂದು ಹೊಸ ಜಾಹೀರಾತಿಗಾಗಿ ಮಾಡಿರುವ ಲುಕ್ ಎಂದಿದ್ದಾರೆ.

ಹಾಗಾದರೆ ಈ ಫೋಟೋ ದಲ್ಲಿನ ಹೊಸ ಲುಕ್ ನ ಹಿಂದಿನ ವಿಚಾರವಾದರೂ ಏನು?? ಬನ್ನಿ ನಾವು ನಿಮಗೆ ಹೇಳ್ತೀವಿ. ವೈರಲ್ ಆಗಿರುವ ಫೋಟೋದಲ್ಲಿ ಶಾರೂಖ್ ಖಾನ್ ಉದ್ದವಾದ ತಲೆ ಕೂದಲು, ಉದ್ದವಾದ ಗಡ್ಡ, ಬ್ಲಾಕ್ ಟೆಕ್ಸಿಡೋ ಧರಿಸಿರುವ ಶಾರೂಖ್ ಲುಕ್ ಅನೇಕರ ಗಮನ ಸೆಳೆದಿದೆ. ಆದರೆ ಈ ಫೋಟೋದ ಅಸಲಿಯತ್ತು ಏನೆಂದರೆ ಇದು ಒಂದು ಎಡಿಟೆಡ್ ಫೋಟೋ ಆಗಿದೆ. ಈ ಹಿಂದೆ ಒಂದು ಫೋಟೋ ಶೂಟ್ ವೇಳೆ ಡಬ್ಬೂ ರತ್ನಾನಿ ಕ್ಲಿಕ್ ಮಾಡಿದ್ದ ಫೋಟೋ ವನ್ನಹ ಎಡಿಟ್ ಮಾಡಿ ನೆಟ್ಟಿಗರು ಅದಕ್ಕೆ ಹೊಸ ಲುಕ್ ನೀಡಿದ್ದಾರೆ.

Leave a Reply

Your email address will not be published. Required fields are marked *