ಪಕ್ಕಾ ಹಳ್ಳಿ ಹುಡುಗಿಯಾದ ನಿವೇದಿತಾ ಗೌಡ: ಅಂದವಾದ ದೇಸೀ ಲುಕ್ ನೋಡಿ ಅಭಿಮಾನಿಗಳು ಫಿದಾ!! ಯಾವುದಕ್ಕಾಗಿ ಈ ಹೊಸ ಲುಕ್ ?
ಬಿಗ್ ಬಾಸ್ ನ ಮೂಲಕ ಫೇಮಸ್ ಆದ ಟಿಕ್ ಟಾಕ್ ಬೆಡಗಿ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಅಭಿಮಾನಿಗಳ ಜೊತೆಗೆ ಅವರು ನಿರಂತರವಾಗಿ ಸಂಪರ್ಕದಲ್ಲಿ ಇರುತ್ತಾರೆ. ಇನ್ಸ್ಟಾಗ್ರಾಂ ನಲ್ಲಿ ತಮ್ಮನ್ನು ಫಾಲೋ ಮಾಡುವ ದೊಡ್ಡ ಸಂಖ್ಯೆಯ ಅಭಿಮಾನಿಗಳು, ಫಾಲೋಯರ್ಸ್ ಗಳನ್ನು ಖುಷಿಯಾಗಿಡಲು ಅವರು ಯಾವಾಗಲೂ ತಮ್ಮ ಅಂದವಾದ ಫೋಟೋಗಳು, ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ರೀಲ್ಸ್ ವೀಡಿಯೋ ಗಳ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಾರೆ ನಿವೇದಿತಾ ಗೌಡ. ಅವರು ಶೇರ್ ಮಾಡುವ ಫೋಟೋಗಳು, ವೀಡಿಯೋಗಳಿಗೆ ಸಾಕಷ್ಟು ಮೆಚ್ಚುಗೆಗಳು ಸಹಾ ಹರಿದು ಬರುತ್ತವೆ.
ಈಗ ನಿವೇದಿತಾ ಗೌಡ ಅವರು ಪಕ್ಕಾ ಗ್ರಾಮೀಣ ಹುಡುಗಿಯ ಲುಕ್ ನಲ್ಲಿ ಕ್ರೇಜಿಸ್ಟಾರ್ ರವಿ ಚಂದ್ರನ್ ಅವರ ಸೂಪರ್ ಹಿಟ್ ಸಿನಿಮಾ ರಾಮಾಚಾರಿಯ, ಸೂಪರ್ ಹಿಟ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಸುಂದರವಾಗಿ ಲಂಗ, ದಾವಣಿಯನ್ನು ಧರಿಸಿ, ಹಳ್ಳಿ ಹುಡುಗಿಯಂತೆ ಜಡೆ ಹೆಣೆದು, ಕೈ ತುಂಬಾ ಬಳೆಗಳನ್ನು ಧರಿಸಿ, ಹಣೆಯಲ್ಲಿ ಬೊಟ್ಟು ಇಟ್ಟುಕೊಂಡು ಬಹಳ ಸರಳ, ಸುಂದರ ಲುಕ್ ನಲ್ಲಿ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅವರ ಈ ಲುಕ್ ನೋಡಿ ಅವರ ಅಭಿಮಾನಿಗಳು ಖುಷಿಗೊಂಡಿದ್ದಾರೆ ಹಾಗೂ ಮೆಚ್ಚುಗೆಗಳನ್ನು ಸಹಾ ಸೂಚಿಸಿದ್ದಾರೆ.
ತೆಂಗಿನ ತೋಟ, ಹಸಿರು ಗದ್ದೆಯಿಂದ ಕಂಗೊಳಿಸುತ್ತಿರುವ ಜಾಗದಲ್ಲಿ ನಿಂತು ನಿವೇದಿತಾ ಅವರು ರಾಮಾಚಾರಿ ಸಿನಿಮಾ ಹಾಡಿಗೆ ರೀಲ್ಸ್ ಮಾಡಿದ್ದು, ಸ್ಥಳ ಹಾಗೂ ಅವರ ಲುಕ್ ಎರಡೂ ಸಹಾ ಮನಮೋಹಕವಾಗಿದೆ. ರಾಮಾಚಾರಿ ಸಿನಿಮಾದ ಎವರ್ ಗ್ರೀನ್ ಹಾಡು ಆಕಾಶದಾಗೇ ಯಾರೋ ಮಾಯಗಾರನು ಚಿತ್ತಾರ ಮಾಡಿ ಹೋಗೋನೇ ಹಾಡಿಗೆ ರೀಲ್ಸ್ ವೀಡಿಯೋ ಮಾಡಿದ್ದ, ಅಂದವಾದ ವೀಡಿಯೋ ನೋಡಿ ಅಭಿಮಾನಿಗಳ ಹೃದಯ ಧಕ್ ಧಕ್ ಎಂದಿದೆ. ಅಭಿಮಾನಿಗಳು ವೈವಿದ್ಯಮಯ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಾ ಮೆಚ್ಚುಗೆಗಳನ್ನು ನೀಡುತ್ತಿದ್ದಾರೆ.
ನಿವೇದಿತಾ ಗೌಡ ಅವರಿಗೆ ಇನ್ಸ್ಟಾಗ್ರಾಂ ನಲ್ಲಿ 1.5 ಮಿಲಿಯನ್ ಫಾಲೋಯರ್ಸ್ ಇದ್ದಾರೆ. ನಿವೇದಿತಾ ಅವರು ಸಾವಿರಾರು ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಿವೇದಿತಾ ಅವರು ಮಿಸೆಸ್ ಇಂಡಿಯಾ ಕಿರೀಟವನ್ನು ಗೆದ್ದು ಸದ್ದು ಮಾಡಿದ್ದಾರೆ. ಅಲ್ಲದೇ ತೆಲುಗು ಸಿನಿಮಾವೊಂದರ ಮೂಲಕ ಸಿನಿಮಾ ರಂಗಕ್ಕೂ ಸಹಾ ಅಡಿಯಿಡಲು ನಿವೇದಿತಾ ಗೌಡ ಅವರು ಸಜ್ಜಾಗಿದ್ದಾರೆ ಎನ್ನುವ ಸುದ್ದಿಯೊಂದು ಸಹಾ ಹರಿದಾಡಿದ್ದು, ಅವರಿಗೆ ಹಲವು ಅವಕಾಶಗಳು ಅರಸಿ ಬರುತ್ತಿವೆ ಎನ್ನಲಾಗಿದೆ.