ಪಂತ್ ಬಿಟ್ಟು ಪಾಕ್ ನ ಆಟಗಾರನ ಮೇಲೆ ಮನಸ್ಸಾಯ್ತಂತೆ? ಬಾಲಿವುಡ್ ಬೆಡಗಿಯ ವೀಡಿಯೋ ವೈರಲ್

Entertainment Featured-Articles Movies News

ಬಾಲಿವುಡ್ ನಟಿ ಊರ್ವಶಿ ರೌಟೇಲ್ ಇತ್ತೀಚಿನ ದಿನಗಳಲ್ಲಿ ತಮ್ಮ ಕ್ರಿಕೆಟ್ ಪ್ರೇಮದಿಂದ ಸಾಕಷ್ಟು ಸುದ್ದಿಗಳಲ್ಲಿ ಹರಿದಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಅವರು ಭಾರತದ ಕ್ರಿಕೆಟ್ ಆಟಗಾರ ರಿಷಭ್ ಪಂತ್ ಜೊತೆಗಿನ ವಿವಾದಗಳ ಕಾರಣದಿಂದಾಗಿ ಸಿಕ್ಕಾಪಟ್ಟೆ ಚರ್ಚೆಗಳಲ್ಲಿದ್ದರು. ಇವರಿಬ್ಬರ ನಡುವಿನ ಶೀತಲ ಸಮರವು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿತ್ತು. ಇವೆಲ್ಲವುಗಳ ನಡುವೆಯೇ ಊರ್ವಶಿ ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗಳನ್ನು ವೀಕ್ಷಣೆ ಮಾಡಲು, ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ವೀಕ್ಷಣೆಗಾಗಿ ನಟಿ ಸ್ಟೇಡಿಯಂ ನಲ್ಲಿ ಹಾಜರಾಗಿದ್ದರು.

ಸೆಪ್ಟೆಂಬರ್‌ 4 ರಂದು ಪಂದ್ಯ ವೀಕ್ಷಣೆಗೆ ಬಂದಿದ್ದ ಊರ್ವಶಿ ರಿಷಭ್ ಪಂತ್ ಗಾಗಿ ಬಂದಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುವಾಗಲೇ ನಟಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಏಕೆಂದರೆ ಅಂದು ನಟಿಯ ಕಣ್ಣು ರಿಷಭ್ ಪಂತ್ ಮೇಲಲ್ಲ ಬದಲಾಗಿ ಪಾಕಿಸ್ತಾನದ ಕ್ರಿಕೆಟಿಗನ ಮೇಲೆ ಇತ್ತು ಎನ್ನಲಾಗಿದೆ. ನಟಿ ಊರ್ವಶಿ ರೌಟೇಲಾ ಮತ್ತು ಭಾರತೀಯ ಕ್ರಿಕೆಟ್ ಆಟಗಾರ ರಿಷಭ್ ಪಂತ್ ನಡುವೆ ಏರ್ಪಟ್ಟಿರುವ ಭಿನ್ನಾಭಿಪ್ರಾಯದ ವಿಚಾರವು ಎಲ್ಲರಿಗೂ ತಿಳಿದೇ ಇದೆ. ಈ ಜಗಳದ ನಡುವೆಯೇ ಊರ್ವಶಿಗೆ ಪಾಕಿಸ್ತಾನ ಕ್ರಿಕೆಟ್ ಆಟಗಾರ ನಸೀಮ್ ಶಾ ಮೇಲೆ ಕ್ರಶ್ ಆಗಿರುವಂತೆ ಕಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿದೆ ನಟಿ ಹಂಚಿಕೊಂಡಂತಹ ಒಂದು ಇನ್ಸ್ಟಾಗ್ರಾಂ ರೀಲ್ ವೀಡಿಯೋ.

ಪಂದ್ಯದ ನಂತರ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಸೀಮ್ ಅವರ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ನಸೀಮ್ ಪರದೆಯ ಮೇಲೆ ಊರ್ವಶಿಯನ್ನು ನೋಡಿ ಮೈದಾನದಲ್ಲಿ ನಗುತ್ತಿದ್ದರೆ, ಊರ್ವಶಿ ತುಸು ನಾಚಿಕೆಯಿಂದ ಸ್ಮೈಲ್ ನೀಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ನೋಡುತ್ತಿರುವುದು ಕಂಡಿದೆ. ಈ ವೀಡಿಯೋ ವೈರಲ್ ಆದ ಮೇಲೆ ಊರ್ವಶಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅದಾದ ನಂತರ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ವೀಡಿಯೋ ಡಿಲೀಟ್ ಮಾಡಿದ್ದಾರೆ.

ಆದರೆ ಫ್ಯಾನ್ ಪೇಜ್ ಗಳಲ್ಲಿ ಈಗಾಗಲೇ ಈ ವೀಡಿಯೋ ಶೇರ್ ಆಗಿದ್ದು, ಭರ್ಜರಿಯಾಗಿ ಇದು ವೈರಲ್ ಆಗಿದೆ. ಊರ್ವಶಿ ಅವರ ಈ ವೈರಲ್ ವೀಡಿಯೋಗೆ ಈಗ ವೈವಿದ್ಯಮಯ ಎನಿಸುವಂತಹ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಭಾರತ ಮಾತ್ರವೇ ಅಲ್ಲದೇ ಪಾಕಿಸ್ತಾನದಿಂದಲೂ ಸಹಾ ಈ ವೀಡಿಯೋಗೆ ಕಾಮೆಂಟ್ ಗಳು ಹರಿದು ಬರುತ್ತಿವೆ. ಒಟ್ಟಾರೆ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ಸುದ್ದಿಯಾಗಿ, ಟ್ರೋಲಿಗರಿಗೆ ಭರ್ಜರಿ ಆಹಾರವಾಗಿದ್ದಾರೆ ಎನ್ನುವುದರಲ್ಲಿ ಸುಳ್ಳಿಲ್ಲ.

Leave a Reply

Your email address will not be published.