ಪಂಜಾಬ್ ಗೆ ಕಾಲಿಟ್ಟ ಕಂಗನಾಗೆ ಕಾದಿತ್ತು ಆ ಘಾ ತ: ಕಂಗನಾ ಕಾರ್ ಮೇಲೆ ಪ್ರತಿಭಟನಾಕಾರರ ಧಾಳಿ

Written by Soma Shekar

Published on:

---Join Our Channel---

ಬಾಲಿವುಡ್‌ ನಟಿ ಕಂಗನಾ ರಣಾವತ್ ತಾನೊಬ್ಬ ಅದ್ಭುತ ಕಲಾವಿದೆ ಎನ್ನುವುದನ್ನು ಸಿನಿಮಾದ ತಮ್ಮ ಪಾತ್ರಗಳ ಮೂಲಕ ಸಾಬೀತು ಮಾಡಿದ್ದಾರೆ. ಆದರೆ ನಟಿ ಕಂಗನಾ ಮಾತ್ರ ಇತ್ತೀಚಿಗೆ ಸಿನಿಮಾಗಳಿಗಿಂತ ವಿವಾದಗಳಿಂದಾಗಿಯೇ ಹೆಚ್ಚು ಸುದ್ದಿಯಾಗಿದ್ದಾರೆ. ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಮಾಡುವ ವಿ ವಾ ದಾ ತ್ಮ ಕ ಪೋಸ್ಟ್ ಗಳು, ನೀಡುವ ಹೇಳಿಕೆಗಳು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕುತ್ತವೆ. ಇದೇ ಕಾರಣದಿಂದಾಗಿಯೇ ಟ್ವಿಟರ್ ನಟಿಯ ಖಾತೆಯನ್ನು ಈಗಾಗಲೇ ರದ್ದು ಮಾಡಿದೆ. ಆದರೆ ಇನ್ಸ್ಟಾಗ್ರಾಂ ನಲ್ಲಿ ಕಂಗನಾ ಆ್ಯಕ್ಟೀವ್ ಆಗಿದ್ದು, ಅಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಕಂಗನಾ ದೇಶದಲ್ಲಿ ನಡೆಯುತ್ತಿದ್ದ ರೈತ ಪ್ರ ತಿ ಭಟ ನೆ ಬಗ್ಗೆ ಕೂಡಾ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದರು. ಅದರಲ್ಲಿ ಬಹುತೇಕ ಕಂಗನಾ ರೈತ ಪ್ರ ತಿ ಭಟ ನೆಯನ್ನು ವಿ ರೋ ಧಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕಂಗನಾ ಇಂದು ಪಂಜಾಬ್ ಮೂಲಕ ಕಾರಿನಲ್ಲೇ ತೆರಳುವಾಗ, ಅವರ ಕಾರಿನ ಮೇಲೆ ಧಾ ಳಿ ನಡೆದಿದ್ದು, ನಟಿ ಕಂಗನಾ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು, ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಇವರು ತಮ್ಮನ್ನು ತಾವು ರೈತರೆಂದು ಕರೆದುಕೊಳ್ಳುತ್ತಿದ್ದಾರೆ.‌ ಆದರೆ ನಮ್ಮ ಮೇಲೆ ಧಾ ಳಿ ಮಾಡುತ್ತಾರೆ, ಇಲ್ಲಿ ಇಷ್ಟೊಂದು ಗುಂಪು ಹ ಲ್ಲೆ ನಡೆಯುತ್ತಿದೆ. ಪೋಲಿಸರು ಇದ್ದರೂ ಸಹಾ ನನ್ನ ಗಾಡಿಯನ್ನು ತಡೆಯಲಾಗಿದೆ. ನಾನೇನು ರಾಜಕಾರಣಿಯೇ?? ಯಾವುದಾದರೂ ಪಾರ್ಟಿ ನಡೆಸುತ್ತಿದ್ದೇನೆಯೇ?? ಆದರೆ ನನ್ನ ಹೆಸರಲ್ಲಿ ರಾಜಕೀಯ ಮಾಡ್ತಾ ಇದ್ದಾರೆ ಅಷ್ಟೇ. ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ನನ್ನವರು ಅನೇಕರು ಅಲ್ಲಿಗೆ ಹೋಗಬೇಡ ಎಂದಿದ್ದರು. ಆದರೂ ನಾನು ಇಲ್ಲಿಗೆ ಬಂದೆ ಎಂದಿದ್ದಾರೆ ಕಂಗನಾ.

ಈ ಎಲ್ಲಾ ಘಟನೆಯ ನಡುವೆ ಕಂಗನಾ ಅಲ್ಲಿನ ಜನರ ಜೊತೆ ಮಾತನಾಡಿದ್ದಾರೆ. ಅನಂತರ ಪಂಜಾಬ್ ಪೋಲಿಸರ ನೆರವು, ಜನರ ಒಪ್ಪಿಗೆ ಹಾಗೂ ಸೈನ್ಯದ ಸಹಾಯದಿಂದ ಆ ಸ್ಥಳದಿಂದ ಸುರಕ್ಷಿತವಾಗಿ ಮುಂದೆ ಹೋಗಲು ಸಾಧ್ಯವಾಗಿದ್ದು, ನಟಿ ಎಲ್ಲರಿಗೂ ಧನ್ಯವಾದಗಳನ್ನು ಸಹಾ ಹೇಳಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Leave a Comment