ನೋವು, ದುಃಖದ ನಡುವೆಯೇ ತನ್ನ ಜವಾಬ್ದಾರಿ ಮೆರೆದ ಪುನೀತ್ ಅವರ ಪತ್ನಿ ಶ್ರೀಮತಿ ಅಶ್ವಿನಿ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿಧನರಾಗಿ ಇಂದಿಗೆ 11 ನೇ ದಿನ. ಪುನೀತ್ ಅವರ ಅಗಲಿಕೆಯ ನೋವು ಇನ್ನೂ ಕೂಡಾ ಅವರ ಅಭಿಮಾನಿಗಳು, ಸಿನಿ ಪ್ರೇಮಿಗಳ ಮನಸ್ಸಿನಿಂದ ಮಾಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪ್ರತಿದಿನವೂ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸುತ್ತಲೇ ಇದ್ದಾರೆ. ಇನ್ನು ಅವರ ಕುಟುಂಬದಲ್ಲೂ ಕೂಡಾ ಅಪ್ಪು ಅವರ ಅಗಲಿಕೆ ಉಳಿಸಿ ಹೋಗಿರುವ ನೋವು ಮಾಸಲು ವರ್ಷಗಳೇ ಬೇಕಾಗಬಹುದು. ಆದರೆ ಇಂತಹ ನೋವಿನ ನಡುವೆಯೂ ಸಹಾ ಪುನೀತ್ ಅವರ ಪತ್ನಿ ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ.

ನೋವಿನ ನಡುವೆಯೇ ಪುನೀತ್ ಅವರ ಪತ್ನಿ ಅಶ್ವಿನಿ ಅವರು ಪೋಲಿಸ್ ಇಲಾಖೆಗೆ ಹಾಗೂ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರವೊಂದನ್ನು ಬರೆದು ಅಪ್ಪು ಅವರ ಅಂತಿಮ ಯಾತ್ರೆ ವೇಳೆ ಪೋಲಿಸರು ಹಾಗೂ ಗೃಹ ಇಲಾಖೆ ನೀಡಿದ ಸಹಾಯ, ಸಹಕಾರ ಹಾಗೂ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಹಾಗೂ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ವಹಿಸಿದ ಕಾಳಜಿಗೆ ಈ ಪತ್ರದ ಮೂಲಕ ಅಶ್ವಿನಿ ಅವರು ತಮ್ಮ ಕೃತಜ್ಞತೆ ಅರ್ಪಿಸಿ ತಮ್ಮ ಜವಾಬ್ದಾರಿ ಹಾಗೂ ಕಾಳಜಿಯನ್ನು ಮೆರೆದಿದ್ದಾರೆ.

ಅಶ್ವಿನಿ ಅವರು ತಮ್ಮ ಪತ್ರದಲ್ಲಿ, ಶ್ರೀ ಪುನೀತ್ ರಾಜ್‌ಕುಮಾರ್‌ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೇ ಆಘಾತಕಾರಿ ವಿಷಯ ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು , ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯತೆಯಾಗಿತ್ತು. ಇಂತಹಾ ಸಂದರ್ಭದಲ್ಲಿ ಗೃಹಮಂತ್ರಿಗಳಾದ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ.

ಲಕ್ಷಾಂತರ ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲದೇ , ಅಂತ್ಯ ಸಂಸ್ಕಾರ ಸಂಪೂರ್ಣವಾಗುವರೆಗೂ ಜೊತೆಗಿದ್ದು ಧೈರ್ಯ ನೀಡಿದ್ದೀರಿ . ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆ ನಡೆಯದಂತೆ ನೀವು ಕೈಗೊಂಡ ಕ್ರಮಗಳಿಂದ ನಾವು ಅವರಿಗೊಂದು ಸೂಕ್ತವಾದ ವಿದಾಯ ಹೇಳಲು ಸಾಧ್ಯವಾಗಿದೆ . ನಿಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲಾ ಅಭಿಮಾನಿಗಳ ಪರವಾಗಿ ಹತ್ತೂರ್ವಕ ಕೃತಜ್ಞತೆಗಳು ಎಂದು ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Comment