ನೋವಾಗ್ತಿದೆ, ನಮ್ಮನ್ನು ಬಿಟ್ಟು ಬಿಡಿ: ಗಂಡ ಟ್ರೋಲ್ ಆಗಿದ್ದಕ್ಕೆ ನೊಂದು ವಿಶೇಷ ಮನವಿ ಮಾಡಿದ ನಟಿ ಮಹಾಲಕ್ಷ್ಮಿ

Written by Soma Shekar

Published on:

---Join Our Channel---

ಇತ್ತೀಚೆಗಷ್ಟೇ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ ಮತ್ತು ಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೋಡಿಯು ತಿರುಪತಿಯಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಈ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಅದು ಮಾತ್ರವೇ ಅಲ್ಲದೇ ಫೋಟೋಗಳು ವೈರಲ್ ಆದ ಮೇಲೆ ಈ ಜೋಡಿಯನ್ನು ಭರ್ಜರಿಯಾಗಿ ಟ್ರೋಲ್ ಮಾಡಲಾಗಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಟೀಕೆಗಳನ್ನು ಸಹಾ ಮಾಡಿದ್ದಾರೆ. ಆದರೆ ಈ ಜೋಡಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ ಟ್ರೋಲ್ ಗಳು ದಿನೇ ದಿನೇ ಹೆಚ್ಚುತ್ತಿರುವುದನ್ನು ಗಮನಿಸಿರುವ ಮಹಾಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ನೆಟ್ಟಿಗರ ಮುಂದೆ ಒಂದು ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ನಟಿ ಮಹಾಲಕ್ಷ್ಮಿ ಮತ್ತು ಅವರ ಪತಿ ರವೀಂದರ್ ಇಬ್ಬರೂ ಸಹಾ ಮದುವೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬಹುತೇಕ ಎಲ್ಲಾ ಪ್ರಮುಖ ವಿಚಾರಗಳನ್ನು ಅವರು ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಅಭಿಮಾನಿಗಳು ಸಹಾ ಮೆಚ್ಚುಗೆ ನೀಡುತ್ತಿದ್ದಾರೆ.

ಪ್ರೈವೇಟ್ ಜೆಟ್ ನಲ್ಲಿ ಹನಿಮೂನ್ ಗೆ ತೆರಳುವ ಮೊದಲು ತಮ್ಮ ಮನೆ ದೇವರಿಗೆ ಆಶೀರ್ವಾದ ಪಡೆಯಲು ಗುಡಿಗೆ ಹೋದ ವಿಚಾರವನ್ನು ಈ ಜೋಡಿ ಹಂಚಿಕೊಂಡಿದ್ದರು. ಇಬ್ಬರೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ, ಪ್ರೀತಿಯನ್ನು ಬಿಂಬಿಸುವ ಹಾಗೆ ಕಾವ್ಯಾತ್ಮಕ ಸಾಲುಗಳನ್ನು ಬರೆದುಕೊಂಡು ಖುಷಿಪಡುತ್ತಿದ್ದಾರೆ. ಆದರೆ ಈ ವೇಳೆ ಅನೇಕರು ಇದು ಮಿಸ್ ಮ್ಯಾಚ್ ಜೋಡಿ ಎಂದಿದ್ದು, ಈಗಾಗಲೇ ಒಂದಷ್ಟು ಜೋಕ್ ಗಳು ಕೂಡಾ‌ ಇವರ ಮೇಲೆ ಮಾಡಲಾಗಿದ್ದು, ಅವು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗಿದೆ. ರವೀಂದರ್ ಅವರ ದೇಹ ಗಾತ್ರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು.

ಇದೆಲ್ಲವನ್ನು ಗಮನಿಸಿದ ನಟಿ ಮಹಾಲಕ್ಷ್ಮಿ ಲೈವ್ ಬಂದು, ನನ್ನ ಪತಿ ದಪ್ಪ ಇದ್ದಾರೆ ಎಂದು ಟ್ರೋಲ್ ಮಾಡುತ್ತಿರುವಿರಿ, ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವಿರಿ, ಇದರಿಂದ ಅವರ ಮನಸ್ಸಿಗೆ ಬಹಳ ನೋವುಂಟಾಗುತ್ತಿದೆ. ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಟ್ಟು ಬಿಡಿ ಎಂದು ನೆಟ್ಟಿಗರಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಪ್ರಸ್ತುತ ಈ ಜೋಡಿ ಮಹಾಬಲಿಪುರಂ ನ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಸಂತೋಷದ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ.

Leave a Comment