ನೋರಾಗೆ ಕೊರೊನಾ, ತೀವ್ರ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದ ನಟಿ ನೀಡಿದ್ದಾರೆ ಎಲ್ಲರಿಗೂ ಎಚ್ಚರಿಕೆ

Written by Soma Shekar

Published on:

---Join Our Channel---

ಕೊರೊನಾ ಸೋಂಕಿನ ಭೀ ತಿ ಕಡಿಮೆಯಾಗುತ್ತಿದ್ದ ಹಾಗೆ, ಜನ ಜೀವನ ತನ್ನ ಹಳಿಯನ್ನು ಹಿಡಿದು, ಬಡ, ಮದ್ಯಮ ವರ್ಗದವರು ನಿಟ್ಟುಸಿರು ಬಿಡುವಂತಾಗುವಾಗಲೇ ಇದೀಗ ಓಮಿಕ್ರಾನ್ ವೈರಸ್ ಭೀತಿ ಎಲ್ಲೆಡೆ ಕಾಡಲು ಆರಂಭಿಸಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಕೂಡಾ ಓಮಿಕ್ರಾನ್ ಬಗ್ಗೆ ಆ ತಂ ಕ ವ್ಯಕ್ತಪಡಿಸುತ್ತಾ, ಇದು ಕೊರೊನಾ ಸುನಾಮಿಯನ್ನು ತರಲಿದೆ ಎನ್ನುವ ಮಾತನ್ನು ಹೇಳಿರುವುದು ಜನರಲ್ಲಿ ಇನ್ನಷ್ಟು ಭ ಯಾಂ ದೋ ಲ ನವನ್ನು ಹುಟ್ಟು ಹಾಕುವಂತಿದೆ. ಮೂರನೇ ಅಲೆ ಬರಬಹುದೆಂಬ ನಿಟ್ಟಿನಲ್ಲಿ ಈಗಾಗಲೇ ಸುರಕ್ಷತಾ ಕ್ರಮಗಳ ಕಡೆಗೆ ಗಮನ ನೀಡಲಾಗುತ್ತಿದೆ.

ಇತ್ತೀಚಿಗೆ ಸಿನಿಮಾ ಸೆಲೆಬ್ರಿಟಿಗಳು ಹೆಚ್ಚಾಗಿ ಕೋವಿಡ್ ನಿಂದ ಸೋಂಕಿತರಾಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಕೆಲವು ನಟ, ನಟಿಯರು ತಮಗೆ ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆಯನ್ನು ಪಡೆಯುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದರು. ನಟಿ ಕರೀನಾ ಕಪೂರ್, ಅಮೃತ ಅರೋರಾ, ಅರ್ಜುನ್ ಕಪೂರ್, ಕಮಲ ಹಾಸನ್, ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು ಇದೀಗ ಈ ಸಾಲಿಗೆ ಮತ್ತೊಬ್ಬ ನಟಿಯಾಗಿ ಸೇರ್ಪಡೆಯಾಗಿದ್ದಾರೆ ಬಾಲಿವುಡ್ ನಲ್ಲಿ ತನ್ನ ಅದ್ಭುತ ಡಾನ್ಸ್ ಗಳ ಮೂಲಕವೇ ಗಮನ ಸೆಳೆದು, ದೊಡ್ಡ ಹೆಸರನ್ನು ಮಾಡಿರುವ ನೋರಾ ಫತೇಹಿ ಅವರು.

ಸಿನಿಮಾ, ಪ್ರಮೋಷನ್, ಕಾರ್ಯಕ್ರಮಗಳು ಎಂದು ತಿರುಗಾಡುತ್ತಿದ್ದ ನೋರಾ ಫತೇಹಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ನಟಿ ಹಾಸಿಗೆ ಹಿಡಿದಿದ್ದಾರೆ ಎನ್ನಲಾಗಿದೆ. ಈ ವಿಷಯವಾಗಿ ನೋರಾ ಸೋಶಿಯಲ್ ಮೀಡಿಯಾದಲ್ಲೊಂದು ಸುದೀರ್ಘವಾದ ಪೋಸ್ಟ್ ಹಾಕಿಕೊಂಡಿದ್ದಾರೆ. ನೋರಾ ತಮ್ಮ ಪೋಸ್ಟ್ ನಲ್ಲಿ, ಹೇ ಗಯ್ಸ್ ದುರದೃಷ್ಟವಶಾತ್ ನಾನು ಪ್ರಸ್ತುತ ಕೋವಿಡ್‌ನೊಂದಿಗೆ ಹೋರಾಡುತ್ತಿದ್ದೇನೆ.. ಇದು ಪ್ರಾಮಾಣಿಕವಾಗಿ ನನ್ನನ್ನು ತೀವ್ರವಾಗಿ ಹೊಡೆತ ನೀಡಿದೆ! ನಾನು ವೈದ್ಯರ ಮೇಲ್ವಿಚಾರಣೆಯಲ್ಲಿ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದೇನೆ. ದಯವಿಟ್ಟು ಸುರಕ್ಷಿತವಾಗಿರಿ, ನಿಮ್ಮ ಮಾಸ್ಕ್ ಗಳನ್ನು ಧರಿಸಿ, ಇದು ವೇಗವಾಗಿ ಹರಡುತ್ತದೆ ಮತ್ತು ಪ್ರತಿಯೊಬ್ಬರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ!

ದುರದೃಷ್ಟವಶಾತ್ ನಾನು ಅದಕ್ಕೆ ಕೆಟ್ಟದಾಗಿ ಹೊ ಡೆ ತ ತಿಂದಿದ್ದೇನೆ. ಇದು ಯಾರಿಗಾದರೂ ಸಂಭವಿಸಬಹುದು ದಯವಿಟ್ಟು ಜಾಗರೂಕರಾಗಿರಿ! ನಾನು ಈ ಕ್ಷಣದಲ್ಲಿ ಚೇತರಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ ಅದು ಇದೀಗ ಮುಖ್ಯವಾಗಿದೆ. ನಿಮ್ಮ ಆರೋಗ್ಯಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ! ಕಾಳಜಿ ವಹಿಸಿ, ಸುರಕ್ಷಿತವಾಗಿರಿ ಎಂದು ಬರೆದುಕೊಂಡು ಒಂದು ಎಚ್ಚರಿಕೆಯನ್ನು ಎಲ್ಲರಿಗೂ ನೀಡಿದ್ದಾರೆ.

Leave a Comment