ನೋಡಲು ಯುವತಿಯ ಹಾಗೆ ಕಾಣುವ ಈಕೆಯ ಅಸಲಿ ವಯಸ್ಸು ಕೇಳಿದ್ರೆ ಶಾಕ್ ಆಗುತ್ತೆ: ಈಕೆಯ ಅಂದದ ಹಿಂದಿನ ರಹಸ್ಯವೇನು??

Written by Soma Shekar

Published on:

---Join Our Channel---

ನಮ್ಮ ಸುತ್ತ ಮುತ್ತ ಕೆಲವು ಮಹಿಳೆಯರನ್ನು ನೋಡಿದಾಗ ಅವರ ವಯಸ್ಸು ಎಷ್ಟು ಎನ್ನುವುದನ್ನು ನಾವು ಊಹೆ ಸಹಾ ಮಾಡಲಾಗುವುದಿಲ್ಲ.‌ ಏಕೆಂದರೆ ಅವರ ದೇಹದ ವಯಸ್ಸು ಏರಿಕೆಯಾಗುತ್ತಿದ್ದರೂ ಸಹಾ ಅಂದ ಕುಗ್ಗದೇ, ಫಿಟ್ನೆಸ್ ಕಡಿಮೆಯಾಗದೇ ಇನ್ನೂ ಕೂಡಾ ಅವರು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಆದರೆ ಅವರ ನಿಜವಾದ ವಯಸ್ಸು ಕೇಳಿದಾಗ ನಮಗೆ ಆಶ್ಚರ್ಯ ಆಗುವುದು ಮಾತ್ರವೇ ಅಲ್ಲದೇ ನಮ್ಮ‌ ಕಣ್ಣನ್ನು ನಾವೇ ನಂಬಲು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಏಕೆಂದರೆ ಅವರ ವಯಸ್ಸಿಗೂ, ಅವರ ಲುಕ್ಸ್ ಗೂ ಸಂಬಂಧವೇ ಇರುವುದಿಲ್ಲ.

ಇಂತಹ ಮಹಿಳೆಯರ ಸಾಲಿಗೆ ಸೇರುತ್ತಾರೆ ಎಡೋರಾ ಓಕ್ರೊ. ಈ ಮಹಿಳೆಯ ಬಗ್ಗೆ ಹೇಳುವುದಾದರೆ ಇವರು ‌ಇಂಗ್ಲೆಂಡ್ ನ ಚಶೈರ್ ನಗರದ ವಾಸಿಯಾಗಿದ್ದಾರೆ. ಎಡೋರಾ ಅವರನ್ನು ನೋಡಿದಾಗ ಆಕೆಯ ವಯಸ್ಸು
ಹೆಚ್ಚೆಂದರೆ 30 ಅಥವಾ 35 ಎಂದು ಹೇಳುತ್ತಾರೆ. ಆದರೆ ಆಕೆಯ ನಿಜವಾದ ವಯಸ್ಸನ್ನು ಕೇಳಿದರೆ ಅಚ್ಚರಿ ಮೂಡುತ್ತದೆ. ಏಕೆಂದರೆ ಎಡೋರಾ ಅವರ ವಯಸ್ಸು 60 ವರ್ಷ ವಯಸ್ಸು ಎನ್ನಲಾಗಿದೆ. ಆಕೆಯ ವಯಸ್ಸು 60 ಎಂದರೆ ಒಂದು ಕ್ಷಣ ಅನುಮಾನ ಉಂಟಾಗುತ್ತದೆ.

ಎಡೋರಾ ತಾನು ಹೀಗೆ ಚಿಕ್ಕ ವಯಸ್ಸಿನವಳಂತೆ ಕಾಣಲು ಯಾವುದೇ ರೀತಿಯ ಬೊಟಾಕ್ಸ್ ಟ್ರೀಟ್ಮೆಂಟ್ ಅಥವಾ ಕಾಸ್ಮೆಟಿಕ್ ಸರ್ಜರಿ ಯನ್ನು ಮಾಡಿಸಿಕೊಂಡಿಲ್ಲ ಎನ್ನುವುದು ವಾಸ್ತವ. ವೃತ್ತಿಯಿಂದ ಡಾನ್ಸ್ ಶಿಕ್ಷಕಿಯಾಗಿರುವ ಎಡೋರಾ ತನ್ನ ಸೌಂದರ್ಯದ ರಹಸ್ಯ ನೀರು ಎಂದು ಹೇಳುತ್ತಾರೆ. ಇದರಿಂದಾಗಿ ತನ್ನ ಚರ್ಮದಲ್ಲಿ ತೇವಾಂಶ ಸದಾ ಇರುತ್ತದೆ ಎಂದು ಹೇಳಿದ್ದಾರೆ ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆಗಾಗಿ ಕ್ರೀಮ್ ಹಾಕುವುದನ್ನು ತಪ್ಪಿಸಲ್ಲ ಎನ್ನುತ್ತಾರೆ ಆಕೆ.

ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಬಳಸುತ್ತೇನೆ ಎನ್ನುವ ಎಡೋರಾ ಅವರು ಡಾನ್ಸ್ ಕ್ಲಾಸ್ ನಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಾರೆ. ನಿಯಮಿತವಾಗಿ ವಾಕ್ ಮಾಡುತ್ತಾರೆ. ಈ ಫಿಟ್ ಅಜ್ಜಿಗೆ ವಯೋಸಹಜವಾದ ಯಾವುದೇ ಕಾಯಿಲೆಗಳು ಇಲ್ಲ. ನಮ್ಮ ವಯಸ್ಸು ನಮ್ಮ ಕೈ ಅಲ್ಲೇ ಇರುತ್ತದೆ ಎನ್ನುವ ಎಡೋರಾ ತನ್ನ ವಯಸ್ಸಿನ ಅರ್ಧ ವಯಸ್ಸಿನವರು ತನಗೆ ಡೇಟಿಂಗ್ ಸೈಟ್ ಗಳಲ್ಲಿ ತನಗೆ ಮೆಸೆಜ್ ಮಾಡಿದಾಗ, ಅವರನ್ನು ನಂಬಿಸಲು ತಾನು ತನ್ನ ಜನ್ಮ ದಿನಾಂಕದ ದಾಖಲೆ ನೀಡಿದರೆ ಮಾತ್ರ ನಂಬುತ್ತಾರೆ ಎನ್ನುತ್ತಾರೆ ಎಡೋರಾ.

ಎಡೋರಾ ಅವರ ಲೈಫ್ ಸ್ಟೈಲ್ ಈಗ ಅನೇಕರಿಗೆ ಸ್ಪೂರ್ತಿಯನ್ನು ನೀಡಿದೆ. ಅವರ ಜೀವನ ಶೈಲಿಯಿಂದ ಪ್ರಭಾವಿತಗೊಂಡ ಅನೇಕರು ಅವರ ಜೀವನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನವನ್ನು ಸಹಾ ಮಾಡುತ್ತಾರೆ ಎಂದರೆ ಎಡೋರಾ ಯಾವ ಮಟ್ಟಕ್ಕೆ ಜನರ ಮೇಲೆ ಪರಿಣಾಮ ಬೀರಿದೆ ಎನ್ನುವುದರ ಅರಿವು ನಮಗಾಗುತ್ತದೆ.

Leave a Comment