ನೇರವಾಗಿ ಹೇಳ್ದೇ ಇದ್ರೂ ವಿಚ್ಚೇದನದ ಬಗ್ಗೆ ಒಂದೊಂದೇ ಸುಳಿವು ಪರೋಕ್ಷವಾಗಿ ನೀಡ್ತಾ ಇದ್ದಾರಾ ಸಮಂತಾ??

0
198

ನಾಗ ಚೈತನ್ಯ ಹಾಗೂ ಸಮಂತಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಸಿನಿ ಜೋಡಿಯಾಗಿದ್ದಾರೆ. ಇದಕ್ಕೆ ಕಾರಣವನ್ನಂತೂ ಪ್ರತ್ಯೇಕವಾಗಿ ಹೇಳುವಂತಹ ಅಗತ್ಯ ಇಲ್ಲ ಎನ್ನುವಷ್ಟರ ಮಟ್ಟಕ್ಕೆ ಸಮಂತಾ ಹಾಗೂ ನಾಗಚೈತನ್ಯ ನಡುವಿನ ವೈವಾಹಿಕ ಸಂಬಂಧದಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ ಸುದ್ದಿಗಳಾಗಿವೆ. ಈ ವಿಷಯದ ಬಗ್ಗೆ ಅಧಿಕೃತವಾಗಿ ಯಾರೂ ಕೂಡಾ ಹೇಳಿಕೊಳ್ಳದೇ ಹೋದರೂ ಸಹಾ, ಎಲ್ಲೆಡೆ ಸಮಂತಾ ನಾಗ ಚೈತನ್ಯ ನಡುವಿನ ಉಂಟಾಗಿರುವ ವೈಮನಸ್ಸಿನ ಬಗ್ಗೆ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇದ್ದು ಅದಕ್ಕೆ ಈಗ ಇನ್ನೊಂದು ಹೊಸ ಬೆಳವಣಿಗೆ ನಡೆದಿದೆ.

ಕೆಲವೇ ದಿನಗಳ ಹಿಂದೆ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲವ್ ಸ್ಟೋರಿ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆಗೆ ಮುನ್ನ ಪ್ರಿ ರಿಲೀಸ್ ಫಂಕ್ಷನ್ ಬಹಳ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಸಹಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದರು. ಅಮೀರ್ ಖಾನ್ ಅವರು ಕಾರ್ಯಕ್ರಮದ ನಂತರ ನಟ ನಾಗಾರ್ಜುನ ಅವರ ಮನೆಗೆ ಭೇಟಿ ನೀಡಿದ್ದರು.

ಅಮೀರ್ ಖಾನ್ ಅವರು ನಾಗಾರ್ಜುನ ಅವರ ಮನೆಗೆ ಭೇಟಿ ನೀಡಿದ ಖುಷಿಯಲ್ಲಿ ಅವರ ಮನೆಯಲ್ಲಿ ಒಂದು ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು‌. ಈ ಪಾರ್ಟಿಯಲ್ಲಿ ಅಮೀರ್ ಖಾನ್, ನಾಗ ಚೈತನ್ಯ, ನಾಗಾರ್ಜುನ ಹಾಗೂ ಅವರ ಪತ್ನಿ ಅಮಲಾ, ಲವ್ ಸ್ಟೋರಿ ಸಿನಿಮಾದ ನಿರ್ದೇಶಕ ಶೇಖರ್ ಕಮ್ಮುಲ ಹಾಗೂ ನಟಿ ಸಾಯಿ ಪಲ್ಲವಿ ಹಾಜರಿದ್ದರು‌. ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.

ಆದರೆ ಆಗ ಎದ್ದು ಕಂಡಿದ್ದು ಸಮಂತಾ ಅವರ ಗೈರು ಹಾಜರಿ‌. ಹೌದು ಮನೆಯಲ್ಲಿ ನಡೆದ ಈ ಚಿಕ್ಕ ಪಾರ್ಟಿಯಲ್ಲಿ ಸಮಂತಾ ಗೈರಾಗಿದ್ದನ್ನು ನೋಡಿ ಅನೇಕರು ಇದು ಸಹಾ ನಾಗಚೈತನ್ಯ ಹಾಗೂ ಸಮಂತಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಈ ಘಟನೆ ಕೂಡಾ ಪುಷ್ಟಿ ನೀಡುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ನಾಗಚೈತನ್ಯ ಕೂಡಾ ಕೆಲವು ದಿನಗಳ ಹಿಂದೆ ಅಪ್ಪನ ಮನೆಗೆ ವಾಪಸಾಗಿದ್ದಾರೆ.

ಪ್ರಸ್ತುತ ನಾಗಚೈತನ್ಯ ಇಷ್ಟು ದಿನ ಸಮಂತಾ ಜೊತೆಯಲ್ಲಿದ್ದ ಮನೆಯಲ್ಲಿ ಇಲ್ಲ. ‌ಅವರು ಆ ಮನೆಯಿಂದ ತಂದೆ ಮನೆಗೆ ಬಂದಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ನಾಗಚೈತನ್ಯ ಅಮೀರ್ ಖಾನ್ ಅವರ ಮುಂಬರಲಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here