ನೇತ್ರದಾನಕ್ಕೆ ತಾನು ನೋಂದಣಿ ಮಾಡಿಸಿ ಅನ್ಯರಿಗೆ ಮಾದರಿಯಾದ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಯಮುನಾ ಶ್ರೀನಿಧಿ

Entertainment Featured-Articles News
83 Views

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಹೆಸರನ್ನು ಮಾಡಿರುವ, ಸಿನಿಮಾಗಳಲ್ಲಿ ಸಹಾ ಸಕ್ರಿಯವಾಗಿರುವ ನಟಿ ಯಮುನಾ ಶ್ರೀನಿಧಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಯಮುನಾ ಶ್ರೀ ನಿಧಿ ಅವರ ಹೆಸರು ಕೇಳಿದಾಗ ಕೆಲವರಿಗೆ ತಕ್ಷಣಕ್ಕೆ ಇವರು ಯಾರು ಎನ್ನುವುದು ತಿಳಿಯದೇ ಹೋಗಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಕಮಲಿ ಯಲ್ಲಿ ಕಮಲಿ ತಾಯಿ ಪಾತ್ರದಲ್ಲಿ ಮಿಂಚಿದ್ದ ನಟಿ, ಮನಸಾರೆ ಸೀರಿಯಲ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟಿ ಎಂದರೆ ಕೂಡಲೇ ಎಲ್ಲರಿಗೂ ತಟ್ಟನೆ ನೆನಪಾಗುವುದು. ಹೌದು ಅದೇ ನಟಿ ಯಮುನಾ ಶ್ರೀ ನಿಧಿ ಅವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಷಯ ನೋಡಿ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.‌

ಹೌದು ನಟಿ ಯಮುನಾ ಶ್ರೀನಿಧಿ ಅವರು ಎಲ್ಲರಿಗೂ ಮಾದರಿ ಆಗುವಂತಹ, ಒಂದು ಸ್ಪೂರ್ತಿ ನೀಡುವಂತಹ ಕೆಲಸವನ್ನು ಮಾಡಿದ್ದಾರೆ. ನಟಿ ಯಮುನಾ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನೇತ್ರ ದಾನಕ್ಕೆ ನೋಂದಣಿಯನ್ನು ಮಾಡಿಸಿದ್ದು, ಈ ಕುರಿತಾಗಿ ಅವರು ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಯಮುನಾ ಶ್ರೀನಿಧಿ ಅವರು ತಮ್ಮ ಪೋಸ್ಟ್ ನಲ್ಲಿ, “ಕಣ್ಣುಗಳನ್ನು ಮಣ್ಣು ಮಾಡಬೇಡಿ, ಇನ್ನೊಬ್ಬರ ಜೀವನಕ್ಕೆ ನಂದಾದೀಪವಾಗಲೀ” ಎಂದು ಬರೆದುಕೊಳ್ಳುವ ಮೂಲಕ ಕಣ್ಣಿನ ಮಹತ್ವದ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿದ್ದಾರೆ.

ಅವರು ಮಾದ್ಯಮವೊಂದರಲ್ಲಿ ನಟ ಸಂಚಾರಿ ವಿಜಯ್ ನಿಧನದ ನಂತರ ಅವರ ಅಂಗಾಂಗಳನ್ನು ದಾನ ಮಾಡಿರುವುದು ನನ್ನನ್ನು ಪ್ರೇರೇಪಿಸಿತು, ಅವರ ಕುಟುಂಬದ ಬಗ್ಗೆ ನನಗೆ ಹೆಮ್ಮೆಯಿದೆ. ಎಲ್ಲರಿಗೂ ನೇತ್ರದಾನ ಮಾಡುವುದಾಗಿ ಹೇಳುವೆ, ಇದರಿಂದ ಸಮಸ್ಯೆ ಇದ್ದವರಿಗೆ ನೆರವಾಗುತ್ತದೆ. ಬೇರೆಯವರು ಕಣ್ಣು ದಾನ ಮಾಡಲು ಮುಂದಾದರೆ ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದ್ದಾರೆ. ಯಮುನಾ ಶ್ರೀ ನಿಧಿ ಅವರ ಈ ಮಾದರಿಯಾದ ಕಾರ್ಯ ಈಗಾಗಲೇ ಮಾದ್ಯಮಗಳಲ್ಲಿ ಸುದ್ದಿಯಾಗಿದೆ. ನೇತ್ರದಾನ ಮಹಾದಾನ ಎನ್ನುವುದಕ್ಕೆ ಈಗ ಯಮುನಾ ಶ್ರೀನಿಧಿ ಅವರು ಕೈ ಜೋಡಿಸಿದ್ದಾರೆ.

Leave a Reply

Your email address will not be published. Required fields are marked *