ನೆಲಕಚ್ಚಿದ ರಚಿತಾ ರಾಮ್ ನಟನೆಯ ಮೊದಲ ತೆಲುಗು ಸಿನಿಮಾ: ಮೊದಲ ದಿನ ಜೀರೋ ಕಲೆಕ್ಷನ್!!

Written by Soma Shekar

Published on:

---Join Our Channel---

ಚಂದನವನದ ಡಿಂಪಲ್ ಕ್ವೀನ್ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ, ಕನ್ನಡ ಸ್ಟಾರ್ ನಟರ ಸಿನಿಮಾಗಳಲ್ಲಿ ಒಂದಾದ ನಂತರ ಮತ್ತೊಂದು ಎನ್ನುವಂತೆ ನಾಯಕಿಯಾಗಿ ಮಿಂಚುತ್ತಿರುವ ನಟಿ ರಚಿತಾ ರಾಮ್ ಅಲ್ಲದೇ ಇನ್ನಾರು ಎನ್ನುತ್ತಾರೆ ಅಭಿಮಾನಿಗಳು. ಕನ್ನಡ ಸಿನಿಮಾ ರಂಗದಲ್ಲಿ ಹೆಚ್ಚು ಬ್ಯುಸಿಯಾಗಿರುವ ಹಾಗೂ ಸಕ್ರಿಯವಾಗಿರುವ ನಟಿಯೂ ಕೂಡಾ ಹೌದು ನಟಿ ರಚಿತಾ ರಾಮ್. ಕನ್ನಡದ ಸ್ಟಾರ್ ನಟರೆಲ್ಲರ ಜೊತೆಗೆ ತೆರೆ ಹಂಚಿಕೊಂಡಿರುವ ಈ ನಟಿ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ರಚಿತಾ ರಾಮ್ ಅವರ ಬೇಡಿಕೆ ಇಂದಿಗೂ ಹಿಂದಿನಂತೆಯೇ ಇದೆ.

ಕನ್ನಡದ ನಟಿಯರು ದಕ್ಷಿಣದ ಇತರೆ ಭಾಷೆಯ ಸಿನಿಮಾ ರಂಗದಲ್ಲಿ ಸಹಾ ದೊಡ್ಡ ಹೆಸರನ್ನು ಮಾಡುತ್ತಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಕನ್ನಡ ನಟಿಯರದ್ದೇ ಕಾರುಬಾರು ಎನ್ನುವುದಕ್ಕೆ ಈಗಾಗಲೇ ಹಲವು ನಟಿಯರು ಟಾಲಿವುಡ್ ನಲ್ಲಿ ಮಿಂಚಿರುವುದು ಇತಿಹಾಸ. ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅಲ್ಲಿನ ಬಹುಬೇಡಿಕೆಯ ನಟಿ ಕೂಡಾ ಹೌದು. ಹೀಗೆ ಕನ್ನಡತಿಯರು ತೆಲುಗಿನಲ್ಲಿ ಎಂಟ್ರಿ ಕೊಟ್ಟು ಹೆಸರು ಮಾಡಿದ್ದು, ಇದೇ ಹಿನ್ನೆಲೆಯಲ್ಲಿ ನಟಿ ರಚಿತಾ ರಾಮ್ ಕೂಡಾ ತೆಲುಗಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ನಟಿ ರಚಿತಾ ರಾಮ್ ತೆಲುಗಿನ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಅಳಿಯ ನಟ ಕಲ್ಯಾಣ್ ದೇವ್ ನಾಯಕನಾಗಿ ನಟಿಸಿದ್ದ ಸೂಪರ್ ಮಚ್ಚಿ ಸಿನಿಮಾದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಯನ್ನು ನೀಡಿದ್ದಾರೆ. ಈ ಸಿನಿಮಾ ಸಂಕ್ರಾಂತಿ ಹಿನ್ನೆಲೆಯಲ್ಲಿ ಜನವರಿ 14 ರಂದು ಬಿಡುಗಡೆ ಆಗಿದೆ. ಇನ್ನು ಈ ಸಿನಿಮಾ ಬಗ್ಗೆ, ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ರಚಿತಾ ರಾಮ್ ಅವರು ಸಹಾ ಹಲವು ಬಾರಿ ಬಹಳ ಖುಷಿಯಿಂದ ಮಾತನಾಡಿದ್ದರು, ಸಿನಿಮಾ ಯಶಸ್ಸಿನ ನಿರೀಕ್ಷೆಯಲ್ಲಿ ಇದ್ದರು.

ಈಗ ಸಿನಿಮಾ ಬಿಡುಗಡೆಯ ನಂತರ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ಸಂಕ್ರಾಂತಿ ಹಬ್ಬದ ದಿನ ಬಿಡುಗಡೆಯಾದ ಸೂಪರ್ ಮಚ್ಚಿ ಸಿನಿಮಾಕ್ಕೆ ಮೊದಲ ದಿನ ಕಲೆಕ್ಷನ್ ಇಲ್ಲದೇ ಜೀರೋ ಕಲೆಕ್ಷನ್ ನೊಂದಿಗೆ ಮೊದಲ ದಿನ ಕಳೆದಿದೆ ಎನ್ನಲಾಗಿದೆ. ಈ ವಿಷಯ ಸದ್ಯಕ್ಕೆ ಟಾಲಿವುಡ್ ನಲ್ಲಿ ಚರ್ಚೆಗೆ ಒಳಗಾಗಿದೆ. ಅಲ್ಲದೇ ಚಿತ್ರ ತಂಡ ಕೂಡಾ ಸಿನಿಮಾ ಬಿಡುಗಡೆ ಬಗ್ಗೆ, ಪ್ರಮೋಷನ್ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಿತ್ತು ಎನ್ನಲಾಗಿದ್ದು, ಸಿನಿಮಾ ಬಿಡುಗಡೆ ಆಗಿರುವುದೇ ಅನೇಕರಿಗೆ ತಿಳಿದಿಲ್ಲ ಎನ್ನಲಾಗಿದೆ.

Leave a Comment