ನೆಟ್ ಫ್ಲಿಕ್ಸ್ ವಿ’ರುದ್ಧ ಮುಸ್ಲಿಂ ಸಮುದಾಯದ ಸಿಟ್ಟು: ನೆಟ್ ಫ್ಲಿಕ್ಸ್ ಬ್ಯಾನ್ ಮಾಡಲು ಒತ್ತಾಯ

Written by Soma Shekar

Published on:

---Join Our Channel---

ಕೊರೊನಾ ನಂತರದ ದಿನಗಳಲ್ಲಿ ಸಿನಿಮಾ ಥಿಯೇಟರ್ ಗಳು ದೀರ್ಘಕಾಲದ ವರೆಗೆ ಬಂದ್ ಆದ ವಿಷಯ ಎಲ್ಲರಿಗೂ ತಿಳಿದೇ ಇದೆ. ಆಗ ಸಿನಿಮಾ ಗಳ ಬಿಡುಗಡೆಗೆ ವೇದಿಕೆಯಾಗಿದ್ದು ಓಟಿಟಿ ಪ್ಲಾಟ್ ಫಾರಂ ಗಳು.. ಲಾಕ್ ಡೌನ್ ಅವಧಿಯಲ್ಲಿ ಓಟಿಟಿ ಬಹಳ ಬೇಗ ಜನಪ್ರಿಯತೆ ಪಡೆದುಕೊಂಡಿತು. ಹೀಗೆ ಓಟಿಟಿ ಪ್ಲಾಟ್ ಫಾರಂ ಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು ವಿಶ್ವದ ದಿಗ್ಗಜ ಓಟಿಟಿ ಪ್ಲಾಟ್ಫಾರ್ಮ್ ಆಗಿರುವ ನೆಟ್ ಫ್ಲಿಕ್ಸ್ ಭಾರತದಲ್ಲಿ ಕೂಡಾ ದೊಡ್ಡ ಮಟ್ಟದ ಜನಪ್ರಿಯತೆ ತನ್ನದಾಗಿಸಿಕೊಂಡಿದೆ. ಈ ಪ್ಲಾಟ್ ಫಾರಂ ನಲ್ಲಿ ಇಂಗ್ಲಿಷ್, ಹಿಂದಿ ಸಿನಿಮಾಗಳು ಹಾಗೂ ವೆಬ್ ಸಿರೀಸ್ ಗಳು ಬಿಡುಗಡೆಗೊಂಡಿದೆ. ಅಲ್ಲದೇ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಸಹ ಬಿಡುಗಡೆ ಮಾಡುವ ಮೂಲಕ ಇದು ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ನೆಟ್ಫ್ಲಿಕ್ಸ್. ಇದೀಗ ನೆಟ್ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದ ಒಂದು ಸಿನಿಮಾದ ಪೋಸ್ಟರ್ ವಿ ವಾ ದಕ್ಕೆ ಕಾರಣವಾಗಿದ್ದು ಮುಸ್ಲಿಂ ಸಮುದಾಯವು ನೆಟ್ ಫ್ಲಿಕ್ಸ್ ಅನ್ನು ಬ್ಯಾ ನ್ ಮಾಡುವಂತೆ ಒತ್ತಾಯ ಮಾಡಿದೆ.

ಹೌದು ನೆಟ್ ಫ್ಲಿಕ್ಸ್ ನಲ್ಲಿ ಭಾರತೀಯ ಸಿನಿರಂಗದ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರು ಎನಿಸಿರುವ ನಿರ್ದೇಶಕ ಮಣಿರತ್ನಂ ಅವರ ನವರಸ ಎನ್ನುವ ಒಂದು ಆ್ಯಂಥಾಲಜಿ ಸಿನಿಮಾ ಬಿಡುಗಡೆ ಆಗಿ ಯಶಸ್ಸನ್ನು ಪಡೆದುಕೊಂಡಿತ್ತು. ಈ ಸಿನಿಮಾದಲ್ಲಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಪಡೆದ ಖ್ಯಾತ ನಟದ ಒಂದು ದೊಡ್ಡ ದಂಡೇ ಇದ್ದು, ಈ ಸಿನಿಮಾದಲ್ಲಿ ನಟ ಸಿದ್ಧಾರ್ಥ್ ಹಾಗೂ ನಟಿ ಪಾರ್ವತಿ ಮಿಲ್ಟನ್ ನಟನೆಯ ಇನ್ಮಾಯ್ ಎನ್ನುವ ಕಥೆಯೊಂದು ಇದೆ. ಈ ಸಿನಿಮಾದ ಜಾಹೀರಾತನ್ನು ನೆಟ್ ಫ್ಲಿಕ್ಸ್ ಪತ್ರಿಕೆಗಳಿಗೆ ನೀಡಿದೆ. ಅದರಲ್ಲಿ ಒಂದು ಡೈಲಿ ತಂತಿ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಜಾಹೀರಾತಿನ ಸಿನಿಮಾ ಪೋಸ್ಟರ್ ನಲ್ಲಿ ಮುಸ್ಲಿಂ ರ ಪವಿತ್ರ ಗ್ರಂಥ ಖುರಾನ್ ನ‌ ಸಾಲೊಂದನ್ನು ಬರೆಯಲಾಗಿದ್ದು, ಇದು ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ರಝಾ ಅಕಾಡೆಮಿ ಟ್ವೀಟ್ ಮಾಡಿ, “ಖುರಾನ್ ಮತ್ತು ಇಸ್ಲಾಂ ಧರ್ಮವು ಜನರ ಮನರಂಜನೆಯ ಮೂಲಗಳಲ್ಲ ಎಂಬುದನ್ನು ನೆನಪಿಡಿ. ಇದು ನಮ್ಮ ಘನತೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಸೇರಿದೆ. ದಯವಿಟ್ಟು ಈ ರೀತಿಯ ಕೆಲಸಗಳನ್ನು ಮಾಡುವ ಮೂಲಕ ನಮ್ಮ ಧಾರ್ಮಿಕ ಭಾವನೆಗಳಿಗೆ ಧ ಕ್ಕೆ ತರಬೇಡಿ” ಎಂದು ಹೇಳಿದೆ.

ರಝಾ ಅಕಾಡೆಮಿ ಮಾತ್ರವೇ ಅಲ್ಲದೇ ಇನ್ನೂ ಕೆಲವು ಇಸ್ಲಾಂ ಸಂಘಟನೆಗಳು ಸಹಾ ಈ ಜಾಹೀರಾತಿನ ಬಗ್ಗೆ ಅಸಮಾಧಾನ ಹೊರಹಾಕಿವೆ. ಅಲ್ಲದೇ ನೆಟ್ ಫ್ಲಿಕ್ಸ್ ಅನ್ನು ಬ್ಯಾನ್ ಮಾಡಬೇಕೆಂದು ಒತ್ತಾಯ ಮಾಡಿವೆ. ನವರಸ ಸಿನಿಮಾದ ಪೋಸ್ಟರ್ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಘಾ ಸಿಯನ್ನು ಉಂಟು ಮಾಡಿದೆ ಎಂದು ಹೇಳಿದೆ. ರಝಾ ಅಕಾಡೆಮಿ ಈ ಪೋಸ್ಟರ್ ಅನ್ನು ಕೂಡಲೇ ಜಾಹೀರಾತು ನೀಡಿರುವ ಬೇರೆ ಬೇರೆ ಪ್ಲಾಟ್ ಫಾರಂ ಗಳಿಂದ ತೆಗೆಸುವಂತೆ ಕೂಡಾ ಒತ್ತಾಯಿಸಿದೆ.

Leave a Comment