ಗ್ಲಾಮರ್ ಗೊಂಬೆ ಹಂಸ ನಂದಿನಿಗೆ ಕ್ಯಾನ್ಸರ್: ನಟಿಯ ಪರಿಸ್ಥಿತಿಗೆ ಮರುಗಿದರು ಅಭಿಮಾನಿಗಳು

Entertainment Featured-Articles News

ನಟಿ ಹಂಸ ನಂದಿನಿ ಎಂದೊಡನೆ ಬಳಕುವ ಬಳ್ಳಿಯಂತ ಅಂದಗಾತಿ ನಟಿಯ ನೆನಪಾಗುತ್ತದೆ. ಕನ್ನಡದ ಮೋಹಿನಿ 88888 ಸಿನಿಮಾದಲ್ಲಿ ನಟಿಸಿರುವ ಈ ನಟಿ ದಕ್ಷಿಣದ ಅದರಲ್ಲೂ ವಿಶೇಷವಾಗಿ ತೆಲುಗು ಸಿನಿಮಾಗಳಲ್ಲಿ ಐಟಂ ನಂಬರ್ ಗಳಿಗೆ ಹೆಜ್ಜೆ ಹಾಕುವ ಮೂಲಕ ಹಾಗೂ ಗ್ಲಾಮರ್ ಪಾತ್ರಗಳನ್ನು ಪೋಷಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ನಟಿಯು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚು ಸೋಶಿಯಲ್ ಮೀಡಿಯಾಗಳಲ್ಲೇ ಹೆಚ್ಚು ಸಕ್ರಿಯವಾಗಿದ್ದಾರೆ. ಅಭಿಮಾನಿಗಳ ಜೊತೆ ಆ ಮೂಲಕ ಸಂಪರ್ಕದಲ್ಲಿ ಇದ್ದಾರೆ.

ಇದೀಗ ನಟಿ ಹಂಸ ನಂದಿನಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಭಿಮಾನಿಗಳು ಹಾಗೂ ಸಿನಿ ರಸಿಕರಿಗೆ ಬೇಸರ ಮೂಡಿಸುವಂತಹ ಒಂದು ಸತ್ಯವನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಹಂಸ ನಂದಿನಿ ತಮ್ಮ ಆರೋಗ್ಯದ ವಿಚಾರವಾಗಿ ಸ್ವತಃ ತಾನೇ ಒಂದು ಪೋಸ್ಟ್ ಮಾಡಿ, ತನಗೆ ಎದುರಾಗಿರುವ ಸಮಸ್ಯೆ ಕುರಿತಾಗಿ ಎಲ್ಲರಿಗೂ ಮಾಹಿತಿಯೊಂದನ್ನು ನೀಡಿದ್ದಾರೆ. ಹಾಗಾದರೆ ಹಂಸ ನಂದಿನಿ ಅವರಿಗೆ ಆಗಿರುವುದೇನು??

ನಟಿ ಹಂಸನಂದಿನಿ ಅವರು ತನಗೆ ಸ್ತನ ಕ್ಯಾನ್ಸರ್ ಆಗಿರುವ ವಿಚಾರ ತಿಳಿಸಿದ್ದಾರೆ. ಇದ್ದಕ್ಕಿದ್ದ ಹಾಗೆ ಇಂತಹ ವಿಚಾರ ತಿಳಿಸಿ ಅಭಿಮಾನಿಗಳಿಗೆ ಶಾ ಕ್ ನೀಡಿದ್ದಾರೆ. ಸದ್ಯಕ್ಕೆ ಹಂಸ ನಂದಿನಿ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು, ಒಂದು ದೀರ್ಘವಾದ ಪೋಸ್ಟ್ ಹಾಕಿಕೊಂಡು ಹಂಸ ನಂದಿನಿ ತಮ್ಮ ಎಲ್ಲಾ ಅಭಿಮಾನಿಗಳಿಗೆ ವಿಚಾರವನ್ನು ತಿಳಿಸಿರುವುದು ಮಾತ್ರವೇ ಅಲ್ಲದೇ ತಾನು ರೋಗವನ್ನು ಗೆದ್ದು, ಮತ್ತಷ್ಟು ಉತ್ಸಾಹದಿಂದ ಬರುವುದಾಗಿ ಹೇಳಿದ್ದಾರೆ.

ಹಂಸ ನಂದಿನಿ ಅವರ ಪೋಸ್ಟ್ ನೋಡಿ ಅನೇಕರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಅವರು ನಟಿಗೆ ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ಶುಭ ಹಾರೈಸಿದ್ದಾರೆ. ಬಹಳಷ್ಟು ಜನರು ನಟಿಗೆ ಧೈರ್ಯವಾಗಿರಿ, ಮಾನಸಿಕವಾಗಿ ದೃಢವಾಗಿರಿ ಎಂದೆಲ್ಲಾ ಕಾಮೆಂಟ್ ಗಳ ಮೂಲಕ ಧೈರ್ಯ ನೀಡಿದ್ದಾರೆ. ಹಂಸ ನಂದಿನಿ ಬೇಗ ಗುಣಮುಖರಾಗಲೆಂದು ನಾವು ಕೂಡಾ ಹಾರೈಸೋಣ.

Leave a Reply

Your email address will not be published. Required fields are marked *