ನೀವು ಜೀನಿಯಸ್ಸಾ?? ಹಾಗಾದ್ರೆ ಈ ಫೋಟೋದಲ್ಲಿ ಚಿರತೆ ಎಲ್ಲಿದೆ? 95% ಜನ ವಿಫಲರಾದ ಟಾಸ್ಕ್!!

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳು ಯಾರ ಬಳಿ ಇರುವುದಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರ ಕೈಯಲ್ಲೂ ಸಹಾ ಮೊಬೈಲ್ ಗಳದ್ದೇ ಕಾರುಬಾರು. ಮನರಂಜನೆಗಾಗಿ ವೈರಲ್ ವೀಡಿಯೋಗಳಿಂದ ಹಿಡಿದು, ಗೇಮ್ ಗಳ ವರೆಗೆ ಎಲ್ಲವೂ ಸಹಾ ಒಂದು ಕ್ಲಿಕ್ ನಲ್ಲಿ ಸಿಗುವ ಮೊಬೈಲ್ ಗಳು ಇಂದಿನ ಜನರ ನಿತ್ಯ ಜೀವನದ ಒಂದು ಪ್ರಮುಖ ಭಾಗ ಆಗಿ ಹೋಗಿದೆ. ಗೇಮ್ ಗಳು ವೀಡಿಯೋಗಳ ನಡುವೆಯೇ ಆಗಾಗ ಕೆಲವು ಫೋಟೋಗಳು ಸಹಾ ನಮ್ಮ ಗಮನ ಸೆಳೆಯುವುದು ಮಾತ್ರವೇ ಅಲ್ಲದೇ ನಮ್ಮ ಕಣ್ಣಿಗೆ ಸಹಾ ಒಂದು ಸವಾಲನ್ನು ಹಾಕುತ್ತವೆ.

ಏಕೆಂದರೆ ಈ ಫೋಟೋಗಳು ನೋಡುವುದಕ್ಕೆ ಒಂದು ರೀತಿ ಕಾಣುತ್ತದೆ ಆದರೆ ವಾಸ್ತವದಲ್ಲಿ ಅಲ್ಲಿ ಬೇರೆ ಏನೋ ಇರುತ್ತದೆ. ಇಂತಹುವುಗಳನ್ನು ಆಪ್ಟಿಕಲ್ ಇಲ್ಯೂಷನ್ ಗಳು ಹಾಗೂ ಫೋಟೋ ಪಜಲ್ಸ್ ಎಂದು ಕರೆಯಲಾಗುತ್ತದೆ. ಹಿಂದೆ ಈ ಫೋಟೋ ಪಜಲ್ಸ್, ಎನ್ನುವುದು ಮ್ಯಾಗಜಿನ್ ಗಳು ಹಾಗೂ ಪತ್ರಿಕೆಗಳ ವಿಶೇಷ ಪುರವಣಿಗಳಲ್ಲಿ ವಾರಕ್ಕೊಮ್ಮೆ ನೋಡಲು ಸಿಗುತ್ತಿದ್ದವು ಹಾಗೂ ಜನರು ತಮ್ಮ ಬುದ್ಧಿವಂತಿಕೆಯನ್ನು ತೋರಿಸಲು ಆ ಪಜಲ್ ಗಳನ್ನು ಬಿಡಿಸುವುದಕ್ಕೆ ಮುಂದಾಗಿ ಬಿಡುತ್ತಿದ್ದರು.

ಇನ್ನು ಈ ಫೋಟೋ ಪಜಲ್ ಗಳ ಉತ್ತರವನ್ನು ಕಂಡು ಹಿಡಿಯಬೇಕಾದರೆ ನಮ್ಮ ಮೆದುಳು, ಕಣ್ಣು ಎರಡು ಚುರುಕಾಗಿರಬೇಕು. ಕೆಲವರು ತಾಳ್ಮೆಯಿಲ್ಲದೇ ಕೈ ಚೆಲ್ಲಿ ಕೂರುತ್ತಾರೆ, ಇದೆಲ್ಲಾ ಗ್ರಾಫಿಕ್ಸ್ ಎಂದು ದೂರಿ ಸುಮ್ಮನಾಗಿ ಬಿಡುತ್ತಾರೆ. ಪ್ರಸ್ತುತ ಅಂತದ್ದೇ ಒಂದು ಹೊಸ ಫೋಟೋ ಪಜಲ್ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಜನರ ಗಮನವನ್ನು ಸೆಳೆದಿದ್ದು, ಜನರ ಕಣ್ಣಿಗೆ ಮತ್ತು ಮೆದುಳಿಗೆ ಒಂದು ಸವಾಲನ್ನು ಹಾಕಿದೆ. ಈ ಪಜಲ್ ಬಿಡಿಸಲು ನೆಟ್ಟಿಗರು ಸಹಾ ಮುಂದಾಗಿದ್ದಾರೆ.

ವೈರಲ್ ಆಗಿರುವ ಫೋಟೋ ದಲ್ಲಿ ಇರುವುದು ಏನು ಎಂದು ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ. ಹೌದು ಈ ಫೋಟೋದಲ್ಲಿ ಒಂದು ಚಿರತೆ ಇದೆ. ಆದರೆ ಅದು ಎಲ್ಲಿದೆ ಎನ್ನುವುದನ್ನು ಕಂಡು ಹಿಡಿಯುವುದರಲ್ಲಿ 95% ಜನರು ವಿಫಲರಾಗಿದ್ದಾರೆ. ಏಕೆಂದರೆ ಫೋಟೋದಲ್ಲಿ ಸುತ್ತಲಿನ ಪ್ರದೇಶದಲ್ಲಿ ಕೇವಲ ಬಂಡೆಕಲ್ಲುಗಳು ಮತ್ತು ಒಣ ಹುಲ್ಲು ಕಾಣುತ್ತಿರುವುದರಿಂದ ಚಿರತೆ ಯನ್ನು ಒಂದೇ ಸಲಕ್ಕೆ ಎಲ್ಲಿದೆ ಎಂದು ಗುರುತಿಸುವುದು ಸಾಧ್ಯವಾಗುವುದಿಲ್ಲ.
ಏಕೆಂದರೆ ಆ ಬಣ್ಣಗಳ ನಡುವೆ ಚಿರತೆ ಕೂಡಾ ಸೇರಿ ಹೋಗಿದೆ.

ಇನ್ನೂ ಏಕೆ ತಡ, ನೀವೂ ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಈಗಲೇ ಕೆಲಸವನ್ನು ನೀಡಿ. ಈ ಫೋಟೋದಲ್ಲಿ ಚಿರತೆ ಎಲ್ಲಿದೆ ಎನ್ನುವುದನ್ನು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವಿದೆಯೇ? ಎ‌ಂದು ಪರೀಕ್ಷಿಸಿಕೊಳ್ಳಿ. ನಿಮ್ಮ ಕಣ್ಣಿಗೆ ಚಿರತೆಯು ಎಲ್ಲಿದೆ ಎಂದು ಕಂಡರೆ ನಿಮ್ಮ ಕಣ್ಣು ಬಹಳ ಚುರುಕಾಗಿದೆ ಎಂದರ್ಥ. ಸೂಕ್ಷ್ಮವಾಗಿ ಗಮನಿಸಿದರೆ ಒಂದೇ ಸಲಕ್ಕೆ ನಿಮಗೆ ಚಿರತೆಯು ಕಂಡರೂ ಕಾಣಬಹುದು.

Leave a Comment