ನೀವು ಜೀನಿಯಸ್ಸಾ?? ಹಾಗಾದ್ರೆ ಈ ಚಿತ್ರದಲ್ಲಿ ಹುಲಿ ಎಲ್ಲಿದೆ ನೋಡಿ? 99% ಜನ ಫೇಲಾದ ಟಾಸ್ಕ್ !!

0 3

ಪ್ರಸ್ತುತ ದಿನಗಳಲ್ಲಿ ಜನರ ಮನರಂಜನೆಯ ಬಹುದೊಡ್ಡ ಮೂಲಗಳು ಯಾವುದು ಎಂದರೆ ಸರಳವಾಗಿ ಜನರು ನೀಡುವ ಉತ್ತರ ಏನು ಎನ್ನುವುದಾದರೆ ಅದು ಸಾಮಾಜಿಕ ಜಾಲತಾಣಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು ಒಂದು ಕಾಲದಲ್ಲಿ ಪತ್ರಿಕೆಗಳು, ಅನಂತರ ರೇಡಿಯೋ ಮತ್ತು ಟಿವಿ, ಸಿನಿಮಾಗಳು ಹೀಗೆ ಮನರಂಜನೆಯ ಮಾದ್ಯಮಗಳ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಯಿತು. ಆದರೆ ಪ್ರಸ್ತುತ ಕಾಲದಲ್ಲಿ ಮಾತ್ರ ಜನರು ಮನರಂಜನೆ ಎಂದೊಡನೆ ಕೈಯಲ್ಲಿರುವ ಮೊಬೈಲ್ ನಲ್ಲಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿ ಬಿಡುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯ ವಿಷಯ ಬಂದಾಗ ಫೋಟೋ ಗಳು, ವೈರಲ್ ವೀಡಿಯೋಗಳಂತಹ ಬಹಳಷ್ಟು ವಿಚಾರಗಳು ಇವೆ. ಆದರೆ ಇವೆಲ್ಲವುಗಳಿಗಿಂತ ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗುತ್ತಿರುವುದು ಮಾತ್ರ ಫೋಟೋ ಪಜಲ್ ಗಳು. ಹೌದು ಮೊದಲು ನ್ಯೂಸ್ ಪೇಪರ್ ಗಳು ಮತ್ತು ಮ್ಯಾಗಜೀನ್ ಗಳಲ್ಲಿ ಹೆಚ್ಚು ಜನರ ಗಮನವನ್ನು ಸೆಳೆದು, ಅವರ ಕಣ್ಣು ಮತ್ತು ಮೆದುಳಿಗೆ ಸವಾಲನ್ನು ಎಸೆಯುತ್ತಿದ್ದವು ಈ ಫೋಟೋ ಪಜಲ್ ಗಳು. ಈಗ ಅಂತಹ ಫೋಟೋ ಪಜಲ್ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.‌

ಹೌದು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಪಜಲ್ ಗಳು ವೈರಲ್ ಆದ ಕೂಡಲೇ ನೆಟ್ಟಿಗರು ನಾವು ಯಾರಿಗೇನೂ ಕಡಿಮೆ ಇಲ್ಲ ಎಂದು ಅವುಗಳಲ್ಲಿ ಅಡಗಿರುವ ರಹಸ್ಯವನ್ನು ಬೇಧಿಸಲು, ಅಡಗಿರುವ ಪ್ರಾಣಿಯನ್ನು ಗುರುತಿಸಲು ಸ್ಪರ್ಧೆಗೆ ಇಳಿದವರಂತೆ ತಮ್ಮ ಕಣ್ಣಿಗೆ ಮತ್ತು ಬುದ್ಧಿಗೆ ಸ್ಪರ್ಧೆಯನ್ನು ನೀಡುತ್ತಾರೆ. ಉತ್ತರ ಹುಡುಕುವಲ್ಲಿ ತಲ್ಲೀನರಾಗುತ್ತಾರೆ. ಉತ್ತರ ಸಿಕ್ಕವರು ಖುಷಿ ಪಟ್ಟರೆ, ಉತ್ತರ ಸಿಗದವರು ತಲೆ ಕೆಡಿಸಿಕೊಳ್ಳುವರು, ಕೆಲವರಾದರೆ ಇದು ಫೇ ಕ್ ಫೋಟೋ ಎಂದು ಬಿಡುತ್ತಾರೆ.

ಈಗ ಸದ್ಯಕ್ಕೆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಫೋಟೋದಲ್ಲಿ ಹುಲಿಯೊಂದು ಅಡಗಿದೆ. ಆದರೆ ಒಂದು ಸಲ ಫೋಟೋವನ್ನು ನೋಡಿದಾಗ ಹುಲಿಯು ನಮ್ಮ ಕಾಣಿಗೆ ಕಾಣಿಸುವುದಿಲ್ಲ. ಒಂದು ಕ್ಷಣ ಅಲ್ಲಿ ಹುಲಿ ಇಲ್ಲವೇನೋ ಎನ್ನುವ ಅನುಮಾನ ಸಹಾ ಮೂಡುತ್ತದೆ. ಆದರೆ ಅದರಲ್ಲಿ ಹುಲಿ ಇದೆ, ನಾವು ಸೂಕ್ಷ್ಮವಾಗಿ ಗಮನಿಸಬೇಕಷ್ಟೇ. ಒಟ್ಟಾರೆ ನೆಟ್ಟಿಗರು ಹುಲಿಯನ್ನು ಹುಡುಕಲು ತಲೆ ಕೆಡಿಸಿಕೊಂಡಿದ್ದಾರೆ. ಕೆಲವರು ಬಹಳ ಬೇಗ ಹುಲಿಯನ್ನು ಹುಡುಕಿದ್ದಾರೆ.

ಹಾಗಾದರೆ ಇನ್ನೇಕೆ ತಡ?? ನೀವು ಕೂಡಾ ಈ ಫೋಟೋದಲ್ಲಿ ಅಡಗಿರುವ ಹುಲಿಯನ್ನು ಕಂಡು ಹಿಡಿಯುವ ಪ್ರಯತ್ನವನ್ನು ಮಾಡಿ, ನಿಮ್ಮ ಕಣ್ಣು ಮತ್ತು ಮೆದುಳು ಎಷ್ಟು ಚುರುಕಾಗಿದೆ ಎನ್ನುವುದನ್ನು ಪರೀಕ್ಷಿಸಿ ನೋಡಿ. ಬೇಗ ಹುಲಿಯು ಕಂಡರೆ ನಿಮ್ಮ ದೃಷ್ಟಿ ಬಹಳ ಚುರುಕಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ವೇಳೆ ಕಾಣದಿದ್ದರೆ ಹುಡುಕಿ ನೋಡಿ, ಇಲ್ಲವಾದರೆ ಉತ್ತರ ಇರುವ ಫೋಟೋವನ್ನು ನೋಡಿದರೆ ನಿಮಗೆ ಉತ್ತರ ಸಿಗುತ್ತದೆ.

Leave A Reply

Your email address will not be published.