ಕಳೆದ ಕೆಲವು ದಿನಗಳಿಂದಲೂ ಸಹಾ ಬಾಲಿವುಡ್ ನಟರನ್ನು ಮತ್ತು ಅವರ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಪದೇ ಪದೇ ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಷ್ ಟ್ಯಾಗ್ ಗಳು ಟ್ರೆಂಡ್ ಆಗುತ್ತಿವೆ. ಅಂದರೆ ಬಾಯ್ಕಾಟ್ ಬಾಲಿವುಡ್ ಹ್ಯಾಷ್ ಟ್ಯಾಗ್ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಇದೇ ವೇಳೆ ನಟ, ನಟಿಯರು ಸಹಾ ಅಹಂಕಾರ ಪ್ರದರ್ಶನ ಮಾಡುವಂತೆ ನಮ್ಮ ಸಿನಿಮಾಗಳನ್ನು ನೋಡಬೇಡಿ ಎಂದು ಸಾರ್ವಜನಿಕವಾಗಿ ಹೇಳುತ್ತಿರುವುದು ಜನರಿಗೆ ಸವಾಲನ್ನು ಹಾಕಿದಂತೆ ಕಂಡಿದ್ದು, ಪ್ರೇಕ್ಷಕರು ಆ ಸವಾಲು ಸ್ವೀಕರಿಸಿ, ಥಿಯೇಟರ್ ಗಳ ಕಡೆಗೆ ತಲೆ ಕೂಡಾ ಹಾಕುತ್ತಿಲ್ಲ. ಇಂತಹುದೇ ಒಂದು ವಿಚಾರವಾಗಿ ನಟ ವಿಜಯ ದೇವರಕೊಂಡ ನೀಡಿದ್ದ ಹೇಳಿಕೆಗಳಿಂದ ಸಿನಿಮಾ ಥಿಯೇಟರ್ ಮಾಲೀಕರೊಬ್ಬರು ಕಿಡಿಕಾರಿದ್ದಾರೆ.
ಮುಂಬೈ ನ ಗೈಟಿ ಗೆಲಾಕ್ಸಿ, ಮರಾಠಾ ಮಂದಿರ್ ಥಿಯೇಟರ್ ಗಳ ಮಾಲೀಕ ಮನೋಜ್ ದೇಸಾಯಿ ಅವರು ವಿಜಯ ದೇವರಕೊಂಡ ಅವರನ್ನು ಟೀಕೆ ಮಾಡಿದ್ದಾರೆ. ಅವರು ಕೋಪದಿಂದ ಮಾತಾನಾಡುತ್ತಾ, ನೀವು ( ವಿಜಯ ದೇವರಕೊಂಡ ) ನಿಮ್ಮ ಸಿನಿಮಾಗಳನ್ನು ಬಾಯ್ಕಾಟ್ ಮಾಡಿ ಎಂದು ಹೇಳುವ ಮೂಲಕ ಎಂತ ಸ್ಮಾರ್ಟ್ ನೆಸ್ ತೋರಿಸ್ತಾ ಇದ್ದೀರಾ? ನಿಮ್ಮ ಇಂತಹ ವ್ಯವಹಾರಗಳು ನಮ್ಮನ್ನು ಸಮಸ್ಯೆಯಲ್ಲಿ ಸಿಲುಕಿಸುತ್ತಿವೆ. ನಿಮ್ಮ ಮಾತುಗಳು ಥಿಯೇಟರ್ ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮೇಲೆ ಪರಿಣಾಮವನ್ನು ಬೀರುತ್ತಿದೆ. ಮಿಸ್ಟರ್ ವಿಜಯ್ ನೀವು ಕೊಂಡ ಅಲ್ಲ, ಅನಕೊಂಡ. ವಿನಾಶ ಕಾಲೇ ವಿಪರೀತ ಬುದ್ಧಿ.
ವಿನಾಶದ ಸಮಯ ಹತ್ತಿರ ಬಂದಾಗ ಬುದ್ಧಿ ಕೆಲಸ ಮಾಡುವುದಿಲ್ಲ. ನೀವು ಅದನ್ನೇ ಮಾಡುತ್ತಿರುವಿರಿ. ಇಷ್ಟಕ್ಕೂ ಅದೆಲ್ಲಾ ನಿಮ್ಮಿಷ್ಟ ಬಿಡಿ. ಮಿಸ್ಟರ್ ವಿಜಯ್, ನಿಮಗೆ ಅಹಂಕಾರ ಬಂದಿರುವ ಹಾಗಿದೆ. ಸಿನಿಮಾ ನೋಡಲಿ, ಇಷ್ಟ ಇಲ್ಲದೇ ಇದ್ರೆ ನೋಡೋದು ಬೇಡ ಎನ್ನುವ ಮಾತಿನ ಪರಿಣಾಮ ನೀವು ನೋಡಿಲ್ವೇನು? ಪ್ರೇಕ್ಷಕರು ಸಿನಿಮಾ ನೋಡಲಿಲ್ಲ ಅಂದ್ರೆ ಏನಾಗುತ್ತೆ ಎಂದು ಅಮೀರ್ ಖಾನ್, ಅಕ್ಷಯ್ ಕುಮಾರ್, ತಾಪ್ಸಿ ಪನ್ನು ಸಿನಿಮಾಗಳ ಮೂಲಕ ನಿಮಗೆ ಗೊತ್ತಾಗಲಿಲ್ಲವೇ? ನನಗೆ ಲೈಗರ್ ಮೇಲೆ ದೊಡ್ಡ ನಿರೀಕ್ಷೆ ಇತ್ತು, ಆದರೆ ಸಂದರ್ಶನದಲ್ಲಿ ನೀವು ಆಡಿದ ಮಾತಿನ ಪರಿಣಾಮ ಈಗ ಸಿನಿಮಾ ಮೇಲೆ ಖಂಡಿತ ಆಗಿದೆ.
ಹೀಗೆ ಮನೋಜ್ ದೇಸಾಯಿ ಅವರು ನಮ್ಮ ಸಿನಿಮಾ ನೋಡಬೇಡಿ ಎಂದು ಅಹಂಕಾರದಿಂದ ನುಡಿಯುತ್ತಿರುವ ಸೆಲೆಬ್ರಿಟಿಗಳ ಬಗ್ಗೆ ಪರೋಕ್ಷವಾಗಿ ತಮ್ಮ ಸಿಟ್ಟು, ಅಸಮಾಧಾನವನ್ನು ಹೊರ ಹಾಕಿದ್ದಾರೆ. ಲೈಗರ್ ಸಿನಿಮಾದ ಪ್ರಚಾರದ ವೇಳೆ ವಿಜಯ ದೇವರಕೊಂಡ ಬಾಲಿವುಡ್ ಸಿನಿಮಾಗಳ ಬಾಯ್ ಕಾಟ್ ಬಗ್ಗೆ ಮಾತನಾಡಿದ್ದು, ಹಲವರ ಅಸಮಾಧಾನಕ್ಕೆ ಕಾರಣ ಆಗಿದೆ. ಲೈಗರ್ ಸಿನಿಮಾ ಕೂಡಾ ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಗೊಂಡು ನೀರಸ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ, ಪ್ರೇಕ್ಷಕರಿಗೆ ಸಿನಿಮಾ ಬೇಸರವನ್ನು ಮೂಡಿಸಿದೆ.