ನೀಲಿ ಸಿನಿಮಾಗಳ ನಿರ್ಮಾಣದ ವಿಚಾರವಾಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್

Written by Soma Shekar

Published on:

---Join Our Channel---

ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಬಗ್ಗೆ ಪತ್ಯೇಕವಾದ ಪರಿಚಯವನ್ನು ನೀಡುವ ಅಗತ್ಯವಿಲ್ಲ. ಈಗಾಗಲೇ ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದಲ್ಲಿಯೂ ಸಹಾ ಹೆಸರನ್ನು‌ ಮಾಡಿರುವ ಶಿಲ್ಪಾ ಶೆಟ್ಟಿ ಹೆಚ್ಚು ಸಕ್ರಿಯರಾಗಿರುವುದು ಮಾತ್ರ ಬಾಲಿವುಡ್ ನಲ್ಲಿ. ಟಿವಿ ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಸಹಾ ಶಿಲ್ಪಾ ಶೆಟ್ಟಿ ಜಡ್ಜ್ ಆಗಿ ಕಳೆದ ಕೆಲವು ಸೀಸನ್ ಗಳಿಂದಲೂ ಮುಂದುವರೆಯುತ್ತಿದ್ದಾರೆ. ಇದಲ್ಲದೇ ಅಪರೂಪಕ್ಕೆ ಒಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಫಿಟ್ನಿಸ್ , ಯೋಗ ಹಾಗೂ ವಿವಿಧ ಫುಡ್ ಐಟಂ ಗಳ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಶಿಲ್ಪಾ ಶೆಟ್ಟಿ ವೀಡಿಯೋಗಳನ್ನು ಹಂಚಿಕೊಳ್ಳುವುದು ಉಂಟು.

ಇದೀಗ ಈ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅ ಶ್ಲೀ ಲ ಚಿತ್ರಗಳ ನಿರ್ಮಾಣ ಮಾಡಿರುವ ಆರೋಪದ ಅಡಿಯಲ್ಲಿ ಮುಂಬೈನ ಕ್ರೈಂ ಬ್ರಾಂಚ್ ಪೋಲಿಸರು ಬಂ ಧಿ ಸಿದ್ದಾರೆ. ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ನಿರ್ಮಾಣವನ್ನು ಮಾಡಿದ್ದಾರೆ ಎನ್ನಲಾಗಿದೆ. ಅ ಶ್ಲೀ ಲ ಸಿನಿಮಾಗಳನ್ನು ಮೊಬೈಲ್ ಅಪ್ಲಿಕೇಷನ್ ನಲ್ಲಿ ಅಪ್ಲೋಡ್ ಮಾಡಿದವರ ವಿ ರು ದ್ಧ ಕಳೆದ ಫೆಬ್ರವರಿಯಲ್ಲಿ ಪೋಲಿಸರು ಪ್ರಕರಣವನ್ನು ದಾಖಲು ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರ ಅವರು ಪ್ರಮುಖ ಸಂಚುಕೋರ ವ್ಯಕ್ತಿಯಾಗಿದ್ದಾರೆ ಎನ್ನಲಾಗಿದೆ.

ರಾಜ್ ಕುಂದ್ರಾ ಅವರ ವಿ ರು ದ್ಧ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ಕ್ರೈಂ ಬ್ರಾಂಚ್ ನ ಪೋಲಿಸರು ಹೇಳಿದ್ದಾರೆ. ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂ ಧಿ ಸಲಾಗಿದ್ದು ಅವರ ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸರು ತಿಳಿಸಿದ್ದಾರೆ. ನೀ ಲಿ ಸಿನಿಮಾಗಳ ನಿರ್ಮಾಣದಲ್ಲಿ ರಾಜ್ ಕುಂದ್ರಾ ಹೆಸರು ಹೊರ ಬಂದಿರುವುದು ಎಲ್ಲರನ್ನು ಆಶ್ಚರ್ಯಕ್ಕೆ ಗುರಿ ಮಾಡಿದೆ. ಅಲ್ಲದೇ ವಿಷಯದ ಸತ್ಯಾಸತ್ಯತೆಗಳನ್ನು ತಿಳಿಯುವ ಕಡೆಗೆ ಎಲ್ಲರ ಗಮನ ಹರಿದಿದೆ. ಈ ವಿಚಾರದಲ್ಲಿ ಇನ್ನು ಹೆಚ್ಚಿನ ಮಾಹಿತಿಯನ್ನು ಜನರು ನಿರೀಕ್ಷೆ ಮಾಡುತ್ತಿದ್ದಾರೆ.

Leave a Comment