ನೀರಜ್ ಚೋಪ್ರಾ ಕೋಚ್ ಗೆ ಗೇಟ್ ಪಾಸ್: ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದೇ ಮುಳುವಾಯ್ತಾ??

0 4

ನೀರಜ್ ಚೋಪ್ರಾ ಈ ಹೆಸರಿಗೆ ಈಗ ಪರಿಚಯದ ಅಗತ್ಯ ಖಂಡಿತ ಇಲ್ಲ. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕಣ್ಮಣಿಯಾಗಿದ್ದಾರೆ ನೀರಜ್. ನೀರಜ್ ಚೋಪ್ರಾ ಅವರ ಈ ಗೆಲುವು ಹಾಗೂ ಸಾಧನೆಯಲ್ಲಿ ಜರ್ಮನಿಯ ಕೋಚ್ ಆಗಿರುವ ಉವೆ ಹಾನ್ ಅವರ ಕೊಡುಗೆ ಕೂಡಾ‌ ಸೇರಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಇದೀಗ ಮೋಚ್ ಉವೆ ಹಾನ್ ಅವರನ್ನು ಮನೆಗೆ ಕಳುಹಿಸಲಾಗಿದೆ. ಹೌದು ಕಳೆದ ಜೂನ್ ನಲ್ಲಿ ಅವರು ಸಾಯ್ ಮತ್ತು ಅಥ್ಲೆಟಿಕ್ಸ್ ಫೆಡರೇಷನ್ ನ ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದು ಈ ತಲೆ ದಂಡ ಕ್ಕೆ ಕಾರಣ ಎನ್ನಲಾಗುತ್ತಿದೆ.

ಉವೆ ಹಾನ್ ಅವರಿಗೆ 57 ವರ್ಷ ವಯಸ್ಸು. ಜಾವೆಲಿನ್ ಥ್ರೋ ನಲ್ಲಿ ನೂರು ಮೀಟರ್ ಗೂ ಅಧಿಕ ದೂರ ಜಾವೆಲಿನ್ ಎಸೆದ ಏಕೈಕ ಅಥ್ಲೀಟ್ ಎನಿಸಿರುವ ಇವರನ್ನು ನೀರಜ್ ಅವರಿಗೆ ಕೋಚ್ ಆಗಿ 2017 ರಲ್ಲಿ ನೇಮಕ ಮಾಡಲಾಗಿತ್ತು. 2018 ರಲ್ಲಿ ಏಷ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ ನಲ್ಲಿ ನೀರಜ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಉವೆ ಹಾನ್ ಅವರ ಕೊಡುಗೆ ಬಹಳ ಮಹತ್ವದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಾದ ಬಳಿಕೆ ಒಲಂಪಿಕ್ಸ್ ನಲ್ಲಿ ಸಹಾ ಇವರು ಶಿವಪಾಲ್ ಸಿಂಗ್ ಹಾಗೂ ಅನ್ನು ರಾಣಿ ಅವರಿಗೆ ಮಾರ್ಗದರ್ಶಕರಾಗಿದ್ದರು.

ಆದರೆ ಈ ಇಬ್ಬರು ಅಥ್ಲೀಟ್ ಗಳು ಸಹಾ ಟೋಕಿಯೋ ಒಲಂಪಿಕ್ಸ್ ನಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುವಲ್ಲಿ ವಿ ಫ‌ಲರಾಗಿದ್ದರು. ಕಳೆದ ಸೋಮವಾರ ಅಥ್ಲೀಟ್ ಗಳು ಹಾಗೂ ಅವರ ಕೋಚ್ ಗಳ ಪರ್ಫಾಮೆನ್ಸ್ ನ ಪುನರಾವಲೋಕನ ಮಾಡುವ ಸಭೆಯೊಂದನ್ನು ನಡೆಸಲಾಗಿತ್ತು. ಸಭೆಯ ನಂತರ ಉವೆ ಹಾನ್ ಅವರಿಗೆ ಮನೆಯ ದಾರಿ ತೋರಿಸಲಾಗಿದೆ.

ಈ ವಿಷಯವನ್ನು ಅಥ್ಲೆಟಿಕ್ಸ್ ಫೆಡರೇಶನ್ ನ ಅಧ್ಯಕ್ಷರಾದ ಅದಿಲ್ಲೆ ಸುಮರಿವಾಲ್ಲ ಅವರು ತಿಳಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ನೀರಜ್ ಅವರು ಚಿನ್ನ ಗೆಲ್ಲಲು ಪ್ರಮುಖ ಪಾತ್ರವನ್ನು ನಿರ್ವಹಿಸಿರುವಂತಹ ಕೋಚ್ ಆದಂತಹ ಬಾರ್ಟೊನಿಟ್ಜ್ ಅವರನ್ನು ಇನ್ನು ಮುಂದೆಯೂ ಸಹಾ ಕೋಚ್ ಆಗಿ ಮುಂದುವರೆಸುವುದಾಗಿಯೂ ಅಥ್ಲೆಟಿಕ್ಸ್ ಫೆಡರೇಶನ್ ನ ಅಧ್ಯಕ್ಷರು ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಉವೆ ಹಾನ್ ಅವರನ್ನು ಬದಲಾಯಿಸಿರುವುದಾಗಿ, ಅವರ ಪ್ರದರ್ಶನ ಅಷ್ಟೇನು ಉತ್ತಮವಾಗಿರಲಿಲ್ಲ. ನಾವು ಇಬ್ಬರು ಹೊಸ ಕೋಚ್ ಗಳನ್ನು ಕರೆತರಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದೇ ಉವೆ ಹಾನ್ ಅವರು ಕಳೆದ ಜೂನ್ ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಹಾಗೂ ಅಥ್ಲೆಟಿಕ್ಸ್‌ ಫೆಡರೇಷನ್ ಆಫ್ ಇಂಡಿಯಾದ ಅವ್ಯವಸ್ಥೆಯ ಬಗ್ಗೆ ಉವೆ ಹಾನ್‌ ತಮ್ಮ ಅಸಮಾಧಾನ ಹೊರಹಾಕಿದ್ದರು.

ಒಲಿಂಪಿಕ್ಸ್‌ ಸಿದ್ದತೆಗಳ ಬಗ್ಗೆ ಅವರು ಮಾದ್ಯಮವೊಂದಕ್ಕೆ ಸಂದರ್ಶನವನ್ನು ನೀಡುವ ವೇಳೆಯಲ್ಲಿ ಫೆಡರೇಶನ್ ನಲ್ಲಿ ಕೆಲವರ ಜೊತೆ ಕೆಲಸವನ್ನು ಮಾಡುವುದು ಕಷ್ಟ ಎನ್ನುವ ಮಾತನ್ನು ಹೇಳಿದ್ದರು. ಅಲ್ಲದೇ ಅಥ್ಲೀಟ್ ಗಳಿಗೆ ಅಗತ್ಯ ಸೌಲಭ್ಯಗಳು ಇಲ್ಲವೆಂದು ಆ ರೋ ಪಿಸಿದ್ದರು. ಬಹುಶಃ ಅವರು ನೀಡಿದ ಹೇಳಿಕೆಗಳೇ ಈಗ ಅವರಿಗೆ ಮುಳುವಾಯಿತು ಎಂದು ಬಹಳಷ್ಟು ಜನರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.