ನೀನ್ ಯಾವಳೇ, ತೆಗೆದು ಬಾರ್ಸೋಣ ಅನ್ಸುತ್ತೆ: ಸೋನು ಮೇಲೆ ಸಿಡಿದೆದ್ದ ರಾಕೇಶ್ ಅಡಿಗ ಆಡಿದ ಮಾತಿಗೆ ನೆಟ್ಟಿಗರು ಶಾಕ್!!

Entertainment Featured-Articles Movies News

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ಒಂದು ಈಗಾಗಲೇ ಎರಡು ವಾರಗಳನ್ನು ಮುಗಿಸಿ ಮೂರನೇ ವಾರದಲ್ಲಿ ಮುಂದುವರೆದಿದೆ. ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಮತ್ತು ರಾಕೇಶ್ ಅಡಿಗ ನಡುವೆ ಸ್ನೇಹ ಚಿಗುರಿತ್ತು. ನೇರವಾಗಿ ಮಾತನಾಡುವ ಸೋನು ಗೌಡ ಮಾತುಗಳನ್ನು ಮೆಚ್ಚಿದ್ದ ರಾಕೇಶ್ ಅಡಿಗ ಮತ್ತು ಸೋನು ನಡುವೆ ಒಂದು ಆತ್ಮೀಯತೆ ಹೆಚ್ಚಿತ್ತು. ಅಲ್ಲದೇ ಅವರ ಸೋನು ರಾಕೇಶ್ ರನ್ನು ಇಷ್ಟ ಪಡುತ್ತಿದ್ದಾರೆ ಎಂದು ಸಹಾ ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ ಹೀಗೆ ಆತ್ಮೀಯ ಸ್ನೇಹಿತರಾಗಿದ್ದ ರಾಕೇಶ್ ಅಡಿಗ ಅವರ ನಡುವೆ ಜಗಳವಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ರಾಕೇಶ್ ಸೋನು ಗೌಡಗೆ ಖಡಕ್ ಎಚ್ಚರಿಕೆಯನ್ನು ಸ್ವಲ್ಪ ಖಾರವಾಗಿಯೇ ನೀಡಿರುವುದು ಕಂಡು ಬಂದಿದೆ.

ಬಿಗ್ ಬಾಸ್ ಕೊಟ್ಟಿದ್ದ ಹೊಸ ಟಾಸ್ಕ್ ನಲ್ಲಿ ಮನೆಯ ಎಲ್ಲಾ ಭಾಗಗಳು ಲಾಕ್ ಆಗಿದ್ದವು. ಮನೆಯ ಯಾವುದೇ ಭಾಗಕ್ಕೆ ಹೋಗಬೇಕಾದರೂ ಗಡಿಯಾರವನ್ನು ತಿರುಗಿಸಬೇಕು. ಅಲ್ಲದೇ ಒಮ್ಮೆಗೆ ನಾಲ್ಕು ಜನರು ಮಾತ್ರವೇ ಮನೆಯೊಳಗೆ ಹೋಗಬಹುದಿತ್ತು. ಪೌಡರ್ ರೂಮ್ ನಿಂದ ಬಟ್ಟೆಗಳನ್ನು ತರಲು, ಮೊಟ್ಟೆ ಬಿಟ್ಟರೆ ಕೆಟ್ಟೆ ಎನ್ನುವ ಟಾಸ್ಕ್ ನೀಡಲಾಗಿತ್ತು. ಟಾಸ್ಕ್ ಶುರುವಾಗುವ ಮುನ್ನ ಮನೆಯ ಬೇರೆ ಯಾವ ಭಾಗವನ್ನು ಯಾರೂ ಬಳಸುವ ಹಾಗೆ ಇರಲಿಲ್ಲ. ಆದರೆ ರಾಕೇಶ್ ಮತ್ತು ಸೋನು ಸ್ಮೋಕ್ ರೂಮ್ ಬಳಿಸಿದರು. ಪರಿಣಾಮವಾಗಿ ಬಿಗ್ ಬಾಸ್ ಶಿ ಕ್ಷೆ ನೀಡಿ ಮನೆಯೊಳಕ್ಕೆ ಒಮ್ಮೆಗೆ ಇಬ್ಭರು ಮಾತ್ರವೇ ಹೋಗಬೇಕು ಎಂದು ಸೂಚನೆ ನೀಡಿದರು.

ಇದರಿಂದ ಮನೆಯ ಸದಸ್ಯರು ಬೇಸರಗೊಂಡು ಮಾತನಾಡಿದಾಗ, ರಾಕೇಶ್ ತಪ್ಪು ಒಪ್ಪಿಕೊಂಡರು. ಆದರೆ ಸೋನು ಎಲ್ಲರೂ ತಪ್ಪು ಮಾಡ್ತಾರೆ ಎಂದು ವಾದ ಮಾಡಿದರು. ಆಗ ರಾಕೇಶ್ ಸೋನು ಗೆ ತಪ್ಪನ್ನು ಒಪ್ಪಿಕೊಳ್ಳೋದು ಕಲಿ ಎಂದು ಹೇಳಿದರು. ಇಬ್ಬರ ನಡುವೆ ಒಂದಷ್ಟು ಮಾತು, ಚರ್ಚೆ ನಡೆಯಿತು. ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ. ಅನಂತರ ಅಡುಗೆ ಮನೆಯಲ್ಲಿ ಗ್ಯಾಸ್ ಉರಿ ಕಡಿಮೆ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರಾಕೇಶ್ ಅಡಿಗ ಸಿಕ್ಕಾಪಟ್ಟೆ ಕೋಪಗೊಂಡು ಸೋನುಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಕೇಶ್ ಜೋರಾಗಿ ಮಾತನಾಡಿದ್ದರಿಂದ ಸೋನು, ನೀನು ಹಾಗೆಲ್ಲಾ ಕಿರುಚಬೇಡ ನನಗೆ.. ನೀನೇ ಫಸ್ಟ್ ನನಗೆ ಹೀಗೆಲ್ಲಾ ಕಿರುಚೋದು ಎಂದಾಗ ರಾಕೇಶ್ ಕೂಡಾ ಖಡಕ್ಕಾಗೇ ಉತ್ತರ ನೀಡಿದ್ದು, ನೀನು ಕಿರುಚೋದಕ್ಕೆ ನಿನ್ನ ವಾಯ್ಸ್‌ನಲ್ಲಿ ನಾನು ಮಾತನಾಡುತ್ತಿರೋದು, ನಿನ್ನ ವಾಯ್ಸ್ ಇಷ್ಟೇ ಜೋರಾಗಿ ಬರುತ್ತೆ ಎಂದಿದ್ದಾರೆ. ಆಗ ಸೋನು ರಾಕೇಶ್ ಗೆ ಮುಚ್ಚು ಎಂದಿದ್ದು, ಇದನ್ನು ಕೇಳಿದ ರಾಕೇಶ್ ನನಗೂ ಅಷ್ಟೇ, ಈ ತರಹ ಮುಚ್ಚು – ಗಿಚ್ಚು ಅಂತೆಲ್ಲಾ ಅಂದ್ರೆ, ತೆಗೆದು ಬಾರಿಸೋಣ ಅನ್ಸುತ್ತೆ ಎಂದಿದ್ದಾರೆ.

ಆಗ ಮತ್ತೆ ಸೋನು ತಿರುಗೇಟು ನೀಡುತ್ತಾ‌ ರಾಕೇಶ್ ಗೆ
ನಾನು ಯಾವಾಗ ನಿನ್ನ ಮೇಲೆ ರೈಸ್ ಆಗ್ತೀನಿ.. ನಮ್ಮ ತಾಯಾಣೆ ಗೊತ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಇದರಿಂದ ಕೋಪಗೊಂಡು ರಾಕೇಶ್, ನೀನ್ ಯಾವಳೇ..? ಯಾರು ನೀನು ನನ್ನ ಮೇಲೆ ರೈಸ್ ಆಗೋಕೆ? ನಾನು ಹೇಳಬೇಕು ಅದನ್ನ,ನೀನಲ್ಲ. ನಿನ್ ಮನೆ ಕೆಲಸದವನು ಅಂದುಕೊಂಡಿದ್ಯಾ ನನ್ನನ್ನ? ಹಾಗೆ ಹೇಳೋಕೆ? ಲಿಮಿಕ್ ಕ್ರಾಸ್ ಮಾಡಬೇಡ.. ಸೋನು ಎಂದು ಎಚ್ಚರಿಕೆ ನೀಡಿದಾಗ ಸೋನು ಸರಿ ಆಯ್ತು ಎಂದು ಉತ್ತರ ನೀಡಿ ಸುಮ್ಮನಾಗಿದ್ದಾರೆ. ‌

Leave a Reply

Your email address will not be published.