ನೀನು ಸಿಕ್ಕಿದ್ದೇ ಅದೃಷ್ಟ ಎಂದು ನಿರ್ಮಾಪಕ ಕೈ ಹಿಡಿದು 2ನೇ ಮದುವೆಯಾದ ನಟಿ: ಶಾಕ್ ಆದ ನೆಟ್ಟಿಗರೀಗ ಕೇಳ್ತಿದ್ದಾರೆ ಇಂತಹ ಪ್ರಶ್ನೆ
ತಮಿಳು ಕಿರುತೆರೆಯಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಟಿ, ನಿರೂಪಕಿ ಮಹಾಲಕ್ಷ್ಮಿ ಅವರ ಮದುವೆ ಫೋಟೋಗಳು ನಿನ್ನೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ. ಹೌದು ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಜೊತೆಯಲ್ಲಿ ನಿನ್ನೆ ತಿರುಪತಿಯಲ್ಲಿ ಸಪ್ತಪದಿ ಯನ್ನು ತುಳಿದಿದ್ದಾರೆ. ನಿನ್ನೆ ಬೆಳಿಗ್ಗೆ ಹನ್ನೊಂದು ಗಂಟೆಯ ವೇಳೆಯಲ್ಲಿ ರವೀಂದರ್ ಮತ್ತು ಮಹಾಲಕ್ಷ್ಮಿ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಆದರೆ ಇದು ಇಬ್ಬರಿಗೂ ಸಹಾ ಎರಡನೇ ಮದುವೆಯಾಗಿದೆ ಎನ್ನುವುದು ಸಹಾ ವಾಸ್ತವವಾಗಿದೆ. ಮದುವೆಯ ಫೋಟೋಗಳನ್ನು ಮಹಾಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ ನಂತರ ವೈವಿದ್ಯಮಯ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.
ನಟಿಯು ಮದುವೆ ಫೋಟೋಗಳನ್ನು ಹಂಚಿಕೊಂಡು ಅದರ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡು, “ನನ್ನ ಜೀವನದಲ್ಲಿ ನಿಮ್ಮನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ. ನನ್ನ ಜೀವನದಲ್ಲಿ ನೀವು ಪ್ರೀತಿಯನ್ನು ತುಂಬಿರುವಿರಿ. ಲವ್ ಯೂ” ಎಂದು ಬರೆದುಕೊಂಡು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಅಲ್ಪ ಸಮಯದಲ್ಲೇ ದೇಶದಾದ್ಯಂತ ವೈರಲ್ ಆಗಿದೆ. ಪ್ರಾದೇಶಿಕ ಭಾಷೆಗಳು ಮಾತ್ರವೇ ಅಲ್ಲದೇ ಹಿಂದಿಯಲ್ಲಿ ಸಹಾ ಇವರ ಮದುವೆಯ ವಿಚಾರ ದೊಡ್ಡ ಸುದ್ದಿಯಾಗಿ ಈಗ ಎಲ್ಲರ ಗಮನ ಸೆಳೆಯುವ ಜೊತೆಗೆ ಟ್ರೋಲ್ ಮಾಡುವವರು ಇದನ್ನು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.
ಮಹಾಲಕ್ಷ್ಮಿ ಅವರ ಅಭಿಮಾನಿಗಳು, ಮತ್ತು ಕೆಲವು ನೆಟ್ಟಿಗರು ನಟಿಗೆ ಹೊಸ ಜೀವನದ ಶುಭಾರಂಭಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಶುಭಾಶಯವನ್ನು ಕೋರುತ್ತಿದ್ದಾರೆ. ಆದರೆ ಇದೇ ವೇಳೆ ಇನ್ನೊಂದು ವರ್ಗ ಈ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಮಾಡಿದೆ, ಅನುಮಾನಗಳನ್ನು ವ್ಯಕ್ತಪಡಿಸಿದೆ. ಟೀಕೆಗಳನ್ನು ಸಹಾ ಮಾಡಿ, ವ್ಯಂಗ್ಯವಾಗಿ ಕಾಮೆಂಟ್ ಗಳನ್ನು ಸಹಾ ಮಾಡಲಾಗುತ್ತಿದೆ. ಕೆಲವರು ಕಾಮೆಂಟ್ ಮಾಡಿ ಇದೇನು ಸೀರಿಯಲ್ ಮದುವೇನೋ ಅಥವಾ ರಿಯಲ್ ಮದುವೇನೋ ಎಂದರೆ ಇನ್ನೂ ಕೆಲವರು ಇದನ್ನು ಖಂಡಿತ ನಮ್ಮಿಂದ ನಂಬೋಕೆ ಆಗ್ತಾ ಇಲ್ಲ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಮಹಾಲಕ್ಷ್ಮಿ ಮತ್ತು ರವೀಂದರ್ ಒಂದೇ ಉದ್ಯಮದಲ್ಲಿ ಕೆಲಸವನ್ನು ಮಾಡಿರುವವರು. ಮಹಾಲಕ್ಷ್ಮಿ ಅವರು ತಮಿಳು ಕಿರುತೆರೆಯ ಪ್ರೇಕ್ಷಕರಿಗೆ ಬಹು ಚಿರಪರಿಚಿತವಾದ ಮುಖವಾಗಿದ್ದಾರೆ. ಈ ಹಿಂದೆ ರವೀಂದರ್ ನಿರ್ಮಾಣದ ಒಂದು ಸಿನಿಮಾದಲ್ಲಿ ಸಹಾ ನಟಿ ನಟಿಸಿದ್ದರು. ಲೀಲಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರವೀಂದರ್ ಹಲವು ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಿ ಜನಪ್ರಿಯತೆ ಪಡೆದಿದ್ದಾರೆ. ಇನ್ನು ಮಹಾಲಕ್ಷ್ಮಿ ಅವರು ಪ್ರಸ್ತುತ ತಮಿಳಿನ ಜನಪ್ರಿಯ ಸೀರಿಯಲ್ ಮಹಾರಸಿಯಲ್ಲಿ ನಟಿಸುತ್ತಾ, ಕಿರುತೆರೆಯ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ.