ನೀನು ವೇ ಶ್ಯಾವಾಟಿಕೆಗೂ ನಾಲಾಯಕ್: ನಟಿಗೆ ಸೆಟ್ ನಲ್ಲೇ ನಿರ್ದೇಶಕನಿಂದ ಅವಮಾನ!!

Written by Soma Shekar

Published on:

---Join Our Channel---

ದಕ್ಷಿಣ ಸಿ‌ನಿಮಾ ರಂಗದಲ್ಲಿ ಅದರಲ್ಲೂ ತೆಲುಗು ಚಿತ್ರ ರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ, ತನ್ನದೇ ಆದ ಸ್ಥಾನವನ್ನು, ವರ್ಚಸ್ಸನ್ನು ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಎಂದರೆ ಅವರು ಸುಧಾ. ತೆಲುಗು ಸಿನಿಮಾಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರಿಗೂ ತಾಯಿಯಾಗಿ, ಅತ್ತಿಗೆಯಾಗಿ, ಅಕ್ಕನಾಗಿ ವಿವಿಧ ಪಾತ್ರಗಳಲ್ಲಿ ನಟಿಸಿರುವ ಈ ಹಿರಿಯ ನಟಿಗೆ ಇಂದು ತೆಲುಗು ಸಿನಿಮಾದಲ್ಲಿ ಅವರದ್ದೇ ಆದ ಗೌರವ ಇದೆ, ಅಭಿಮಾನಿಗಳ ಬಳಗವಿದೆ ಹಾಗೂ ಜನಪ್ರಿಯತೆ ಇದೆ. ಆದರೆ ಇವರ ವೃತ್ತಿ ಜೀವನದ ಒಂದು ನೆನಪು ಅವರಿಗೆ ಮರೆಯಲಾಗದ ನೋ ವು ಉಳಿಸಿದೆ.

ಆದರೆ ಈ ನಟಿಯು ಸಹಾ ಹಿಂದೊಮ್ಮೆ ಸೆಟ್ ನಲ್ಲಿ ತಾನು ಅನುಭವಿಸಿದ ಅ ವ ಮಾನ, ಅದರಿಂದಾದ ಮಾನಸಿನ ವೇ ದ ನೆ ಮತ್ತು ಯಾತನೆಯ ಕುರಿತಾಗಿ ಮಾದ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಹೌದು, ಇಂದು ಸುಧಾ ಅವರು ಎತ್ತರಕ್ಕೆ ಬೆಳೆದಿದ್ದಾರೆ, ಆದರೆ ಆರಂಭದ ದಿನಗಳಲ್ಲಿ ಅವರಿಗೆ ಸುಂದರಂ ಮಾಸ್ಟರ್ ಮಾಡಿದ್ದ ಅ ವ ಮಾ ನ ವನ್ನು ಸುಧಾ ಅವರು ಮರೆತಿಲ್ಲ. ಸುಂದರ್ ಮಾಸ್ಟರ್ ದಕ್ಷಿಣ ಸಿನಿಮಾಗಳ ಜನಪ್ರಿಯ ನೃತ್ಯ ನಿರ್ದೇಶಕ. ನಟ, ಕೊರಿಯೋಗ್ರಾಫರ್, ನಿರ್ದೇಶಕ ಕೂಡಾ ಆಗಿರುವ ಪ್ರಭುದೇವ ಅವರ ತಂದೆ ಇವರು.

ಸುಧಾ ಅವರು ಹೇಳುವಂತೆ, ಸಿನಿಮಾವೊಂದರ ಚಿತ್ರೀಕರಣದ ವೇಳೆ ಸುಂದರಂ ಮಾಸ್ಟರ್ ಅವರು ನೃತ್ಯವನ್ನು ಹೇಳಿಕೊಡುತ್ತಿದ್ದರಂತೆ. ಆದರೆ ಡಾನ್ಸ್ ಕಲಿಯದ ಸುಧಾ ಅವರಿಗೆ ಅದು ಕಷ್ಟವಾಗಿತ್ತು. ನಾಲ್ಕೈದು ಟೇಕ್ ತೆಗೆದುಕೊಂಡರೂ ಸುಧಾ ಅವರಿಗೆ ಆ ಡಾನ್ಸ್ ಸ್ಟೆಪ್ ಹಾಕುವುದು ಸಾಧ್ಯವಾಗಿರಲಿಲ್ಲ. ಇದರಿಂದ ಸುಂದರಂ ಮಾಸ್ಟರ್ ಅವರಿಗೆ ಕೋಪ ಬಂದಿತ್ತು. ಆಗ ಅವರು ಕೋಪದಿಂದ ನೀನು ವೇ ಶ್ಯಾ ವಾ ಟಿ ಕೆಗೂ ಕೂಡಾ ಯೋಗ್ಯಳಲ್ಲ ಎನ್ನುವ ಸಣ್ಣ ಮಾತೊಂದನ್ನು ಆಡಿಯೇ ಬಿಟ್ಟರಂತೆ.

ಈ ಮಾತು ಸುಧಾ ಅವರಿಗೆ ದೊಡ್ಡ ಅವಮಾನವಾಗಿತ್ತು. ಅಂದು ಸೆಟ್ ನಲ್ಲಿ ಹಲವು ದೊಡ್ಡವರ ಮುಂದೆ ಅಂದ ಆ ಮಾತಿನಿಂದ ಸುಧಾ ಅವರ ಮನಸ್ಸಿಗೆ ಆ ಘಾ ತ ವಾಗಿತ್ತು. ಅವರು ಅಳುತ್ತಲೇ ಸೆಟ್ ನಿಂದ ಮನೆಗೆ ಬಂದು, ತಮ್ಮ‌ ತಾಯಿಗೆ ಬಂದು ನಡೆದ ವಿಚಾರ ಹೇಳಿ ತಾನು ಆ ಸಿ‌ನಿಮಾದಲ್ಲಿ ಮಾಡುವುದೇ ಇಲ್ಲ ಎನ್ನುವ ಮಾತನ್ನು ಹೇಳಿ ಬಿಟ್ಟರಂತೆ. ಆಗ ಸುಧಾ ಅವರ ತಾಯಿ ಮಗಳಿಗೆ ಸಮಾಧಾನವನ್ನು ಮಾಡಿ, ಮಗಳಿಗೆ ಧೈರ್ಯ ತುಂಬಿದರಂತೆ.

ಸುಧಾ ಅವರ ತಾಯಿ ತಮ್ಮ ಮಗಳಿಗೆ ಧೈರ್ಯವನ್ನು ಹೇಳಿದರಂತೆ. ಸಿನಿಮಾ ಬಿಡಬೇಡ, ಮಾಡು ನಿನ್ನ ಕೆಲಸದಿಂದು ನೀನು ಏನೆಂಬುದನ್ನು ತೋರಿಸು ಎಂದು ಹೇಳಿದಂತೆ. ಅಂದು ಅವರ ತಾಯಿ ಹೇಳಿದಂತೆ ಸುಧಾ ಅವರು ಸಿನಿಮಾ ರಂಗದಲ್ಲೊಂದು ನೆಲೆ ಕಂಡ ಮೇಲೆ ಸುಂದರಂ ಮಾಸ್ಟರ್ ಅವರೇ ತಮ್ಮ ‌ನಿರ್ದೇಶನದ ಸಿನಿಮಾ ವೊಂದರಲ್ಲಿ ತಾಯಿ ಪಾತ್ರ ಮಾಡುವಂತೆ ಕೇಳಲು ಸುಧಾ ಅವರ ಬಳಿ ಬಂದರಂತೆ. ಆಗ ಸುಧಾ ಅವರು ಆ ಸಿನಿಮಾ ಮಾಡಲು ಒಪ್ಪದೇ ಇದ್ದಾಗ ಅವರ ತಾಯಿಯೇ ಆತ ಪಶ್ಚಾತ್ತಾಪದಿಂದ ಬಂದಿರುವಾಗ ಕ್ಷಮಿಸಬೇಕು ಎಂದು ಹೇಳಿದರಂತೆ.

Leave a Comment