ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ, ಹಿರಿ ತೆರೆಯಲ್ಲಿ ಸಹಾ ಹೆಸರು ಮಾಡಿರುವ ನಟ ಚಂದನ್ ಕುಮಾರ್ ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಸಹಾ ಬ್ಯುಸಿಯಾಗಿರುವ ನಟ. ತೆಲುಗಿನಲ್ಲಿ ಒಂದರ ನಂತರ ಇನ್ನೊಂದು ಎನ್ನುವಂತೆ ಸೀರಿಯಲ್ ಗಳಲ್ಲಿ ನಾಯಕನಾಗಿ ನಟಿಸುತ್ತಾ ಅಲ್ಲಿನ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು, ಅಭಿಮಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ನಟ ಚಂದನ್ ಕುಮಾರ್. ಹೀಗಿದ್ದ ಚಂದನ್ ಅವರು ತಾವು ನಟಿಸುತ್ತಿರುವ ತೆಲುಗು ಸೀರಿಯಲ್ ನ ತಂತ್ರಜ್ಞರ ಜೊತೆ ಕಿರಿಕ್ ಮಾಡಿಕೊಂಡಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ನಟ ಚಂದನ್ ಕುಮಾರ್ ಅವರು ಸಾವಿತ್ರಮ್ಮಗಾರಿ ಅಬ್ಬಾಯಿ ಎನ್ನುವ ಮೆಗಾ ಸೀರಿಯಲ್ ನಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದರು. ಈಗ ಅವರು ಶ್ರೀಮತಿ ಶ್ರೀನಿವಾಸ್ ಹೆಸರಿನ ಹೊಸ ಸೀರಿಯಲ್ ನಲ್ಲಿ ನಟಿಸುತ್ತಿದ್ದು, ಈ ಸೀರಿಯಲ್ ನ ಚಿತ್ರೀಕರಣದ ವೇಳೆ ಚಂದನ್ ಕುಮಾರ್ ಅವರು ಕ್ಯಾಮೆರಾ ಅಸಿಸ್ಟೆಂಟ್ ಮೇಲೆ ಹಲ್ಲೆ ಮಾಡಿದ್ದು, ಕೆಟ್ಟ ಪದ ಬಳಿಸಿ ಬೈದಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮಾತಿಗೆ ಮಾತಿಗೆ ಬೆಳೆದು ಅದು ದೊಡ್ಡ ಜಗಳವಾಗಿ ಮಾರ್ಪಾಟಾಗಿದೆ. ಅಲ್ಲದೇ ನಟನ ಮೇಲೆ ಸೀರಿಯಲ್ ನ ತಂತ್ರಜ್ಞರು ಹ ಲ್ಲೆ ಯನ್ನು ನಡೆಸಿದ್ದಾರೆ. ಈ ವೇಳೆ ತಂತ್ರಜ್ಞರೊಬ್ಬರು ನಟನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ನಟ ಚಂದನ್ ಕುಮಾರ್ ಈ ಹಿಂದೆಯೂ ಒಮ್ಮೆ ಕ್ಯಾಮರಾ ಅಸಿಸ್ಟೆಂಟ್ ಜೊತೆಗೆ ಕಿತ್ತಾಡಿಕೊಂಡು, ಹೊಡೆದಿದ್ದರು ಎನ್ನುವುದಾಗಿ ಸುದ್ದಿಗಳಾಗಿವೆ. ಅದೇ ವಿಚಾರಕ್ಕೆ ಈಗ ಮತ್ತೊಮ್ಮೆ ಗಲಾಟೆ ನಡೆದಿದೆ. ತೆಲುಗು ಸೀರಿಯಲ್ ನ ತಂತ್ರಜ್ಞರು ನಟನನ್ನು ನೀನೇನು ದೊಡ್ಡ ಸ್ಟಾರ್ ಅಂತ ಅನ್ಕೊಂಡಿದ್ದೀಯಾ? ಅಸಲಿಗೆ ನಿನ್ನ ಬ್ಯಾಕ್ ಗ್ರೌಂಡ್ ಏನು? ಎಂದೆಲ್ಲಾ ಜೋರು ಜೋರಾಗಿ ಮಾತನಾಡಿರುವುದು ಸಹಾ ವೀಡಿಯೋದಲ್ಲಿ ಕೇಳಿ ಬಂದಿದೆ. ಈ ಘಟನೆ ಜುಲೈ ತಿಂಗಳ ಕೊನೆಯಲ್ಲಿ ನಡೆದಿದ್ದು ವೀಡಿಯೋ ಈಗ ಹೊರ ಬಂದಿದೆ.
ಪ್ಯಾಟೆ ಮಂದಿ ಕಾಡಿಗೆ ಬಂದ್ರು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಯವಾದ ಚಂದನ್ ಕುಮಾರ್ ಅವರು ಅನಂತರ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರು. ಇದಾದ ಮೇಲೆ ಅವರು ಬಿಗ್ ಬಾಸ್ ನಲ್ಲಿ ಸದ್ದು ಮಾಡಿದ್ದರು. ಸರ್ವಮಂಗಳ ಮಾಂಗಲ್ಯೇ ಸೀರಿಯಲ್ ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ನಾಯಕನಾಗಿರುವ ಮರಳಿ ಮನಸಾಗಿದೆ ಸೀರಿಯಲ್ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.