ಪ್ರಸ್ತುತ ದಕ್ಷಿಣ ಸಿನಿಮಾ ರಂಗದಲ್ಲಿ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ಹೆಸರೆಂದರೆ ಅದು ನಟಿ ಸಮಂತಾ ಹೆಸರು ಎಂದರೆ ಅಚ್ಚರಿ ಪಡುವ ವಿಷಯವೇನಲ್ಲ. ನಾಗಚೈತನ್ಯ ಜೊತೆಗೆ ವಿಚ್ಚೇದನದ ನಂತರವಂತೂ ಸಮಂತಾ ಸಿಕ್ಕಾಪಟ್ಟೆ ಬ್ಯುಸಿಯಾಗಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸೋಶಿಯಲ್ ಮೀಡಿಯಾಗಳಲ್ಲಿ ಸಮಂತಾ ಮಾಡುವ ಪೋಸ್ಟ್ ಗಳು ಅಭಿಮಾನಿಗಳಿಗೆ ಖುಷಿಯನ್ನು ನೀಡುವ ಜೊತೆಗೆ ಸುದ್ದಿಗಳಲ್ಲೂ ಸಹಾ ಹರಿದಾಡಿ, ದೊಡ್ಡ ಮಟ್ಟದಲ್ಲೇ ಕ್ರೇಜ್ ಹುಟ್ಟು ಹಾಕುವುದನ್ನು ಸಹಾ ಸಾಮಾನ್ಯವಾಗಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದರಲ್ಲೂ ಪುಷ್ಪ ಸಿನಿಮಾದ ಐಟಂ ಹಾಡಿನ ಗೆಲುವು, ಸೃಷ್ಟಿಸಿದ ದಾಖಲೆ ಸಮಂತಾ ಜನಪ್ರಿಯತೆಯನ್ನು ಇನ್ನೊಂದು ಎತ್ತರಕ್ಕೆ ಏರಿಸಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟಿ ಸಮಂತಾ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದು ಮಾತ್ರವೇ ಅಲ್ಲದೇ ಕೆಲವು ಕೊಟೇಶನ್ ಗಳನ್ನು ಹಾಕಿ ಗಮನ ಸೆಳೆಯುತ್ತಾರೆ.
ಬ್ಯುಸಿ ಜೀವನದ ನಡುವೆ ಆಗಾಗ ಬಿಡುವು ಮಾಡಿಕೊಂಡು ಸಮಂತಾ ವಿದೇಶ ಪ್ರವಾಸ, ಸುಂದರವಾದ ತಾಣಗಳಿಗೆ ಭೇಟಿ ನೀಡುವುದು ಹೀಗೆ ಸಮಯವನ್ನು ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಂತಾ ಪ್ರಸ್ತುತ ತನ್ನ ಬ್ಯುಸಿ ಲೈಫ್ ನ ನಡುವೆ ಬಿಡುವು ಮಾಡಿಕೊಂಡು ಕೇರಳದ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ಹಾಲಿಡೇಸ್ ಎಂಜಾಯ್ ಮಾಡುತ್ತಾ ತೆಗೆದುಕೊಂಡ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡ ಸಮಂತಾ ಅದರ ಜೊತೆಗೆ ಆಸಕ್ತಿಕರವಾದ ಸಾಲನ್ನು ಬರೆದುಕೊಂಡಿದ್ದಾರೆ.
ಸಮಂತಾ ತಮ್ಮ ಫೋಟೋ ಶೇರ್ ಮಾಡಿಕೊಂಡು, ಕ್ಯಾಪ್ಷನ್ ನಲ್ಲಿ, “ನೀನಿಲ್ಲದೆ ಜೀವನವೆಂದು ಕರೆಯುವ ಇಲ್ಲಿ ಈ ಎಲ್ಲವನ್ನು ಮಾಡುತ್ತಿದ್ದೇನೆ ಎಂದು ಊಹಿಸಿಕೊಳ್ಳಲಾರೆ” ಎಂದು ಬರೆದು ಹ್ಯಾಷ್ ಟ್ಯಾಗ್ ಹಾಕಿ “ಬೆಸ್ಟ್ ಫ್ರೆಂಡ್” ಎಂದು ಬರೆದುಕೊಂಡಿದ್ದಾರೆ. ಸಮಂತಾ ಫೋಟೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅದು ವೈರಲ್ ಆಗಿದೆ. ಅಭಿಮಾನಿಗಳು ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ನೀನಿಲ್ಲದೇ ಎನ್ನುವುದು ಯಾರು ಎನ್ನುವ ಪ್ರಶ್ನೆಯನ್ನು ಸಹಾ ಕೆಲವರು ಮುಂದಿಡುತ್ತಾ, ನಿಮ್ಮ ಬೆಸ್ಟ್ ಫ್ರೆಂಡ್ ಯಾರು ? ಎಂದೂ ಪ್ರಶ್ನೆ ಮಾಡಿದ್ದಾರೆ.