ನೀತಾ ಅಂಬಾನಿಯ 242 ಕೋಟಿಯ ಈ ವಿಮಾನ ಹಾರುವ ಅರಮನೆ ಎಂದ್ರೆ ತಪ್ಪಲ್ಲ: ಅಬ್ಬಾ!!

Entertainment Featured-Articles News
67 Views

ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವುದು ಹಾಗೂ ಅವರ ಶ್ರೀಮಂತಿಕೆಯ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಂಬಾನಿ ಪರಿವಾರಕ್ಕೆ ಇಡೀ ಜಗತ್ತಿನಲ್ಲಿ ಒಂದು ವಿಶೇಷವಾದ ಪರಿಚಯ ಇದೆ. ಅಲ್ಲದೇ ಅವರ ಕುಟುಂಬದ ಸದಸ್ಯರು ಸಹಾ ಒಂದಲ್ಲಾ ಒಂದು ವಿಷಯವಾಗಿ ಮಾದ್ಯಮದ ಸುದ್ದಿಗಳಲ್ಲಿ ಇರುವುದುಂಟು, ಅದರಲ್ಲೂ ವಿಶೇಷವಾಗಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಶಾರಾಮೀ ಜೀವನ ಶೈಲಿಯಿಂದಾಗಿಯೇ ಸಾಕಷ್ಟು ಚರ್ಚೆಯಲ್ಲಿ ಇರುತ್ತಾರೆ.

ನೀತಾ ಅಂಬಾನಿ ಅವರು ಬಾಲಿವುಡ್ ನ ಯಾವುದೇ ಸ್ಟಾರ್ ನಟಿಯರಿಗೇನೂ ಕಡಿಮೆಯೇನಿಲ್ಲ ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಪತ್ನಿಯಾಗಿ, ಏಷ್ಯಾದ ಪ್ರಮುಖ ಉದ್ಯಮಿ ಮಹಿಳೆಯಾಗಿಯೂ ನೀತಾ ಅಂಬಾನಿ ಹೆಸರನ್ನು ಪಡೆದುಕೊಂಡಿದ್ದಾರೆ. ನೀತಾ ಅವರು ಉಪಯೋಗಿಸುವ ಪ್ರತಿಯೊಂದು ವಸ್ತುವೂ ಸಹಾ ದುಬಾರಿ ಹಾಗೂ ಐಶಾರಾಮೀ ತನಕ್ಕೆ ಒಂದು ಉದಾಹರಣೆ ಎನಿಸಿದೆ.

ನೀತಾ ಅಂಬಾನಿ ಅವರು ಪ್ರಯಾಣಿಸುವ ವಿಮಾನ ಅವರ ಪತಿ ಮುಖೇಶ್ ಅಂಬಾನಿ ನೀತಾ ಅವರ 44 ನೇ ಜನ್ಮದಿನಕ್ಕೆ ನೀಡಿದ ವಿಶೇಷ ಉಡುಗೊರೆ ಆಗಿದ್ದು, ಇದೊಂದು ಬಹಳ ವಿಶೇಷವಾದ ವಿಮಾನವಾಗಿದೆ. ವರದಿಗಳ ಪ್ರಕಾರ ನೀತಾ ಅವರ ಈ ವಿಶೇಷವಾದ ಏರ್ ಬಸ್ 319 ಕಾರ್ಪೊರೇಟ್ ನ ಬೆಲೆ ಬರೋಬ್ಬರಿ 242 ಕೋಟಿ ರೂಪಾಯಿಗಳ ಮೌಲ್ಯದ್ದು ಎಂದರೆ ಆಶ್ಚರ್ಯ ಎನಿಸಬಹುದು ಆದರೆ ಇದೇ ನಿಜ.

ಮುಖೇಶ್ ಅಂಬಾನಿ ಈ ವಿಮಾನದಲ್ಲಿ ಪತ್ನಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಸೌಲಭ್ಯಗಳು ಇರುವಂತೆ ಎಚ್ಚರವನ್ನು ವಹಿಸಿದ್ದಾರೆ. ಈ ಫ್ಲೈಟ್ ನಲ್ಲಿ ಪಾರ್ಟಿ ಏರಿಯಾ, ಲೈವ್ ಬಾರ್, ಜಕೂಜಿ, ಶವರ್ ಹೀಗೆ ಎಲ್ಲಾ ಸೌಲಭ್ಯಗಳು ಸಹಾ ಇವೆ. ಇದಲ್ಲದೇ ಮೀಟಿಂಗ್ ಹಾಲ್ ಇದ್ದು, ಅಲ್ಲೇ ಅವರಿಗೆ ತಿಂಡಿ, ಊಟದ ವ್ಯವಸ್ಥೆ ಕೂಡಾ ಮಾಡುವ ಅವಕಾಶ ಇದ್ದು, ಅತಿಥಿಗಳ ಜೊತೆ ಅಲ್ಲೇ ಊಟ ಮಾಡುವ ಸೌಲಭ್ಯ ಇದೆ.

ಇನ್ನು ವಿಮಾನದಲ್ಲಿ ಆಧುನಿಕ ಮ್ಯೂಸಿಕ್ ಸಿಸ್ಟಂ, ಗೇಮಿಂಗ್ ಏರಿಯಾ, ಸ್ಯಾಟಲೈಟ್ ಟಿವಿ, ವೈರ್ ಲೆಸ್ ಕಮ್ಯುನಿಕೇಷನ್ ಸಿಸ್ಟಂ ಸಹಾ ಅಳವಡಿಸಲಾಗಿದೆ‌. ಅಲ್ಲದೇ ಮಲಗಿಕೊಳ್ಳಲು ಅನುಕೂಲವಾಗುವಂತೆ ಒಂದು ಅಚ್ಚುಕಟ್ಟಾದ ಬೆಡ್ ರೂಂ ಕೂಡಾ ಈ ವಿಮಾನದಲ್ಲಿ ಇದೆ. ಒಂದರ್ಥದಲ್ಲಿ ನೀತಾ ಅಂಬಾನಿ ಅವರ ಈ ಫ್ಲೈಟ್ ಅನ್ನು ನಾವು ಒಂದು ಹಾರುವ ಮಿನಿ ಅರಮನೆ ಎಂದರೂ ಸಹಾ ತಪ್ಪಾಗಲಾರದು.

Leave a Reply

Your email address will not be published. Required fields are marked *