ನಿಲ್ಸಿ ನಿಮ್ಮ ಗೋಳು, ನಾವು ಸೀರಿಯಲ್ ನೋಡಲ್ಲ: ಕನ್ನಡತಿ ಸೀರಿಯಲ್ ಬಗ್ಗೆ ಏಕೆ ಪ್ರೇಕ್ಷಕರ ಸಿಟ್ಟು??

0 2

ಧಾರಾವಾಹಿಗಳ ವಿಷಯ ಬಂದಾಗ ಸಹಜವಾಗಿಯೇ ಜನರು ಅವುಗಳೊಡನೆ ಒಂದು ರೀತಿಯಲ್ಲಿ ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ. ನಿತ್ಯ ತಮ್ಮ ಮನೆಯಂಗಳದಲ್ಲಿ ಮನರಂಜನೆ ನೀಡುವ ಪಾತ್ರಗಳು ತಮ್ಮ ಕುಟುಂಬದವರೇ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರು ಸೀರಿಯಲ್ ಗಳೊಂದಿಗೆ ಬೆಸೆದುಕೊಂಡಿರುತ್ತಾರೆ. ಆದ್ದರಿಂದಲೇ ಪ್ರೇಕ್ಷಕರಿಗೆ ಕೆಲವೊಮ್ಮೆ ಕೆಲವು ಸೀರಿಯಲ್ ಗಳಲ್ಲಿ ಉಂಟಾಗುವ ಬೆಳವಣಿಗೆಗಳು ಅಥವಾ ತಿರುವುಗಳು ಅವರ ತಾಳ್ಮೆ ಯನ್ನು ಪ್ರಶ್ನೆ ಮಾಡುತ್ತವೆ. ಅವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಕೋಪವನ್ನು ವ್ಯಕ್ತಪಡಿಸುವುದೂ ಉಂಟು.

ಕನ್ನಡ ಕಿರುತೆರೆಯಲ್ಲಿ ಹಲವಾರು ಸೀರಿಯಲ್ ಗಳು ಟಿ ಆರ್ ಪಿ ಯಲ್ಲಿ ಉತ್ತಮ ಸ್ಥಾನ ಪಡೆದಿವೆ. ಆದರೆ ಇದರ ಹೊರತಾಗಿಯೂ ಕೆಲವು ಸೀರಿಯಲ್ ಗಳು ಜನರ ಮನಸ್ಸನ್ನು ಗೆದ್ದು ಯಶಸ್ಸು ಪಡೆದಿವೆ. ಅಂತಹ ಸೀರಿಯಲ್ ಗಳಲ್ಲಿ ಒಂದು ಕನ್ನಡತಿ. ಒಂದು ವಿಭಿನ್ನ ಕಥೆ ಮತ್ತು ಕಥಾನಕದಿಂದ ಅಪಾರ ಜನರ ಮನಸ್ಸನ್ನು ಗೆದ್ದಿದೆ ಕನ್ನಡತಿ ಸೀರಿಯಲ್. ಈ ಸೀರಿಯಲ್ ನೋಡುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಆಲ್ಲದೇ ಕನ್ನಡತಿ ಸೀರಿಯಲ್ ಎಂದರೆ ಜನರಿಗೆ ವಿಶೇಷ ಅಭಿಮಾನ ಸಹಾ ಇತ್ತು.

ಈಗ ಸೀರಿಯಲ್ ನಲ್ಲಿನ ಹೊಸ ಟ್ವಿಸ್ಟ್ ನೋಡಿ ಪ್ರೇಕ್ಷಕರು ತಾಳ್ಮೆ ಕಳೆದುಕೊಂಡಿದ್ದಾರೆ. ಕನ್ನಡತಿ ಸೀರಿಯಲ್ ನಲ್ಲಿ ಹರ್ಷ ಮತ್ತು ಭವಿಯ ಮದುವೆಯನ್ನು ನೋಡಲು ಪ್ರೇಕ್ಷಕರು ಬಹಳ ಖುಷಿಯಿಂದ ಕಾಯುತ್ತಿದ್ದರು. ಆ ಘಳಿಗೆ ಬಂತು ಎನ್ನುವಾಗಲೇ ನಡೆದಿರುವ ಹೈ ಡ್ರಾಮ ಕಂಡು ಪ್ರೇಕ್ಷಕರು ಸಿಟ್ಟಾಗಿದ್ದಾರೆ. ಹೌದು, ಹರ್ಷ ಮತ್ತು ಭುವಿ ಮದುವೆಯನ್ನು ತಡೆಯಲು ವರೂಧಿನಿ ಕೈ ಕತ್ತರಿಸಿಕೊಂಡು ಮಾಡಿದ ಹೈ ಡ್ರಾಮಾ ನೋಡಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಬೇಸರವಾಗಿದೆ.

https://www.instagram.com/p/CfJg_SbPV0W/?igshid=YmMyMTA2M2Y=

ವರೂಧಿನಿ ಕೈ ಕತ್ತರಿಸಿಕೊಂಡಾಗ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಧುವಾದ ಭುವಿಯೇ ಹೊರಟಿದ್ದು ನೋಡಿ ಪ್ರೇಕ್ಷಕರ ತಾಳ್ಮೆಯ ಕಟ್ಟೆ ಒಡೆದಿದೆ.‌ ಮದುವೆ ಮನೆಯಲ್ಲಿ ಯಾರಾದರೂ ವರೂಧಿನಿ ಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ ಬಹುದಿತ್ತು. ಭುವಿ ಹೋಗುವ ಅಗತ್ಯ ಏನಿತ್ತು ? ಎಂದಿರುವ ಪ್ರೇಕ್ಷಕರು ಇನ್ನಾದರೂ ನಿಮ್ಮ ಗೋಳು ನಿಲ್ಲಿಸಿ, ನಮ್ಮ ತಲೆ ಸಿಡಿಯುತ್ತಿದೆ, ಹರ್ಷ ಭುವಿ ಮದುವೆಗೆ ಕಾಯುತ್ತಿದ್ದ ನಮಗೆ ಇದೆಂತಾ ಟಾರ್ಚರ್ ಎಂದು ಅಸಮಾಧಾನವನ್ನು ಹೊರ ಹಾಕಿದ್ದಾರೆ.

Leave A Reply

Your email address will not be published.