ನಿರ್ಮಾಪಕರ ಮನೆ ಮಕ್ಕಳ ಸಿನಿಮಾ ಅಂದ್ರೆ ನಟಿಯರಿಗೆ ಇದೆಲ್ಲಾ ಓಕೆ!!ನಟ ಸಾರ್ವಭೌಮ ಸಿನಿಮಾ ನಟಿ ಟ್ರೋಲ್
ದಕ್ಷಿಣ ಸಿನಿಮಾ ರಂಗದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಪಡೆದಿದ್ದಾರೆ ನಟಿ ಅನುಪಮಾ ಪರಮೇಶ್ವರನ್. ಮೂಲತಃ ಮಲೆಯಾಳಿ ಅಥವಾ ಕೇರಳದವರಾದ ಅನುಪಮಾ ಅವರಿಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ ನಟಿ ಅನುಪಮಾ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್‍ಕುಮಾರ್ ಅವರ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸುವ ಮೂಲಕ ಅನುಪಮಾ ಕನ್ನಡ ಸಿನಿ ಪ್ರೇಮಿಗಳಿಗೂ ಸಹಾ ಚಿರಪರಿಚಿತ ಆಗಿದ್ದಾರೆ. ಈ ನಟಿಯ ದೊಡ್ಡ ಅಭಿಮಾನಿ ಬಳಗವೇ ಇದೆ.
ತೆಲುಗಿನಲ್ಲಿ ನಟಿ ಅನುಪಮಾ ಪರಮೇಶ್ವರನ್ ಅವರು ಬಹಳ ಬುದ್ಧಿವಂತಿಕೆಯಿಂದ ಪಾತ್ರಗಳನ್ನು ಆರಿಸಿಕೊಂಡು ಸಿನಿಮಾಗಳನ್ನು ಮಾಡಿರುವ ನಟಿ, ಆದ್ದರಿಂದಲೇ ಸಿನಿಮಾಗಳ ಸಂಖ್ಯೆ ಕಡಿಮೆಯಿದ್ದರೂ ಜನಪ್ರಿಯತೆ ಮಾತ್ರ ದೊಡ್ಡ ಮಟ್ಟದಲ್ಲಿದೆ. ಈಗ ಅನುಪಮಾ ಅವರು ನಾಯಕಿಯಾಗಿರುವ ತೆಲುಗು ಸಿನಿಮಾ ರೌಡಿ ಬಾಯ್ಸ್ ಸಿನಿಮಾ ತೆರೆಗೆ ಬರಲು ಸಜ್ಜಾಗಿರುವ ವೇಳೆಯಲ್ಲೇ ನಟಿಯು ಭರ್ಜರಿಯಾಗಿ ಟ್ರೋಲ್ ಆಗುವ ಮೂಲಕ ಸುದ್ದಿಯಾಗಿದ್ದಾರೆ. ನಟಿ ಟ್ರೋಲ್ ಆಗಿರುವುದು ಕೂಡಾ ಈ ಹೊಸ ಸಿನಿಮಾದಿಂದಲೇ ಎನ್ನುವುದು ನಿಜ.
ರೌಡಿ ಬಾಯ್ಸ್ ಸಿನಿಮಾ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿರುವ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ದಿಲ್ ರಾಜು ಅವರ ಸಹೋದರನ ಪುತ್ರ ಆಶಿಶ್ ರೆಡ್ಡಿ ನಾಯಕನಾಗಿ ಸಿನಿ ರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಆಶಿಶ್ ರೆಡ್ಡಿ ಗೆ ನಾಯಕಿಯಾಗಿ ಅನುಪಮಾ ತೆರೆ ಹಂಚಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿ ಅನುಪಮಾ ಲಿಪ್ ಲಾಕ್ ಸೀನ್ ನಲ್ಲಿ ನಟಿಸಿದ್ದಾರೆ. ನಾಯಕನ ಜೊತೆಗೆ ನಟಿ ಬೋಲ್ಡಾಗಿ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಈ ವಿಷಯ ಈಗ ಟ್ರೋಲಾಗಿದೆ.
ನಟಿ ಅನುಪಮಾ ಪರಮೇಶ್ವರನ್ ಇದೇ ಮೊದಲ ಬಾರಿಗೆ ಇಂತಹ ದೃಶ್ಯದಲ್ಲಿ ನಟಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸ್ಟಾರ್ ನಿರ್ಮಾಪಕರ ಮನೆ ಮಗನ ಸಿನಿಮಾ ಎನ್ನುವ ಕಾರಣಕ್ಕೆ ನಟಿಯರು ಲಿಪ್ ಕಿಪ್ ಮಾಡೋದಿಕ್ಕೆ ಕೂಡಾ ಸಿದ್ಧ ಆಗಿರುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಟ್ರೇಲರ್ ನಲ್ಲಿ ಇರುವ ಒಂದು ಝಲಕ್ ಇದಾಗಿದ್ದು ಸಿನಿಮಾದಲ್ಲಿ ಇಂತಹ ಐದು ಬಾರಿ ಲಿಪ್ ಲಾಕ್ ಸನ್ನಿವೇಶಗಳಿವೆ ಎನ್ನಲಾಗಿದೆ. ಆಗ ನೆಟ್ಟಿಗರು ಏನು ಟ್ರೋಲ್ ಮಾಡ್ತಾರೋ ಸಿನಿಮಾ ಬಿಡುಗಡೆ ನಂತರ ತಿಳಿಯುತ್ತದೆ..