ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ನ ಬಹಳಷ್ಟು ಜನ ಸೆಲೆಬ್ರಿಟಿಗಳು ದುಬಾರಿ ಬೆಲೆಯ, ಐಷಾರಾಮಿ ಕಾರುಗಳನ್ನು ಕೊಳ್ಳುವುದರಲ್ಲಿ ಬ್ಯಸಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿ ಖ್ಯಾತಿಯ ನಟಿಯಾಗಿರುವ, ಈಗಾಗಲೇ ಸ್ಯಾಂಡಲ್ವುಡ್ ಗೂ ಎಂಟ್ರಿ ನೀಡಿರುವ ನಟಿ ಮೇಘಾ ಶೆಟ್ಟಿಯವರು ಎರಡು ಕಾರುಗಳನ್ನು ಕೊಳ್ಳುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಅದಾದ ಬೆನ್ನಲ್ಲೇ ಬಿಗ್ ಬಾಸ್ ಸೀಸನ್ ಏಳರ ವಿನ್ನರ್ ಆಗಿದ್ದ ಶೈನ್ ಶೆಟ್ಟಿ ಅವರು ದುಬಾರಿ ಬೆಲೆಯ ಐಷಾರಾಮಿ ಕಾರನ್ನು ಕೊಂಡುಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡ ಮೇಲೆ ಈ ವಿಷಯ ಕೂಡಾ ಸುದ್ದಿಯಾಗಿತ್ತು. ಮಾಧ್ಯಮಗಳಲ್ಲಿ ಮೇಘಾ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಅವರು ಕಾರು ಕೊಂಡ ವಿಶೇಷ ಸಂದರ್ಭದಲ್ಲಿ ಅವರ ಅಭಿಮಾನಿಗಳು ತಮ್ಮ ಅಭಿಮಾನ ಸೆಲೆಬ್ರಿಟಿಗಳಿಗೆ ಶುಭವನ್ನು ಹಾರೈಸಿದ್ದರು.
ಇದೀಗ ಐಷಾರಾಮಿ ಕಾರುಗಳನ್ನು ಕೊಳ್ಳುತ್ತಿರುವ ಸೆಲೆಬ್ರಿಟಿಗಳ ಸಾಲಿಗೆ ಸ್ಯಾಂಡಲ್ವುಡ್ ನ ಸಿನಿಮಾಗಳ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಕೂಡಾ ಸೇರ್ಪಡೆಯಾಗಿದ್ದಾರೆ. ಹೌದು, ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ದುಬಾರಿ ಬೆಲೆಯ ಕಾರನ್ನು ಖರೀದಿ ಮಾಡಿದ್ದು, ಇದೇ ಸಂತೋಷದಲ್ಲಿ ಅವರು ಹೊಸ ಕಾರಿನ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಂತೋಷ್ ಆನಂದ್ರಾಮ್ ಅವರು ಬಿಎಂಡಬ್ಲ್ಯೂ 520 ಡಿ ಕಾರನ್ನು ಖರೀದಿ ಮಾಡಿದ್ದಾರೆ.
ಸಂತೋಷ್ ಆನಂದ್ರಾಮ್ ಅವರು ತಮ್ಮ ಇಡೀ ಕುಟುಂಬದ ಜೊತೆಗೆ ಬೆಂಗಳೂರು ನಗರದ ವೈಟ್ಫೀಲ್ಡ್ ನಲ್ಲಿರುವ ಶೋ ರೂಂನಲ್ಲಿ ಕಾರನ್ನು ಖರೀದಿ ಮಾಡಿ ಸಂತಸದ ಕ್ಷಣಗಳನ್ನು ಫೋಟೋಗಳಲ್ಲಿ ಸೆರೆಹಿಡಿದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸೇವೆ ಮಾಡಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿಕೊಂಡ ಅವರು ಕ್ಯಾಪ್ಷನ್ ನಲ್ಲಿ “ಬಿ ಎಂ ಡಬ್ಲ್ಯೂ 520 ಡಿಗೆ ಮನೆಗೆ ಸ್ವಾಗತ” ಎಂದು ಬರೆದುಕೊಂಡಿದ್ದಾರೆ. ಅವರ ಅಭಿಮಾನಿಗಳು ಶುಭಕೋರಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಸೆಲೆಬ್ರಿಟಿಗಳು ಒಬ್ಬರ ನಂತರ ಮತ್ತೊಬ್ಬರು ದುಬಾರಿ ಕಾರು ಖರೀದಿ ಮಾಡುತ್ತಿರುವುದು ಕಾರುಗಳ ಓತ್ಸವ ನಡೆಯುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿದೆ.