HomeEntertainment"ನಿರುದ್ಯೋಗಿ ಆಗಿದ್ದ ನನಗೆ ನೀನು"- ಅಪ್ಪುನ ಸ್ಮರಿಸಿ ಭಾವುಕ ಸಾಲುಗಳನ್ನು ಬರೆದುಕೊಂಡ ರಾಘಣ್ಣ

“ನಿರುದ್ಯೋಗಿ ಆಗಿದ್ದ ನನಗೆ ನೀನು”- ಅಪ್ಪುನ ಸ್ಮರಿಸಿ ಭಾವುಕ ಸಾಲುಗಳನ್ನು ಬರೆದುಕೊಂಡ ರಾಘಣ್ಣ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ 12 ದಿನಗಳಾಗಿದೆ. ಆದರೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಮಾತ್ರ ಇನ್ನೂ ಮೂಡಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಅಪ್ಪು ಅವರ ಸ್ಮರಣೆಗಳೇ ತುಂಬಿ ಹೋಗಿದೆ. ದಿನಗಳು‌ ಕಳೆದಂತೆ ಅಭಿಮಾನಿಗಳು ಸಹಾ ಭಾವುಕರಾಗುತ್ತಿದ್ದಾರೆ. ಪ್ರತಿದಿನವೂ ಸಾವಿರಾರು ಅಭಿಮಾನಿಗಳು ಅಪ್ಪು ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವರ ಸಮಾಧಿಯ ದರ್ಶನ ಪಡೆದು ನಮನವನ್ನು ಸಲ್ಲಿಸುತ್ತಿದ್ದಾರೆ. ಪುನೀತ್ ಅವರ ಅಗಲಿಕೆಯ ನೋವು ಅವರ ಕುಟುಂಬ ವರ್ಗದಲ್ಲಿ ಸಹಾ ಕಾಡಿದೆ.

ನಿನ್ನೆ ಅವರ ಹನ್ನೊಂದನೇ ದಿನದ ಕಾರ್ಯದ ವೇಳೆ ಕೂಡಾ ಶಿವರಾಜ್ ಕುಮಾರ್ ಅವರು ಭಾವುಕರಾಗಿದ್ದರು. ಅಪ್ಪು ಹನ್ನೊಂದನೆಯ ಕಾರ್ಯ ಮಾಡುತ್ತೇವೆ ಎಂದು ಊಹಿಸಿಕೊಳ್ಳುವುದು ಕೂಡಾ ಕಷ್ಟ ಎಂದಿದ್ದರು. ಇನ್ನು ಪುನೀತ್ ಅವರ ಮತ್ತೊಬ್ಬ ಸಹೋದರ ರಾಘವೇಂದ್ರ ರಾಜ್‍ಕುಮಾರ್ ಅವರು ಸಹಾ ತಮ್ಮನ ಅಗಲಿಕೆಯಿಂದ ನೊಂದಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅಪ್ಪು ಅವರ ವಿಶೇಷ ಫೋಟೋಗಳನ್ನು ಹಾಕುತ್ತಾ ಅವರನ್ನು ಸ್ಮರಿಸುತ್ತಲೇ ಇದ್ದಾರೆ.

ಅಪರೂಪದ ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮನ ಜೊತೆಗೆ ಕಳೆ ದಂತಹ ದಿನಗಳನ್ನು, ಆ ಫೋಟೋಗಳ ವಿಶೇಷತೆಯನ್ನು ಸಹಾ ಬರೆದುಕೊಂಡು ರಾಘಣ್ಣ ಪುನೀತ್ ಅವರ ಹಿಂದೆಂದೂ ನೋಡಿರದ ಫೋಟೋಗಳನ್ನು ಅಭಿಮಾನಿಗಳ ಮುಂದೆ ಇಡುತ್ತಾ, ಅಗಲಿಕೆಯ ನೋವಿನ ನಡುವೆಯೇ ತಮ್ಮ ಸ್ಮರಣೆ ಗಳಲ್ಲಿ ತಮ್ಮನ ಜೊತೆ ಕಳೆದ ಮಧುರ ಕ್ಷಣಗಳ ನೆನಪನ್ನು ಹಸಿರಾಗುಡುವ ಒಂದು ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಇವೆಲ್ಲವುಗಳ ನಡುವೆಯೇ ಅವರು ಇಂದು ಒಂದು ಪೋಸ್ಟ್ ಮಾಡಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಹೌದು, ರಾಘವೇಂದ್ರ ರಾಜ್‍ಕುಮಾರ್ ಅವರು ಪುನೀತ್ ಅವರು ಡಾ.ರಾಜ್‍ಕುಮಾರ್ ಜೊತೆಗಿರುವ ಅಪರೂಪದ ಫೋಟೋಗಳನ್ನು ಹಂಚಿಕೊಂಡು, ”ಅಪ್ಪು ಮಗನೇ ನಿರುದ್ಯೋಗಿ ಆಗಿದ್ದ ನನಗೆ ನೀನು ಸಮಾಜ ಸೇವೆ ಮಾಡುವ ಕೆಲಸವನ್ನು ಕೊಟ್ಟಿದ್ದೀಯಾ. ಯಾರಿಗೂ ಹೇಳದೆ ಕಿವುಡ, ಮೂಗನಾಗಿ ಮತ್ತು ಕುರುಡನಾಗಿ ಸಮಾಜ ಸೇವೆ ಮಾಡುವಾಗ ಸದಾ ನಿನ್ನ ಆಲೋಚನೆಗಳೊಂದಿಗೆ ಬಾಳುವ ಆ ಪ್ರೀತಿಯ ಶಕ್ತಿಯನ್ನು ನನಗೆ ಕೊಡು” ಎಂದು ರಾಫಣ್ಣ ಬರೆದುಕೊಂಡು ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

- Advertisment -