ನಿಮ್ಮ IQ ಮಟ್ಟ ಎಷ್ಟಿದೆ? 20 ಸೆಕೆಂಡ್ ಗಳಲ್ಲಿ ಒಟ್ಟು ಎಷ್ಟು ಡಾಲ್ಫಿನ್ ಗಳಿವೆ ಹೇಳಿ?? ಹೇಳಿದರೆ….

Entertainment Featured-Articles News

ಮೆದುಳನ್ನು ಚುರುಕುಗೊಳಿಸಲು ಪಜಲ್ ಗಳು ಮತ್ತು ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳನ್ನು ಆಗಾಗ ಪ್ರಯತ್ನ ಮಾಡುತ್ತಲೇ ಇರಬೇಕು. ಕಣ್ಣಿಗೆ ಕಾಣುವ ಚಿತ್ರದಲ್ಲಿ ನಮ್ಮ ಕಣ್ಣಿಗೆ ಕಾಣದೇ ಅಡಗಿರುವ ಉತ್ತರವನ್ನು ಕೆಲವೇ ಸೆಕೆಂಡ್‌ಗಳಲ್ಲಿ ಗ್ರಹಿಸಬೇಕು. ಏಕೆಂದರೆ ಆ ಚಿತ್ರಗಳಲ್ಲಿ ಕಂಡದ್ದೆಲ್ಲಾ ಸತ್ಯವಲ್ಲ ಎಂಬುದನ್ನು ಅರಿಯಲು ಇಂತಹ ಪರೀಕ್ಷೆಗಳು ಬಹಳ ಉಪಯುಕ್ತವಾಗಿದೆ. ವಾಸ್ತವವಾಗಿ ಈ ಟ್ರಿಕ್ ಅಷ್ಟೊಂದು ಸುಲಭವಲ್ಲ. ಏಕೆಂದರೆ ಅವು ನಮ್ಮ ಮುಂದೆ ಭ್ರಮೆಯನ್ನು ಸೃಷ್ಟಿಸುತ್ತವೆ, ಇಲ್ಲದ್ದನ್ನು ಇವೆ ಎಂದು ನಂಬುವಂತೆ ನಮ್ಮ ಮೆದುಳಿಗೆ ಮೋಸ ಮಾಡುತ್ತಾರೆ.

ಆದ ಕಾರಣ ನೀವು ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳನ್ನು ಅಥವಾ ಸವಾಲುಗಳನ್ನು ಎದುರಿಸುವ ಮೂಲಕ ನಿಮ್ಮ ದೃಷ್ಟಿಯನ್ನು ಸಹಾ ಪರೀಕ್ಷಿಸಬಹುದು. ಅಂದರೆ ಇಲ್ಲಿ ನಿಮ್ಮ ಬುದ್ಧಿ ಮತ್ತು ದೃಷ್ಟಿ ಎರಡಕ್ಕೂ ಸಹಾ ಒಂದು ಸವಾಲು ಎದುರಾಗುತ್ತದೆ. ಈಗ ಇಲ್ಲಿ ನೀಡಿರುವ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯು ಅಂತಹುದೇ ಒಂದು ಸವಾಲನ್ನು ಹೊತ್ತು ತಂದಿದೆ. ಈ ಚಿತ್ರವು ನಿಮ್ಮ ದೃಷ್ಟಿಯನ್ನು ಮಾತ್ರವಲ್ಲದೇ ನಿಮ್ಮ ಐಕ್ಯೂ ಮಟ್ಟವನ್ನೂ ಪರೀಕ್ಷಿಸುತ್ತದೆ ಎನ್ನುವುದು ವಿಶೇಷ.

ಈ ಚಿತ್ರದಲ್ಲಿ ಡಾಲ್ಫಿನ್‌ಗಳ ಸಾಲು ನಮಗೆ ಕಾಣಿಸುತ್ತಿದೆ. ಆದರೆ ಎಷ್ಟು ಡಾಲ್ಫಿನ್‌ಗಳಿವೆ ಎಂದು ಕೇಳಿದ ಕೂಡಲೇ ತಟ್ಟನೆ 9 ಎಂದು ಉತ್ತರವನ್ನು ನೀಡಿದರೆ ನೀವು ತಪ್ಪು ಮಾಡಿದಂತೆಯೇ ಸರಿ. ಏಕೆಂದರೆ ನಿಮಗೆ ಕಂಡಿದ್ದು ನಿಜವಲ್ಲ ಎಂದು ಈಗಾಗಲೇ ನಾವು ಹೇಳಿದ್ದೇವೆ! ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ನಂತರ ಅನೇಕ ಮಂದಿ ನೆಟ್ಟಿಗರು ಸರಿಯಾದ ಉತ್ತರವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ನೀವೂ ಸಹಾ ಪ್ರಯತ್ನ ಮಾಡಿ.

ಒಂದು ವೇಳೆ ನಿಮಗೆ ಉತ್ತರ ಸಿಗದೇ ಇದ್ದರೆ ನಿಮಗಾಗಿ ಇಲ್ಲಿದೆ ಚಿಕ್ಕ ಸುಳಿವು. ಈ ಚಿತ್ರವನ್ನು ಸ್ವಲ್ಪ ಝೂಮ್ ಮಾಡಿ ನೋಡಿ ಮತ್ತು ಅದರಲ್ಲಿರುವ ಮ್ಯಾಜಿಕ್ ಏನು ಎನ್ನುವುದು ನಿಮಗೆ ತಿಳಿಯುತ್ತದೆ. ಹೌದು ಚಿತ್ರದಲ್ಲಿ ದೊಡ್ಡ ಡಾಲ್ಫಿನ್ ಗಳ ಜೊತೆಗೆ ಸಣ್ಣ ಡಾಲ್ಫಿನ್ ಗಳು ಕಾಣಿಸಿಕೊಳ್ಳುತ್ತವೆ. ಅವು ಅಲ್ಲೇ ಅಕ್ಕಪಕ್ಕದಲ್ಲಿವೆ. ಬಹುಶಃ ಈಗ ನೀವು ಸರಿಯಾಗಿ ಎಣಿಸಬಹುದು. ಈಗಲೂ ಸಿಗದೇ ಹೋದರೇ ಸರಿಯಾದ ಉತ್ತರವನ್ನು ಕೊನೆಯಲ್ಲಿ ನೀಡಲಾಗಿದೆ‌ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುವವರು ಮಾತ್ರ ಸರಿಯಾದ ಉತ್ತರ ಬಹುಬೇಗ ನೀಡುವರು.

Leave a Reply

Your email address will not be published.